ಹೀರೋ ಮತ್ತು ಬಜಾಜ್ ನಡುವೆ ಪ್ರೀಮಿಯಂ ಫೈಟ್

Premium Bike
ಪ್ರೀಮಿಯಂ ಬೈಕ್ ಸೆಗ್ಮೆಂಟ್ ನಲ್ಲಿ ದೇಶದ ಪ್ರಮುಖ ಬೈಕ್ ಕಂಪನಿಗಳ ನಡುವೆ ಪೈಪೋಟಿ ಆರಂಭವಾಗಿದೆ. ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಹೀರೋ ಹೋಂಡಾ ಮತ್ತು ಬಜಾಜ್ ಆಟೋ ಪ್ರಮುಖ ಪ್ರತಿಸ್ಪರ್ಧಿಗಳು. ಇವೆರಡು ಕಂಪನಿಗಳು ದುಬಾರಿ ಬೈಕ್ ಸೆಗ್ಮೆಂಟ್ ನಲ್ಲಿ ಪಾಲು ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿವೆ.

ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಬಜಾಜ್ ಮೊದಲ ಸ್ಥಾನದತ್ತ ಮುನ್ನುಗುತ್ತಿದೆ. ಇದಕ್ಕೆ ಪೂರಕವಾಗಿ ಹೀರೋ ಹೋಂಡಾ ಪಾಲು ಶೇ. 54ಕ್ಕೆ ಕುಸಿದಿದೆ. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಹೀರೋ ಪಾಲು ಶೇ. 59ರಷ್ಟಿತ್ತು ಎಂದು ಎಸ್ಐಎಎಂ ವರದಿ ಹೇಳಿದೆ. ಪ್ರೀಮಿಯಂ ಫೈಟ್ ನಲ್ಲಿ ಬಜಾಜ್ ನಿಧಾನವಾಗಿ ಹೀರೋ ಹೋಂಡಾವನ್ನು ಹಿಂದಿಕ್ಕುತ್ತಿದೆ. ಬಜಾಜ್ ಪ್ಲಾಟೀನಾ ಮತ್ತು ಪ್ರೀಮಿಯಂ ಪಲ್ಸರ್ ನಡುವಿನ ಅನುಪಾತವೀಗ 1:8ರಷ್ಟಿದೆ.

ಮತ್ತೆ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲು ಹೀರೋ ಹೋಂಡಾ ಪ್ರಯತ್ನಿಸುತ್ತಿದೆ. ಪ್ರೀಮಿಯಂ ಬೈಕ್ ಮಾರಾಟಕ್ಕಾಗಿ ಹೀರೋ ಹೋಂಡಾ ವಿಶೇಷ ಡೀಲರ್ ಝೋನ್ ಅಳವಡಿಸಲು ಆರಂಭಿಸಿದೆ. ಇಷ್ಟೇ ಅಲ್ಲ. ದ್ವಿಚಕ್ರ ವಾಹನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಸೆಗ್ಮೆಂಟ್ ಗೂ ಹೋಂಡಾ ಪ್ರವೇಶಿಸಿದೆ.

ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ನಿಂದ ಲಾಭ ಪಡೆಯಲು ಉದ್ದೇಶಿಸಿದ ಕಂಪನಿ ಕರಿಜ್ಮಾ ಝಡ್ಎಂಆರ್ ಜಾಹೀರಾತು ಅಭಿಯಾನ ಆರಂಭಿಸಿದೆ. ಜೊತೆಗೆ ಸ್ಪ್ಲೆಂಡರ್ ಪ್ರೊ ಮತ್ತು ಫ್ಯಾಷನ್ ಪ್ರೊ ಮುಂತಾದ ಬೈಕ್ ಗಳಿಗೆ ಹಲವು ಫೀಚರ್ಸ್ ಗಳನ್ನು ಜೋಡಿಸುತ್ತಿದೆ. ಅಂದರೆ ಕಿಕ್ ಸ್ಟಾರ್ಟ್ ಗೆ ಬದಲಾಗಿ ಎಲೆಕ್ಟ್ರಿಕ್ ಸ್ಟಾರ್ಟ್, ಸ್ಪೋಕ್ ವೀಲ್ ಗೆ ಬದಲಾಗಿ ಮಗ್ ವೀಲ್ ಇತ್ಯಾದಿ ನೂತನ ಫೀಚರ್ ಗಳನ್ನು ಅಳವಡಿಸುತ್ತಿದೆ.

More from DriveSpark

Article Published On: Thursday, March 31, 2011, 11:53 [IST]
English summary
The rival two wheeler makers in India, Hero Honda and Bajaj Auto are in the main foray to intensify their presence in the premium segment. Both are burning the midnight oil for devising the strategies to fill in the vacuum in the segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+