ಹೊಸ ಹೋಂಡಾ ಯುನಿಕಾರ್ನ್ ಬೈಕ್ ರಸ್ತೆಗೆ, ದರ?

ಇದರಲ್ಲಿ ನೂತನ ಯುನಿಕಾರ್ನ್ ಡಾಜ್ಲರ್ ಸ್ಟಾಂಡರ್ಡ್ ಆವೃತ್ತಿ ಈಗಿನಿಂದಲೇ ಶೋರೂಂಗಳಲ್ಲಿ ದೊರಕಲಿದೆ. ಆದರೆ ಡಿಲಕ್ಸ್ ಆವೃತ್ತಿ ನವೆಂಬರ್ ಅಂತ್ಯದ ವೇಳೆಗೆ ಶೋರೂಂ ತಲುಪಲಿದೆ ಎಂದು ಕಂಪನಿ ತಿಳಿಸಿದೆ.
ಯುನಿಕಾರ್ನ್ ಡಾಜ್ಲರ್ ನೂತನ ಎರಡು ಆವೃತ್ತಿಗಳು ಒಂದೇ ರೀತಿಯ ಟೆಕ್ ವಿಶೇಷತೆಗಳನ್ನು ಹೊಂದಿವೆ. ಆದರೆ ಡಿಲಕ್ಸ್ ಆವೃತ್ತಿ ಮಾತ್ರ ಡ್ಯೂಯಲ್ ಟೋನ್ ಕಲರುಗಳಲ್ಲಿ ದೊರಕಲಿದೆ. ಡಿಲಕ್ಸ್ ಆವೃತ್ತಿಯ ಟ್ಯಾಂಕ್ ಮತ್ತು ಬದಿಗಳಲ್ಲಿ ಹೊಸ ಗ್ರಾಫಿಕ್ಸ್ ಅಂಟಿಸಲಾಗಿದ್ದು, ಆಕರ್ಷಕವಾಗಿ ಕಾಣುತ್ತದೆ.
ಸ್ಟಾಂಡರ್ಡ್ ಆವೃತ್ತಿ ಗೋಲ್ಡ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲಾಕ್ ಮತ್ತು ಪರ್ಲ್ ಸಿಯೆನಾ ಕೆಂಪು ಬಣ್ಣಗಳಲ್ಲಿ ದೊರಕುತ್ತಿದೆ. ಆದರೆ ನೂತನ ಯುನಿಕಾರ್ನ್ ನ ತಾಂತ್ರಿಕ ವಿಶೇಷತೆಗಳು ಬದಲಾಗಿಲ್ಲ. ವಿನ್ಯಾಸದಲ್ಲಿ ಮಾತ್ರ ಬದಲಾಗಿದೆ. ನೂತನ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ ಅನ್ನೋದು ನಿಜ.


Click it and Unblock the Notifications