ಕಳ್ಳರು ಪ್ರಧಾನಿ ಕ್ಯಾಮರಾನ್ ಸೈಕಲನ್ನೇ ಬಿಟ್ಟಿರಲಿಲ್ಲ!

ಇತ್ತೀಚೆಗೆ ಆಸ್ತಿ ಘೋಷಣೆಯಲ್ಲಿ ಪಿ. ಚಿದಂಬರಂ ಬಳಿ ಒಂದು ಬೈಸಿಕಲ್ ಇರುವುದು ತಿಳಿದು ಬಂದಿದೆ. ಅದಕ್ಕೆ ಅವರು ಪಾವತಿಸಿದ್ದು 1,239 ರುಪಾಯಿ. ಅವರು ನಿತ್ಯ ಬೈಸಿಕಲ್ ಬಳಸುವ ಕುರಿತು ಮಾಹಿತಿಯಿಲ್ಲ. ಜೊತೆಗೆ ಅವರಲ್ಲಿ ಫೋರ್ಡ್ ಫಿಯೆಸ್ಟಾ ಮತ್ತು ಒಂದು ಫೋಕ್ಸ್ ವ್ಯಾಗನ್ ಕಾರಿದೆ.
ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಮತ್ತು ಹಾಲಿ ಪ್ರಧಾನಿ ಡೇವಿಡ್ ಕ್ಯಾಮರಾನ್ ನಿಮಗೆ ಗೊತ್ತಿರಬೇಕು. ಅವರು ನಿತ್ಯ ಬಳಕೆಗೆ ಬೈಸಿಕಲ್ ಬಳಸುವ ಮೂಲಕ ಸಾಕಷ್ಟು ಸಾಕಷ್ಟು ಸುದ್ದಿ ಮಾಡಿದ್ದಾರೆ.
ವಿಟ್ಟೋರಿಯೊ ಡೆಸಿಕಾ ನಿರ್ದೇಶಿಸಿದ ಜನಪ್ರಿಯ ಸಿನಿಮಾ ಬೈಸಿಕಲ್ ಥೀವ್ಸ್. ಅದರಲ್ಲಿ ಬೈಸಿಕಲ್ ಕಳೆದುಕೊಂಡ ಸಾಮಾನ್ಯ ವ್ಯಕ್ತಿ ಅನುಭವಿಸುವ ಸಂಕಷ್ಟ ಹೃದಯ ತಟ್ಟುತ್ತದೆ. ಆದರೆ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥರಾಗಿದ್ದ ಡೇವಿಡ್ ಕ್ಯಾಮರಾನ್ ಬೈಸಿಕಲ್ ಕೂಡ ಹಲವು ಬಾರಿ ಕಳ್ಳತನವಾಗಿದೆ ಅಂದ್ರೆ ನಂಬಲೇಬೇಕು.
2008ರಲ್ಲಿ ಅವರು ಶಾಪಿಂಗ್ ಮುಗಿಸಿ ಬಂದ ನಂತರ ಅವರ ಬೈಸಿಕಲ್ ಕಾಣೆಯಾಗಿತ್ತು. ಯುವಕರ ಗ್ಯಾಂಗೊಂದು ಅವರ ಬೈಸಿಕಲ್ ಕಳ್ಳತನ ಮಾಡಿತ್ತು. ಮತ್ತೊಮ್ಮೆ ಮನೆ ಸಮೀಪದಲ್ಲಿ ಸೈಕಲ್ ನಿಲ್ಲಿಸಿ ಹೋದಾಗ ಅಲ್ಲಿಂದಲೂ ಬೈಸಿಕಲ್ ಕಳ್ಳತನವಾಗಿತ್ತು.
ಡೇವಿಡ್ ಕ್ಯಾಮರಾನ್ ಒಮ್ಮೆ ಬೈಸಿಕಲ್ ಸವಾರಿ ಮಾಡುತ್ತ ಟ್ರಾಫಿಕ್ ಕೆಂಪು ಸಿಗ್ನಲ್ ದಾಟಿ ಬಿಟ್ಟರು. ಬೆಂಗಳೂರಿನಲ್ಲಾದರೆ ಬೈಸಿಕಲ್ ಸವಾರರು ಟ್ರಾಫಿಕ್ ರೂಲ್ಸ್ ಪಾಲಿಸೋದಿಲ್ಲ. ಟ್ರಾಫಿಕ್ ಸಿಗ್ನಲ್ ನಿಯಮ ಉಲ್ಲಂಘಿಸಿದರೂ ದೊಡ್ಡ ವಿಷಯವಾಗೋದಿಲ್ಲ. ಆದರೆ ಡೇವಿಡ್ ಕ್ಯಾಮರಾನ್ ಒಮ್ಮೆ(2008ರಲ್ಲಿ) ಕೆಂಪು ಸಿಗ್ನಲ್ ದಾಟಿ ಸಂಚಾರಿ ನಿಯಮ ಉಲ್ಲಂಘಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅವರು ತನ್ನ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೂಡ ಕೇಳಿದ್ದರು.
ಮತ್ತೊಮ್ಮೆ ಡೇವಿಡ್ ಕ್ಯಾಮರಾನ್ ಸುರಕ್ಷತೆಯ ಹೆಲ್ಮೆಟ್ ಹಾಕದೇ ಬೈಸಿಕಲ್ ಸವಾರಿ ಮಾಡುತ್ತಿದ್ದರು. ಇದು ಟ್ರಾಫಿಕ್ ಕ್ಯಾಮರಾದಲ್ಲಿ ದಾಖಲಾಗಿತ್ತು. ಇವರು ಕೆಟ್ಟ ಮಾದರಿಯಾಗುತ್ತಿದ್ದಾರೆ ಎಂದು ಈ ಕುರಿತು ವ್ಯಾಪಕ ಟೀಕೆಯೂ ಕೇಳಿಬಂದಿತ್ತು. ಅವರು ಪ್ರಧಾನಿಯಾಗಿ ಆಯ್ಕೆಗೊಂಡ ನಂತರ ಯಾವುದೇ ಕಳ್ಳರಿಗೆ ಅವರ ಸೈಕಲ್ ಕದಿಯೋ ಗುಂಡಿಗೆ ಇರಲಿಲ್ಲ. ಕ್ಯಾಮರಾನ್ ಬೈಸಿಕಲ್ ಸವಾರಿಯಲ್ಲಿ ಇಂಟ್ರೆಸ್ಟಿಂಗ್ ಸುದ್ದಿಗಳು ಸಾಕಷ್ಟಿವೆ. ಸದ್ಯಕ್ಕೆ ಇಷ್ಟು ಸಾಕು.


Click it and Unblock the Notifications








