ವಿಮ್ಯಾಕ್ಸ್: ಬೆಕ್ಕಸ ಬೆರಗಾಗಿ ನೋಡಿ ಇದು ರಕ್ಕಸ ಬೈಕ್

ವಿಮ್ಯಾಕ್ಸ್ ಎಂಬುದು ನಿಜಾರ್ಥದಲ್ಲಿ ಮಾನೆಸ್ಟರ್ ಬೈಕ್. ಯಾಕಾಂತಿರ? ಇದು 1,679 ಸಿಸಿಯ ವಿ4 ಎಂಜಿನ್ ಹೊಂದಿದ್ದು, ಭಾರತದ ರಸ್ತೆಯಲ್ಲಿರುವ ಹೆಚ್ಚಿನ ಬೈಕ್ ಗಳಿಗೆ ಹೋಲಿಸಿದರೆ 10 ಪಟ್ಟು ದೊಡ್ಡದಾದ ಡಿಸ್ ಪ್ಲೇಸ್ ಮೆಂಟ್ ಹೊಂದಿದೆ. ವಿ-4 ಎಂದರೆ ಅನಂತ ಅಥವಾ ಅಗಾಧ ಎಂಜಿನ್ ಶಕ್ತಿಗೆ ಇನ್ನೊಂದು ಹೆಸರು ಎನ್ನಲಾಗಿದೆ. ಇದಕ್ಕಾಗಿ ಕಂಪನಿಯು ವಿಮ್ಯಾಕ್ಸ್ ಎಂಜಿನ್ ನ ಇನ್ ಪುಟ್ ಮತ್ತು ಔಟ್ ಪುಟ್ ಭಾಗದಲ್ಲಿ ಅನಂತತೆಯ ಚಿಹ್ನೆ(∞) ಬಳಸಿದೆ. ನೂತನ ಬೈಕ್ ಶಕ್ತಿ ಮತ್ತು ಸೌಂದರ್ಯವೆರಡರ ಯುಗಳಗೀತೆಯೆಂದು ಕಂಪನಿ ಪ್ರತಿಪಾದಿಸಿದೆ.
ವಿಮ್ಯಾಕ್ಸ್ ಮೊದಲ ಮಾದರಿಯನ್ನು ಕಂಪನಿ ಪರಿಚಯಿಸಿದ್ದು ಕಳೆದ 1985ರಲ್ಲಿಯೇ. ಇದರ ಮುಂದುವರೆದ ಭಾಗವೆಂಬಂತೆ ಶಕ್ತಿಯ ಚಿನ್ಹೆಯನ್ನು ಬಳಸಿಕೊಂಡು ಎರಡನೇ ತಲೆಮಾರಿನ ವಿಮ್ಯಾಕ್ಸ್ ಬೈಕನ್ನು ಕಂಪನಿ ಪರಿಚಯಿಸಿತ್ತು. ನೂತನ ವಿಮ್ಯಾಕ್ಸ್ ನ್ನು ಎಫ್ ಝಡ್ ಮತ್ತು ಎಸ್ ಝಡ್ ಸೀರಿಸ್ ಬೈಕ್ ಗಳಿಗೆ ಸರಿಸಾಟಿಯಾಗಿ ವಿನ್ಯಾಸ ಮಾಡಲಾಗಿದೆ. ಎಸ್ ಝಡ್ ಸೀರಿಸ್ ನ ಬೈಕ್ ಗಳು ಅತ್ಯಧಿಕ ವೇಗಕ್ಕೆ ಇನ್ನೊಂದು ಹೆಸರಾಗಿದೆ. ಬೆಂಗಳೂರು ಶೋರೂಂನಲ್ಲಿ ಸುಮಾರು 20 ಲಕ್ಷ ರೂ. ಆಸುಪಾಸಿನಲ್ಲಿ ವಿಮ್ಯಾಕ್ಸ್ ಬೈಕ್ ದೊರಕುತ್ತವೆ,
"ಇದು ಯಮಾಹದ ಅನ್ವೇಷಣೆ ಮತ್ತು ತಂತ್ರಜ್ಞಾನ ಶ್ರಮಕ್ಕೆ ದೊರಕಿದ ಉತ್ತರ. ಕಳೆದ 2008ರಿಂದಲೇ ಇಂತಹ ಯಮಾಹಾ ಡಿಎನ್ಎ ಎಂಬ ಬೈಕನ್ನು ಪ್ರದರ್ಶಿಸಲಾಗಿತ್ತು. ಭಾರತದ ರಸ್ತೆಯಲ್ಲಿ ಪ್ರತಿಯೊಬ್ಬರೂ ಆರ್1, ಎಂಟಿ 01 ಮತ್ತು ವಿಮ್ಯಾಕ್ಸ್ ಬೈಕ್ ಗಳನ್ನು ಇಷ್ಟಪಡುತ್ತಾರೆ. ಆರ್ 15 ಎಂಬುದು ಎಲ್ಲ ಎಫ್ ಝಡ್ ಸೀರಿಸ್ ಬೈಕ್ ಗಳಿಗೆ ದೇವರಿದ್ದಂತೆ. ನೂತನ ವಿಮ್ಯಾಕ್ಸ್ ಶಕ್ತಿಶಾಲಿ ಮತ್ತು ಆಕರ್ಷಕವಾದ ಬೈಕಾಗಿದೆ" ಎಂದು ಇಂಡಿಯಾ ಯಮಾಹಾ ಮೋಟರ್ ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಜಾನ್ ನಾಕಾಟ ಹೇಳಿದ್ದಾರೆ.
"2009ರಲ್ಲಿ ವಿಮ್ಯಾಕ್ಸ್ ಪರಿಚಯಿಸಿದ ನಂತರ ಭಾರತದ ರೈಡರ್ ಗಳಿಗೆ ಯಮಾಹದ "ಆರ್ಟ್ ಆಫ್ ಎಂಜಿನಿಯರಿಂಗ್"ನ ನಿಜವಾದ ಅನುಭವವಾಗಿದೆ. ಇತ್ತೀಚಿನ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಅತ್ಯದ್ಭುತವಾದ ಆಕ್ಸೆಲರೇಷನ್ ಅನುಭವ, ಬಾಡಿ ವರ್ಕ್, ಸ್ಟೈಲ್ ಎಲ್ಲವೂ ವಿಮ್ಯಾಕ್ಸ್ ನ್ನು ಆಕರ್ಷಕ ಸೂಪರ್ ಬೈಕಾಗಿಸಿದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications