ಕವಾಸಕಿ ನಿಂಜಾ ಸಾವಿರ ಸಿಸಿ ಸರದಾರ

ಕವಾಸಕಿ ನಿಂಜಾ 1000ಸಿಸಿ ದೊಡ್ಡಗಾತ್ರದ ಬೈಕ್. ಇದರಲ್ಲಿ ಆರಾಮದಾಯಕ, ಐಷಾರಾಮಿ ರೈಡಿಗೆ ಸೂಕ್ತವಾದ ಸಾಕಷ್ಟು ಫೀಚರ್ ಗಳಿವೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಸ್ಪೆನ್ಷನ್ ಇದರ ವಿಶೇಷ. ಇದು ಕವಾಸಕಿ ಇತ್ತೀಚೆಗೆ ಹೊರತಂದ ಝಡ್ಎಕ್ಸ್-10ಆರ್ ಬೈಕಿಗಿಂತ ಶೇಕಡ 65ರಷ್ಟು ಇದು ಶಕ್ತಿಶಾಲಿಯಾಗಿದೆ.
ಯಾವುದೇ ಅಡೆತಡೆಯಿಲ್ಲದ ರಸ್ತೆಯಲ್ಲಿ ಇದರಲ್ಲಿ ಸವಾರಿ ಮಾಡುವುದು ಸೂಪರ್ಬ್ ಅನುಭವ. ಈ ಬೈಕನ್ನು ಕೆಟ್ಟ ರಸ್ತೆಯಲ್ಲೂ ನಾಜೂಕಾಗಿ ರೈಡ್ ಮಾಡಬಹುದು. ಇದರಲ್ಲಿರುವ ವಿಶೇಷ ತಂತ್ರಜ್ಞಾನದ ಬ್ರೇಕ್ ವ್ಯವಸ್ಥೆಗಳು, ಷಾಕ್ ಅಬ್ಸಾರ್ಬರ್ ಗಳು ಅನನ್ಯ ರೈಡಿಂಗ್ ಅನುಭವವನ್ನು ಹೆಚ್ಚಿಸಿವೆ.
ಕವಾಸಕಿ ನಿಂಜಾ 1000 ಸಿಸಿ ಬೈಕ್ ಇನ್ ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದರಲ್ಲಿ ಯಾವುದೇ ವೈಬ್ರೆಷನ್ ಅನುಭವ ಆಗುವುದಿಲ್ಲವೆಂದು ರೈಡ್ ಮಾಡಿದವರ ಅಭಿಪ್ರಾಯ. ಸದ್ಯ ಬೆಂಗಳೂರು ಮುಂತಾದ ನಗರಗಳಲ್ಲಿ ಸೂಪರ್ ಬೈಕ್ ಡೀಲರ್ ಗಳು ಸಾಕಷ್ಟಿದ್ದಾರೆ. ಆದರೆ ಬಿಡಿಭಾಗ ಆಮದುಮಾಡಿಕೊಂಡು ಜೋಡಿಸುವ ಇಂತಹ ಬೈಕ್ ಮೇಲೆ ತುಸು ನಿಗಾ ಇಡುವುದು ಒಳ್ಳೆಯದು. ತೆರಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿದರೆ ಕಷ್ಟವಾದೀತು.
ಟೆಕ್ ಮಾಹಿತಿ
ಎಂಜಿನ್: 4 ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಪ್ರತಿಸಿಲಿಂಡರ್ ಗೆ ನಾಲ್ಕು ಕವಾಟ, ಇನ್ ಲೈನ್- ಫೋರ್ ಸಿಲಿಂಡರ್
ಸಿಸಿ ಪವರ್: 1,043 ಸಿಸಿ
ಇಗ್ನಿಷನ್: ಡಿಜಿಟಲ್ ಅಡ್ವಾನ್ಸ್ ಸೌಲಭ್ಯವಿರುವ ಟಿಸಿಬಿಐ ಇಗ್ನಿಷನ್
ಗೇರ್: 6 ಸ್ಪೀಡ್
ಎದುರಿನ ಬ್ರೇಕ್: 4 ಪಿಸ್ಟನ್ ಕ್ಯಾಲಿಪರ್ ನ ಡ್ಯೂಯಲ್ 300ಮಿ.ಮಿ ಪೀಟಲ್ ಬ್ರೇಕ್
ಹಿಂದಿನ ಬ್ರೇಕ್: ಒಂದು ಪಿಸ್ಟನ್ ಹೊಂದಿರುವ ಸಿಂಗಲ್ 250ಮಿ.ಮಿ. ಪೀಟಲ್ ಬ್ರೇಕ್
ಇಂಧನ ಟ್ಯಾಂಕ್ ಸಾಮರ್ಥ್ಯ: ಸುಮಾರು 18.92 ಲೀಟರ್(5 ಗ್ಯಾಲನ್)


Click it and Unblock the Notifications








