ಸ್ಟೈಲ್ ಬೈಕಿಂಗ್, ಕಮಾನ್ ಬ್ಯಾಂಗಲೂರ್

By * ಪಿಸಿ

Sing is king auto stunt
ಹೆಸರು ಡ್ರಾಗ್ ರೇಸ್. ಬೆಂಗಳೂರಿನಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ಹರೆಯದ ಯುವಕರು ರಸ್ತೆಯ ಮೇಲೆ ಪ್ರಾಣದೊಂದಿಗೆ ಚೆಲ್ಲಾಟ ನಡೆಸುತ್ತಿರುತ್ತಾರೆ. ಒಂದೇ ಚಕ್ರದಲ್ಲಿ ಬೈಕ್ ರೈಡ್ ಮಾಡುತ್ತ ರಸ್ತೆ ಬದಿಯಲ್ಲಿ ನಿಂತವರ ಎದೆಯಲ್ಲಿ ದಿಗಿಲು ಹೊತ್ತಿಸುತ್ತಾರೆ.

ಅಂದೊಮ್ಮೆ ಬೆಂಗಳೂರಿನಲ್ಲಿ ಮುಕ್ರಂ ಪಾಷಾ ಬೈಕ್ ಸ್ಟಂಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬೆಂಗಳೂರಿನಲ್ಲಿ ಕಾನೂನು ರೀತಿಯಲ್ಲಿ ಡ್ರಾಗ್ ರೇಸಿಂಗ್ ಗೆ ಸಾಕಷ್ಟು ಕಡಿವಾಣ ಹಾಕಲಾಗಿದೆ. ಆದರೆ ರಸ್ತೆಯಲ್ಲಿ ಕೇಳುವ ವ್ರೋಂ.. ವ್ರೋಂ ಸದ್ದಿಗೆ ನಿದ್ದೆ ಹಾರಿಹೋಗುತ್ತದೆ.

ಸಾಹಸ ಯುವಕರಿಗೆ ಇಷ್ಟ. ಆದರೆ ನಮ್ಮ ರಸ್ತೆ ಸ್ಟಂಟ್ ಗೆ ಸೂಕ್ತವಲ್ಲ ಅಂತ ಇವರಿಗೆ ಅರ್ಥವಾಗೋದು ಯಾವಾಗ? ರಸ್ತೆ ಬದಿಯಲ್ಲಿ ನಿಂತ ಯುವತಿಯರನ್ನು ಇಂಪ್ರೆಸ್ ಮಾಡಲು, ತನ್ನ ಸ್ನೇಹಿತರ ಮುಂದೆ ಹೀರೋ ಅನಿಸಿಕೊಳ್ಳಲು ಇಂತಹ ಶೋಕಿ ರೇಸ್ ಮಾಡುತ್ತಾರೆ. ತುಸು ಎಚ್ಚರ ತಪ್ಪಿದರೆ ಶೋಕ ಗೀತೆ ತಪ್ಪದು.

ಬೆಂಗಳೂರು ಸೇರಿದಂತೆ ಹೆಚ್ಚಿನ ರಸ್ತೆಯಲ್ಲಿ ಡ್ರಾಗ್ ರೇಸ್ ನಡೆಯುತ್ತದೆ. ಹಲವು ಬೈಕ್ ಅಪಘಾತಗಳಿಗೆ ಇದೇ ಕಾರಣ ಅನ್ನೋದು ಸುಳ್ಳಲ್ಲ. ಇಂಟರ್ ನೆಟ್ ನಲ್ಲಿ ಹುಡುಕ ಹೋದರೆ ಡ್ರಾಗ್ ರೇಸಿನಲ್ಲಿ ಸಾವನ್ನಪ್ಪಿದ್ದ ಸಾವಿರಾರು ಬೈಕ್ ಸ್ಟಂಟರ್ ಗಳ ಹೆಸರು ತಿಳಿಯುತ್ತದೆ.

ಬೈಕ್ ಸ್ಟಂಟ್ ಗೆ ಹೆಚ್ಚಿನ ಪರಿಣತಿ ಅಗತ್ಯ. ನಮ್ಮ ರಸ್ತೆಗಳು ಸುರಕ್ಷಿತವೂ ಅಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೊನೆಗೊಂಡ ಮೂರುದಿನದ ಬೈಕ್ ಸ್ಟಂಟ್ ಝಲಕ್ ಮುಂದಿನ ಪುಟದಲ್ಲಿದೆ.

More from DriveSpark

Article Published On: Monday, September 19, 2011, 12:34 [IST]
English summary
Stunt biking has emerged as a new rage among college going youth in Bangalore. They try death defying stunts on regular roads to attract and impress girls. they are ignoring their own safety while attempting such stunts. If you want to learn safe and professional stunt biking visit any car show in the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+