ಹೀರೋ ಪಾಲಿಗೆ ಹೋಂಡಾ ಷೇರು: ಡೀಲ್ ಆರಂಭ!

Hero Honda
ಹೀರೋ ಹೋಂಡಾ ಮತ್ತು ಹೀರೋ ಗ್ರೂಪ್ ಡಿವೋರ್ಸ್ ಪ್ರಕ್ರಿಯೆ ಒಂದಿಷ್ಟು ಅಂತಿಮ ಹಂತಕ್ಕೆ ತಲುಪುತ್ತಿದೆ. ಹೋಂಡಾ ಮೋಟರ್ಸ್ ಲಿಮಿಟೆಡ್ ನಲ್ಲಿರುವ ಹೀರೋ ಹೋಂಡಾ ಮೋಟರ್ಸ್ ನ ಶೇ. 26ರಷ್ಟು ಪಾಲನ್ನು ಸುಮಾರು 85.1 ಕೋಟಿ ಡಾಲರ್ ಗೆ ಖರೀದಿಸಲು ಹೀರೋ ಇನ್ ವೆಸ್ಟ್ ಮೆಂಟ್ ಒಪ್ಪಿಗೆ ನೀಡಿದೆ. ಇದು ಸುಮಾರು 26 ವರ್ಷದ ಮೈತ್ರಿ ಕೊನೆಗೊಂಡ ನಂತರದ ಮೊದಲ ಡೀಲಾಗಿದೆ.

ಪ್ರತಿಷೇರಿಗೆ 739.97 ರೂ.ವಿನಂತೆ ಹೀರೋ ಇನ್ ವೆಸ್ಟ್ ಮೆಂಟ್ ಷೇರು ಖರೀದಿಸಲಾಗುವುದೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸುದ್ದಿ ಕೇಳಿ ಬೆಚ್ಚಿದ ಷೇರು ಪೇಟೆಯಲ್ಲಿ ಹೀರೋ ಹೋಂಡಾ ಷೇರುಗಳು ಶೇ. 3ರಷ್ಟು ಇಳಿಕೆ ಕಂಡಿವೆ. ಷೇರು ಅಡವಿಕ್ಕಿ ಸುಮಾರು 3,500 ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂಜಾಲ್ ಗ್ರೂಪ್ ನ ಹಣಕಾಸು ವಿಭಾಗವಾದ ಹೀರೋ ಇನ್ ವೆಸ್ಟ್ ಮೆಂಟ್ ನಿರ್ಧರಿಸಿತ್ತು. ಸಾಂಸ್ಥಿಕ ಷೇರು ಮೌಲ್ಯ 5,250 ಕೋಟಿ ರೂ. ಆಗಿದ್ದು, ಇದರಲ್ಲಿ 3,500 ಕೋಟಿ ರೂ.ನಷ್ಟು ಬಂಡವಾಳ ಸಂಗ್ರಹಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಬ್ರೈನ್ ಕ್ಯಾಪಿಟಲ್ ಮುಂತಾದ ಕಂಪನಿಗಳಿಂದ ಬಂಡವಾಳ ಹೆಚ್ಚಿಸಿಕೊಳ್ಳಲಿದೆ.

ಮಾರುಕಟ್ಟೆ ವಿಸ್ತರಣೆ ಹಾಗೂ ಹೂಡಿಕೆಯಲ್ಲಿ ಭಾರಿ ಬದಲಾವಣೆ ಕಾಣತೊಡಗಿದ ಕಾರಣ ಎರಡೂ ಕಂಪೆನಿಗಳಲ್ಲಿ ವಿರಸ ಹೆಚ್ಚಾಗಿತ್ತು. ಸುಮಾರು 26 ವರ್ಷಗಳ ಮೈತ್ರಿಯಲ್ಲಿ ದೇಶದ ರಸ್ತೆಗೆ ಕಂಪನಿಗಳೆರಡೂ ವಿನೂತನ, ಆಕರ್ಷಕ ಬೈಕ್ ಮತ್ತು ಸ್ಕೂಟರೇಟ್ ಗಳನ್ನು ಪರಿಚಯಿಸಿತ್ತು.

ಜೊತೆಯಾಗಿದ್ದಾಗಿನ ನೆನಪು
* 1983- ಜಪಾನ್ ನ ಹೋಂಡಾ ಮೋಟರ್ ಕಾರ್ಪೊರೇಷನ್ ಲಿಮಿಟೆಡ್ ನೊಂದಿಗೆ ಹೀರೋ ಗ್ರೂಪ್ ಮೈತ್ರಿ.
* 1985- ಮೊದಲ ಬೈಕ್ ಸಿಡಿ100 ರಸ್ತೆಗೆ
* 1989- ಹೊಸ ಬೈಕ್ ಸ್ಲೀಕ್ ರಸ್ತೆಗೆ

* 1991- ಸಿಡಿ 100 ಎಸ್ಎಸ್
* 1994- ಹೊಸ ಮಾಡೆಲ್ ಸ್ಪ್ಲೆಂಡರ್ ಬೈಕ್ ರಸ್ತೆಗೆ
* 1997- ಹೊಸ ಬೈಕ್ ಸಿಬಿಝಡ್ ಅನಾವರಣ

* 2000- ಸ್ಪ್ಲೆಂಡರ್ ಗೆ ವಿಶ್ವದಲ್ಲಿ ಅತ್ಯಧಿಕ ಮಾರಾಟದ ನಂ-1 ಬೈಕೆಂಬ ಪಟ್ಟ
* 2001- ಹೊಸ ಬೈಕ್ "ಫ್ಯಾಷನ್" ಮತ್ತು "ಜಾಯ್" ರಸ್ತೆಗೆ.
* 2002- ಹೊಸ ಬೈಕ್ "ಡಾನ್" ಮತ್ತು ಆಂಬಿಷನ್" ಅನಾವರಣ.
* 2002- ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ಹರ್ಬಜನ್ ಸಿಂಗ್ ಮತ್ತು ಜಹೀರ್ ಖಾನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ

* 2003- 70 ಲಕ್ಷ ಬೈಕ್ ಮಾರಾಟ ಮಾಡಿದ ಮೊದಲ ಭಾರತದ ಕಂಪನಿಯೆಂಬ ದಾಖಲೆ
* 2001,2002 ಮತ್ತು 2003ರಲ್ಲಿ ಸ್ಪೆಂಡರ್ ಸತತ ಮೂರನೇ ಬಾರಿ ವಿಶ್ವದ ಅತ್ಯಧಿಕ ಮಾರಾಟದ ಬೈಕೆಂಬ ದಾಖಲೆ
* 2003- ಹೊಸ ಬೈಕ್ ಗಳಾದ "ಸಿಡಿ ಡಾನ್", "ಸ್ಪ್ಲೆಂಡರ್ ಪ್ಲಸ್", "ಫ್ಯಾಷನ್ ಪ್ಲಸ್" ಮತ್ತು "ಕರಿಜ್ಮಾ" ಬೈಕ್ ಗಳ ಅನಾವರಣ.

* 2004- ಹೊಸ ಬೈಕ್ ಮಾದರಿ "ಆಂಬಿಷನ್ 135" ರಸ್ತೆಗೆ.
* 2004- ಕಂಪನಿಗೆ ಒಂದು ವರ್ಷದಲ್ಲಿ 2 ಲಕ್ಷ ಬೈಕ್ ಮಾರಾಟದ ಗರಿ, ಒಟ್ಟಾರೆ ಸ್ಪ್ಲೆಂಡರ್ ಮಾರಾಟ 50 ಲಕ್ಷ ಕ್ಕಿಂತಲೂ ಹೆಚ್ಚು, ಕೋಟಿ ದಾಟಿದ ಒಟ್ಟು ಬೈಕ್ ಮಾರಾಟ, ಸಿಬಿಝಡ್ ಅಪ್ ಗ್ರೇಡ್ ಆವೃತ್ತಿ ರಸ್ತೆಗೆ. ಕಂಪನಿಗಳ ಟೆಕ್ನಿಕಲ್ ಒಪ್ಪಂದ ರಿನಿವಲ್
* 2005- ಮತ್ತೆ ವಿಶ್ವದ ನಂಬರ್ ಒನ್ ಬೈಕ್ ಮಾರಾಟದ ಗರಿ.
* 2005- ಹೊಸ ಬೈಕ್ ಮಾದರಿಗಳಾದ "ಸೂಪರ್ ಸ್ಪ್ಲೆಂಡರ್", "ಸಿಡಿ ಡಿಲಕ್ಸ್" "ಗ್ಲಾಮರ್" ಮತ್ತು "ಅಚಿವರ್" ರಸ್ತೆಗೆ.
* 2005- ಕಂಪನಿಯ ಮೊದಲ ಸ್ಕೂಟರ್ ಮಾಡೆಲ್- ಹೀರೋ ಹೋಂಡಾ "ಪ್ಲೆಷರ್" ರಸ್ತೆಗೆ

* 2006- ಸತತ 5ನೇ ಬಾರಿ ಹೀರೋ ಹೋಂಡಾಕ್ಕೆ ವಿಶ್ವದ ನಂಬರ್ ಒನ್ ಬೈಕ್ ಕಂಪನಿ ಪಟ್ಟ, ಒಂದುವರೆ ಕೋಟಿ ಬೈಕ್ ಉತ್ಪಾದನೆ
* 2007- ಸತತ ಆರನೇ ಬಾರಿ ನಂಬರ್ ಒನ್ ಪಟ್ಟ, 2 ಕೋಟಿಗೆ ಮುಟ್ಟಿದ ಬೈಕ್ ಉತ್ಪಾದನೆ
* 2007- ಹೊಸ ಬೈಕ್ ಗಳಾದ "ಸ್ಪ್ಲೆಂಡರ್ ಎನ್ಎಕ್ಸ್ ಜಿ", "ಸಿಡಿ ಡಿಲಕ್ಸ್" "ಫ್ಯಾಷನ್ ಪ್ಲಸ್" ಮತ್ತು "ಹಂಕ್" ರಸ್ತೆಗೆ

* 2008- ಹೀರೋ ಹೋಂಡಾ ಪ್ಲೆಷರ್ ರಸ್ತೆಗೆ, ಹೊಸ ಬೈಕ್ ಗಳಾದ ಫ್ಯಾಷನ್ ಪ್ರೊ" , ಸಿಬಿಝಡ್ ಎಕ್ಸ್ ಟ್ರೀಮ್ ರಸ್ತೆಗೆ, ಸ್ಪ್ಲೆಂಡರ್ ಎನ್ಎಕ್ಸ್ ಜಿ ಮತ್ತು ಸಿಡಿ ಡಿಲಕ್ಸ್ ಪರಿಷ್ಕ್ರತ ಆವೃತ್ತಿ, ಎರಡುವರೆ ಕೋಟಿಗೆ ಮುಟ್ಟಿದ ಬೈಕ್ ಉತ್ಪಾದನೆ, ಹೊಸ ಬೈಕ್ ಗಳಾದ "ಗ್ಲಾಮರ್ ಮತ್ತು ಗ್ಲಾಮರ್ ಫಿ" ರಸ್ತೆಗೆ
* 2009- ಲಿಮಿಟೆಡ್ ಅಡಿಷನ್ ಹಂಕ್ ರಸ್ತೆಗೆ, ಹೊಸ ಬೈಕ್ ಕರಿಜ್ಮಾ ಝಡ್ಎಂಆರ್ ಅನಾವರಣ, ಸಿಲ್ವರ್ ಜುಬ್ಲಿ ಸಂಭ್ರಮ
* 2010- ಹೀರೋ ಹೋಂಡಾ ಮತ್ತು ಹೀರೋ ಗ್ರೂಪ್ ಮೈತ್ರಿ ಅಂತ್ಯ

More from DriveSpark

Article Published On: Wednesday, March 9, 2011, 11:31 [IST]
English summary
As the days for the formal split between Hero group and Honda Motors from Hero Honda Motors, Hero group is busy settling the score by procuring funds for the purchase of 26% stake from the latter. The deal will involve Rs3841.83 crore for Hero Group which the company plans to derive from fund of private equity firms like Bain Capital and Lathe Investment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+