ಹೊಸ ಲೊಗೊ, ಐಡೆಂಟೆಟಿ ಹುಡುಕಾಟದಲ್ಲಿ ಹೀರೋ ಹೋಂಡಾ

ವೋಲ್ಫ್ ಒಲಿನ್ಸ್ ಗೂ ಭಾರತಕ್ಕೂ ಒಂದಿಷ್ಟು ಸಂಬಂಧವಿದೆ. ಟಾಟಾ ಡೊಕೊಮೊ ಮತ್ತು ಏರ್ ಟೆಲ್, ಅಶೋಕ್ ಲೇಲ್ಯಾಂಡ್ ಮತ್ತು ಟಾಟಾ ಬ್ರಾಂಡ್ ವಿನ್ಯಾಸದಲ್ಲೂ ಈ ಕಂಪನಿಯ ಪಾತ್ರವಿದೆಯೆಂದು ಹೇಳಲಾಗಿದೆ. ಜಾಗತಿಕವಾಗಿ ಹೇಳಬೇಕಾದರೆ ಟೆಲಿನಾರ್, ಆದಿದಾಸ್, ಜಿಇ, ಮೆಕ್ ಡೊನಾಲ್ಡ್ ಮುಂತಾದವುಗಳ ಬ್ರಾಂಡ್ ವಿನ್ಯಾಸಕ್ಕೂ ಒಲಿನ್ಸ್ ಸಹಕರಿಸಿದೆ.
"ಭವಿಷ್ಯಕ್ಕಾಗಿ ಕಂಪನಿಯು ಬ್ರಾಂಡ್ ವಿನ್ಯಾಸವನ್ನು ಬದಲಾಯಿಸ ಹೊರಟಿದೆ" ಎಂದು ಎಚ್ಎಚ್ಎಂಎಲ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪವನ್ ಮುಂಜಾಲ್ ಹೇಳಿದ್ದಾರೆ. ಜಪಾನಿನ ಹೋಂಡಾ ಮೋಟರ್ ಕಾರ್ಪೊರೇಷನ್ ಮತ್ತು ಹೀರೋ ಗ್ರೂಪ್ ಮೈತ್ರಿ ಕಳೆದ ಡಿಸೆಂಬರ್ ನಲ್ಲಿ ಕೊನೆಗೊಂಡಿತ್ತು. ಹೀರೋ ಹೋಂಡಾ ಬ್ರಾಂಡ್ ಮೂಲಕ 2014ರವರೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕು ಕಂಪನಿಗಿದೆ. ಜಂಟಿ ಉದ್ಯಮದಿಂದ ಹೋಂಡಾದ ಶೇ. 26ರಷ್ಟು ಪಾಲನ್ನು ಸುಮಾರು 3,841 ಕೋಟಿ ರೂ.ಗೆ ಖರೀದಿಸಲು ಹೀರೋ ಇನ್ ವೆಸ್ಟ್ ಮೆಂಟ್ಸ್ ಪ್ರೈವೇಟ್ ಲಿಮಿಟೆಡ್(ಎಚ್ಐಪಿಎಲ್) ಸಮ್ಮತಿಸಿದೆ.


Click it and Unblock the Notifications








