ಮಾರುತಿ 800 ಹೆಮ್ಮೆಯ ಮಾಲಿಕ ಪ್ರಧಾನಿ ಸಿಂಗ್!

ಆದರೆ ಕೇಂದ್ರ ಮಂತ್ರಿಗಳಲ್ಲಿರುವ ಕಾರುಗಳು ಸದಾ ರಸ್ತೆಯಲ್ಲಿ ನೋಡುವ ಕಾರುಗಳೇ. ಹೆಚ್ಚೆಂದರೆ ಹತ್ತಿಪ್ಪತ್ತು ಲಕ್ಷ ರು.ನ ಕಾರಿದೆ ಅಷ್ಟೇ. ಹಾಗಂತ ಅವರೆಲ್ಲ ಇತ್ತೀಚೆಗೆ ಆಸ್ತಿ ಘೋಷಣೆಯಲ್ಲಿ ತಿಳಿಸಿದ್ದಾರೆ. ಇವರಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕಾರೊಂದು ನಮ್ಮಲ್ಲಿ ಅಚ್ಚರಿ ಹುಟ್ಟಿಸುತ್ತದೆ.
ಯಾಕೆಂದರೆ ಅವರ ಬಳಿ ಇರೋದು ಮಾರುತಿ 800 ಕಾರು ಮಾತ್ರ. ಮನಮೋಹನ್ ಸಿಂಗ್ ಬಳಿ 1996ರ ಮಾರುತಿ 800 ಕಾರಿದೆ. ಆದರೆ ಪ್ರಧಾನಿಯಾಗಿ ಅವರು ಬಳಸುವುದು ಕಚೇರಿಯ ಬಿಎಂಡಬ್ಲ್ಯು 7 ಸೀರಿಸ್ ಕಾರು. ಪ್ರಧಾನಿ ಬಳಿಯಿರುವ ಮಾರುತಿ 800 ಮಾರುಕಟ್ಟೆ ಮೌಲ್ಯ ಈಗ 27,500 ರು.
ಮತ್ತೊಬ್ಬರು ನಮ್ಮ ರಕ್ಷಣಾ ಸಚಿವರಾದ ಎಕೆ ಆಂಟನಿ. ಅವರ ಸರಳ ಬದುಕಿಗೆ ಅತ್ಯುತ್ತಮ ನಿದರ್ಶನ ಇಲ್ಲಿದೆ. ಅವರು ಬಳಸುವುದು ಸೆಕೆಂಡ್ ಹ್ಯಾಂಡ್ ಕಾರುಗಳನ್ನು. ಅವರ ಹೆಂಡತಿ ಬಳಿ ಮಾರುತಿ ಸುಜುಕಿ ವ್ಯಾಗನಾರ್ ಕಾರಿದೆ.
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಬಳಿ 2000ದ ಫೋರ್ಡ್ ಐಕಾನ್ ಕಾರಿದೆ. ಹಳೆಯ ಐಕಾನ್ ಕಾರಿಗೆ ಈಗ ಹೆಚ್ಚಿದೆಂದರೆ 1.06 ಲಕ್ಷ ರು. ಮಾರುಕಟ್ಟೆ ಮೌಲ್ಯವಿದೆ. ಜೈರಾಮ್ ಬಳಿ ಮಾರುತಿ ಝೆನ್ ಕಾರಿದೆಯಂತೆ. ನಗರ ಅಭಿವೃದ್ಧಿ ವಿಭಾಗದ ಮಂತ್ರಿ ಕಮಲ್ ನಾಥ್ ಬಳಿಯಿರೋದು ನ್ಯಾನೊ ಕಾರು ಮತ್ತು ಅಂಬಾಸಡರ್ ಕಾರಂತೆ.
ಇನ್ನು ಯಾರ ಬಳಿ ಯಾವ ಕಾರಿದೆ. ಅದು ಇನ್ನಷ್ಟು ಇಂಟ್ರೆಸ್ಟಿಂಗ್.


Click it and Unblock the Notifications








