ಬೆಂಗಳೂರು ಸ್ಟೈಲ್ ಬೈಕಿಂಗ್ ಝಲಕ್

By * ಪಿಸಿ

bike stunt
ನಾವು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ರೆಲಿಯೊ ಬೈಕ್ ಸ್ಟಂಟ್ ಸ್ಥಳಕ್ಕೆ ಹದಿನೈದು ನಿಮಿಷ ಮುಂಚಿತವಾಗಿಯೇ ತಲುಪಿದೆವು. ಕೃತಕ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿ ಅದರ ಅಕ್ಕಪಕ್ಕದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿತ್ತು. ಅದಾಗಲೇ ಜನರು ತುಂಬಿ ತುಳುಕುತ್ತಿದ್ದರು.

ಆಕರ್ಷಕ ಹಿನ್ನಲೆ ಸಂಗೀತ ಮತ್ತು ನಿರೂಪಕನ ನವಿರು ಮಾತಿನಿಂದ ಸ್ಟಂಟ್ ಅಂಗಣ ತುಂಬಿತ್ತು. ಕಮಾನ್ ಬ್ಯಾಂಗಳೂರು ಅಂತ ಕಿರುಚಿದ ನಿರೂಪಕ ನಂಬರ್ ಎಣಿಸತೊಡಗಿದ. ಪ್ರೇಕ್ಷಕರು ಧ್ವನಿಗೂಡಿಸಿದರು. 10.... ನೈನ್...8..7...6.....5.. ಫೋರ್, ತ್ರಿ... ಟು...

ಒನ್ ಅಂತ ಹೇಳುವುದಕ್ಕೂ ಹಳೆಯ ಬಜಾಜ್ ಲ್ಯಾಂಬ್ರೆಟ್ ಸ್ಕೂಟರ್ ಒಂದು ಸುತ್ತು ಹೊಡೆದು ತಿರುಗಿತು. ಮತ್ತೆ ಕೇಳಿದ್ದು ಕಿವಿ ನಿಮಿರಿಸುವ ವ್ರೋಂ ವ್ರೋ ಸದ್ದು. ಆ ಅಂಗಣದಲ್ಲಿ ಹಲವು ಬೈಕ್ ಮತ್ತು ಒಂದು ಸ್ಕೂಟಿಯ ಸಾಹಸ ಪ್ರದರ್ಶನ.

ಮತ್ತೆ ಪಲ್ಸರ್, ಯಮಹಾ ಸೇರಿದಂತೆ ಹಲವಾರು ಬೈಕುಗಳ ಪ್ರದರ್ಶನ ಚಿತಾಕರ್ಷಕವಾಗಿತ್ತು. ಅದರಲ್ಲಿ ಹರೆಯದ ಹುಡುಗನೊಬ್ಬ ಮುಸುಡು ಕಿತ್ತೋಗಿರುವ ಸ್ಕೋಟಿಯೊಂದರಲ್ಲಿ ಪ್ರದರ್ಶಿಸಿದ ಸಾಹಸ ನಯನ ಮನೋಹರ. ಮತ್ತೆ ಸುಮಾರು ಒಂದು ಗಂಟೆ ಕಾಲ ಎಲ್ಲರ ಕಣ್ಣು ಕಾಂಕ್ರಿಟ್ ರಸ್ತೆಯ ಮೇಲಿತ್ತು.

ವೇಗವಾಗಿ ಸಾಗಿ ಎದುರು ನಿಂತವನ ಹತ್ತಿರ ಬ್ರೇಕ್ ಹಾಕಿ ಒಂದು ಚಕ್ರದಲ್ಲಿ ತಿರುಗುವುದು, ಹಿಂದಿನ ಮತ್ತು ಮಂದಿನ ಚಕ್ರದ ಸವಾರಿ. ಸೀಮಿತ ಸ್ಥಳದಲ್ಲಿ ಬೈಕನ್ನು ನೆಲಚಕ್ರದಂತೆ ತಿರುಗಿಸುವುದು, ಎರಡು ಮೂರು ಜನರನ್ನು ಕೂರಿಸಿಕೊಂಡು ಸ್ಟಂಟ್ ಮಾಡುವುದು ಎಲ್ಲವೂ ಆಕರ್ಷಕ.

ರೈಡರ್ ಸ್ಟಾರ್ಟ್ ಮಾಡಿ ಅಡ್ಡಹಾಕಿ ಹೋದ ಬೈಕುಗಳು ಸುತ್ತಲೂ ತಿರುಗುತ್ತಿದ್ದವು. ಅದರ ಮುಂದೆ ಬೈಕ್ ಸ್ಟಂಟರ್ ಗಳು ಡಿಪ್ಸ್ ತೆಗೆಯುತ್ತಿದ್ದರು. ಬೈಕ್ ಮೇಲೆ ಅವರು ಮಾಡುವ ಕಸರತ್ತು. ಮುಂದಿನ ಚಕ್ರ ಮೇಲೆತ್ತಿದ್ದಾಗ ಬೈಕಿನ ಹಿಂಭಾಗ ನೆಲಕ್ಕೆ ತಾಗಿ ಬೆಂಕಿಯ ಕಿಡಿಗಳು ಮೇಲೆರುತ್ತಿದ್ದವು. ಒಟ್ಟಾರೆ ಅವರ ಪರಿಣತಿಗೆ ಹ್ಯಾಟ್ಸಪ್ ಹೇಳಲೇಬೇಕು.

ಒಂದು ಪ್ರಮುಖವಾದ ವಿಷಯ. ಬೈಕ್ ಸ್ಟಂಟ್ ಮಾಡೋರೆಲ್ಲ ಸುರಕ್ಷತೆ ಬಗ್ಗೆ ಸಾಕಷ್ಟು ಗಮನ ನೀಡಿದ್ದರು. ಬೆನ್ನಿನ ಜಾಕೇಟ್, ಎದೆಯ ಜಾಕೇಟ್, ಹೆಲ್ಮೆಟ್, ಬುಜಗಳಿಗೆ ಸುರಕ್ಷತೆಯ ಪ್ಯಾಡುಗಳನ್ನು ಧರಿಸಿದ್ದರು.

ಎಲ್ಲಕ್ಕಿಂತ ಇಷ್ಟವಾದದ್ದು ಸಿಂಗ್ ಇಸ್ ಕಿಂಗ್. ಸರ್ದಾರ್ ಬೈಕ್ ಸಾಹಸ ಪ್ರದರ್ಶನ. ಆತ ನಗುನಗುತ್ತ, ನಗಿಸುತ್ತ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. ಹಿನ್ನಲೆ ಸಂಗಿತ ಸಿಂಗ್ ಇಸ್ ಕಿಂಗ್ ಗೆ ತಕ್ಕಂತೆ ಬೈಕ್ ಮೇಲೆ ಡ್ಯಾನ್ಸ್ ಮಾಡುವ ಸರ್ದಾರ್ ನಿಜಕ್ಕೂ ಅಲ್ಲಿ ಕಿಂಗ್ ಆಗಿ ಕಂಡದ್ದು ಸುಳ್ಳಲ್ಲ. ನನಗೆ ಮಾರ್ಕ್ ಕೊಡಲು ಬಿಟ್ಟರೆ ಸಿಂಗ್ ಸಾಹಸಕ್ಕೆ ಹತ್ತರಲ್ಲಿ ಹತ್ತು ಅಂಕ ನೀಡುತ್ತಿದ್ದೆ. (ದಟ್ಸ್ ಕನ್ನಡ ವಾರ್ತೆ)

More from DriveSpark

Article Published On: Monday, September 19, 2011, 12:29 [IST]
English summary
The auto.oneindia team visited the recently concluded Automall 2011 at the Palace grounds. The event hosted a nerve wracking style biking show that enthralled the audience. Several unbelievable stunts were effortlessly done. These stunts are not for all. Safety is advised.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+