ಹೀರೋ ಮೊಟೊಕಾರ್ಪ್ ಮಾರಾಟದಲ್ಲೂ ಹೀರೋ

Hero MotoCorp reported highest ever monthly sales
ದೇಶದ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೋಟರ್ ತಾನು ಹೀರೋ ಅನ್ನೋದನ್ನು ಸಾಬೀತು ಪಡಿಸಿದೆ. ಹೆಚ್ಚಿನ ಕಂಪನಿಗಳು ಮಾರಾಟ ಇಳಿಕೆಯಿಂದ ಕಂಗಲಾಗಿರುವಾಗ ಹೀರೋ ಮೊಟೊಕಾರ್ಪ್ ಮಾತ್ರ ಅತ್ಯಧಿಕ ತಿಂಗಳ ಮಾರಾಟ ದಾಖಲಿಸಿದೆ.

ಕಂಪನಿಯು ಕಳೆದ ತಿಂಗಳು ಸುಮಾರು 5,49,625 ದ್ವಿಚಕ್ರ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 26.75ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 4,33,641 ಯುನಿಟ್ ಮಾರಾಟ ಮಾಡಿತ್ತು.

"ನಾವು ಮೊದಲ ಬಾರಿಗೆ ಅತ್ಯಧಿಕ ತಿಂಗಳ ಮಾರಾಟಕ್ಕೆ ಸಾಕ್ಷಿಯಾಗಿದ್ದೇವೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಒಟ್ಟಾರೆ 15,44,315 ದ್ವಿಚಕ್ರ ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯ 12,85,944 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 20.09ರಷ್ಟು ಏರಿಕೆ ಕಂಡಿದೆ.

ಸದ್ಯ ಹಬ್ಬದ ಸೀಸನ್ ಹತ್ತಿರವಿರುವುದರಿಂದ ಮುಂಬರುವ ತಿಂಗಳುಗಳಲ್ಲಿಯೂ ಅತ್ಯಧಿಕ ಮಾರಾಟ ಮಾಡುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಕಂಪನಿ ಕೆಲವು ತಿಂಗಳ ಹಿಂದೆ ಹೊಸ ಬ್ರಾಂಡ್ ಹೆಸರು, ಐಡೆಂಟೆಟಿ ಪ್ರಕಟಿಸಿತ್ತು. ಹೊಸ ಹೆಸರು ಕಂಪನಿಗೆ ಶುಭ ತಂದಿದೆ ಎಂದುಕೊಳ್ಳಬಹುದು.

More from DriveSpark

Article Published On: Monday, October 3, 2011, 17:45 [IST]
English summary
Hero MotoCorp reported highest ever monthly sales of 5,49,625 units in September 2011, registering a growth of 26.75 per cent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+