ಹೀರೋ ಮೊಟೊಕಾರ್ಪ್ ಇಂಪಲ್ಸ್ ಬೈಕ್ ಬಂದಿದೆ..

"ಕಂಪನಿಗೆ ಹೊಸ ಬ್ರಾಂಡ್ ಐಡೆಂಟೆಟಿ ದೊರಕಿದ ನಂತರ ಹೊರತಂದ ಮೊದಲ ಬೈಕ್ ಇಂಪಲ್ಸ್. ಇದು ಹೊಸ ಸೆಗ್ಮೆಂಟಿಗೆ ಪ್ರವೇಶಿಸಿದ್ದು, ಹೆಚ್ಚು ಬೈಕ್ ಪ್ರಿಯರನ್ನು ಸೆಳೆಯುವ ನಿರೀಕ್ಷೆಯಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಅನಿಲ್ ದುವಾ ಹೇಳಿದ್ದಾರೆ.
ಇಂಪಲ್ಸ್ ಬೈಕನ್ನು ಕಠಿಣ ರಸ್ತೆಗಳಲ್ಲೂ ರೈಡ್ ಮಾಡಬಹುದು. ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸೀರಿಸ್ ಸಂದರ್ಭದಲ್ಲಿ ಟಿವಿಯಲ್ಲಿ ಇಂಪಲ್ಸ್ ಬೈಕ್ ಜಾಹೀರಾತು ನೋಡಿರಬಹುದು. ಹಬ್ಬದ ಸೀಸನಿನಲ್ಲಿ ಹೆಚ್ಚು ಗ್ರಾಹಕರಿಗೆ ತಲುಪುವ ಉದ್ದೇಶದಿಂದ ಇಂಪಲ್ಸ್ ದರ ಕಡಿಮೆ ಮಾಡಲಾಗಿದೆ ಎಂದು ಕೂಡ ದುವಾ ತಿಳಿಸಿದ್ದಾರೆ.
ಹೀರೋ ಮೊಟೊಕಾರ್ಪ್ ಇತರ 150 ಸಿಸಿ ಬೈಕ್ ಗಳೆಂದರೆ ಅಚಿವರ್, ಸಿಬಿಝಡ್ ಎಕ್ಸ್ ಟ್ರೀಮ್ ಮತ್ತು ಹಂಕ್. ಈ ಬೈಕ್ ಗಳ ಎಕ್ಸ್ ಶೋರೂಂ ದರ 55 ಸಾವಿರ ರು.ನಿಂದ 65 ಸಾವಿರ ರು. ಆಸುಪಾಸಿನಲ್ಲಿದೆ.
ಇತ್ತೀಚೆಗೆ ಲಂಡನಿನಲ್ಲಿ ಕಂಪನಿಗೆ ಹೊಸ ನಾಮಕರಣವಾದ ಸಂದರ್ಭದಲ್ಲಿ ರಣಬೀರ್ ಕಪೂರ್ ಇದರ ಪಕ್ಕ ನಿಂತಿದ್ದು ನಿಮಗೆ ನೆನಪಿರಬಹುದು. ಅವರು ಈ ಬೈಕ್ ರಾಯಭಾರಿ. ಇಂಪಲ್ಸ್ ಬೈಕ್ ಗ್ರಾಹಕರನ್ನು ಇಂಪ್ರೆಸ್ ಮಾಡಲಿದೆಯೇ? ಕಾದು ನೋಡಬೇಕಿದೆ.


Click it and Unblock the Notifications








