ಹೊಸ ಬಾಕ್ಸರ್: ದುರ್ಗಮ ರಸ್ತೆಗೂ ಓಕೆ ಗುರು

ನೂತನ ಬಜಾಜ್ ಬಾಕ್ಸರ್ 150 ಬೈಕ್ ಯೆಜ್ಡಿ, ರಾಜ್ ದೂತ್ ಬೈಕ್ ಗಳಂತೆ ಗ್ರಾಮೀಣ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡಿದೆ. ಗ್ರಾಮೀಣ ರಸ್ತೆಗೆ ಸೂಕ್ತವಾಗಿ ಎಂಜಿನಿನಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಪನಿ ಮಾಡಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಕಠಿಣ ಪ್ರದೇಶದಲ್ಲೂ ಹೆಚ್ಚು ಒತ್ತಡವಿಲ್ಲದೇ ಸವಾರಿ ಮಾಡಬಹುದಾಗಿದೆ. ನೂತನ ಬೈಕಿನಲ್ಲಿ ಎಲೆಕ್ಟ್ರಾನಿಕ್ ಸ್ಟಾರ್ಟರ್ ಸಿಸ್ಟಮ್ ಇದೆ.
ನೂತನ ಬಾಕ್ಸರಿನ ಮುಂಭಾಗಕ್ಕೆ ಕಂಪನಿಯು ಜೋಡಿ ಫೋರ್ಕ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗಕ್ಕೆ ಅವಳಿ ಷಾಕ್ ಅಬ್ಸಾರ್ಬರ್ ಅಳವಡಿಸಿದೆ. ಕಂಪನಿಯ ಅಗ್ಗದ ಬಾಕ್ಸರ್ ಬೈಕಿನಲ್ಲಿ ಯಾವೆಲ್ಲ ವಿಶೇಷತೆಗಳಿವೆ?
ಎಂಜಿನ್: ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೋಲ್ಡ್
ಗರಿಷ್ಠ ಆರ್ ಪಿಎಂ ಪವರ್: 12.01 @ 7500
ಗರಿಷ್ಠ ಟಾರ್ಕ್: 12.26 @ 5000
ಸ್ಟಾರ್ಟ್: ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್
ಸಸ್ಪೆನ್ಷನ್: 125mm ಫೋರ್ಕ್ ಟ್ರಾವೆಲ್ ಟೆಲಿಸ್ಕೋಪಿಕ್
ಬ್ರೇಕ್: 130mm ಡ್ರಮ್ ಬ್ರೇಕ್
ತೂಕ: 123 ಕೆ.ಜಿ.


Click it and Unblock the Notifications








