ಸುಜುಕಿ ಇಂಟ್ರುಡರ್ ಎಂ800 ಬೈಕ್ ರಸ್ತೆಗೆ, ದರವೆಷ್ಟು?

Suzuki Launches Intruder M800 Cruise Bike At 8.8L
ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯ ಸೂಪರ್ ಬೈಕೊಂದು ರಸ್ತೆಗಿಳಿದಿದೆ. ಸುಜುಕಿ ಇಂಟ್ರುಡರ್ ಎಂ800 ಬೈಕ್ 8.8 ಲೀಟರ್ ಎಂಜಿನ್ ಹೊಂದಿದ್ದು, ದೆಹಲಿ ಎಕ್ಸ್ ಶೋರೂಂ ದರ 8.8 ಲಕ್ಷ ರುಪಾಯಿ. ಈ ದರಕ್ಕೆ ಬೇಕಾದರೆ ಸುಜುಕಿ ಕಂಪನಿಯ ಕಾರು ಬೇಕಾದರೂ ಖರೀದಿಸಬಹುದು. ಇದು ನಿಮ್ಮ ಕ್ರೇಝಿಗೆ ಬಿಟ್ಟ ವಿಚಾರ.

ಇಂಟ್ರುಡರ್ ಎಂ800 ಬೈಕ್ ಹರ್ಲಿ ಡೇವಿಡ್ ಸನ್ ಮತ್ತು ಹ್ಯೊಸಂಗ್ ಕ್ರೂಸ್ ಬೈಕುಗಳಿಗೆ ಪೈಪೋಟಿ ನೀಡುವ ಸೂಪರ್ ಬೈಕ್. ಸುಜುಕಿ ಕಂಪನಿಯ ಈ ಇಂಟ್ರುಡರ್ ಭಾರತಕ್ಕೆ ಹೊಸ ಹೆಸರಲ್ಲ. ಕಂಪನಿ ಈಗಾಗಲೇ ಸುಜುಕಿ ಇಂಟ್ರುಡರ್ 1800 ಎಂಬ ಬೈಕನ್ನು ಅನಾವರಣ ಮಾಡಿಯಾಗಿದೆ.

ಆದರೆ ಎಂ1800 ಬೈಕ್ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಯಾಕೆಂದರೆ ಅದರ ದುಬಾರಿ ದರ. ಎಂ1800 ಬೈಕಿನ ದರ ಸುಮಾರು 15.5 ಲಕ್ಷ ರುಪಾಯಿ ಇದೆ. ಅಬ್ಬಾಬ್ಬ ಎನ್ನಬೇಡಿ. ಇದೀಗ ನೂತನ ಸುಜುಕಿ ದರ ಸುಮಾರು 8 ಲಕ್ಷ ರು. ಆಸುಪಾಸಿನಲ್ಲಿರುವುದರಿಂದ ಕ್ರೂಝ್ ಬೈಕ್ ಪ್ರೀಯರು ಖರೀದಿಸಬಹುದು.

ಇಂಟ್ರುಡರ್ ಎಂ800 ಬೈಕ್ ನ ಟೆಕ್ ಮಾಹಿತಿ: ಇದು ಲಿಕ್ವಿಡ್ ಕೂಲ್ಡ್ 805ಸಿಸಿ, 8 ಕವಾಟದ ವಿ-ಟ್ವಿನ್ ಎಂಜಿನ್ ಹೊಂದಿದೆ. ಇದರ ಮೈಲೇಜ್ ಕುರಿತು ಖಚಿತ ಮಾಹಿತಿ ದೊರಕಿಲ್ಲ. ಆದರೆ ಇದರ ಮೈಲೇಜ್ ಇದರ ಅಣ್ಣ ಎಂ1800ಕ್ಕಿಂತ ಹೆಚ್ಚಿರಲಿದೆ. ಯಾಕೆಂದರೆ ಇದು ಎಂ1800ಕ್ಕಿಂತ ಕಡಿಮೆ ತೂಕ ಹೊಂದಿದೆ.

ಸುಜುಕಿ ಕಂಪನಿಯು ಇಂಟ್ರುಡರ್ ಎಂ800 ಬೈಕನ್ನು ದೇಶದ 12 ನಗರಗಳಲ್ಲಿ ಹೊರತಂದಿದೆ. ಅಂದರೆ ಬೆಂಗಳೂರು, ದೆಹಲಿ, ಹೈದರಬಾದ್, ಚೆನ್ನೈ, ಮುಂಬೈ, ಪುಣೆ ಮತ್ತು ಅಹಮಾದಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊರತಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Tuesday, November 29, 2011, 13:08 [IST]
English summary
Suzuki Motorcycle India has launched the Intruder M800 Cruise bike with a price tag of Rs.8.8 Lakhs in Delhi. This will be Suzuki's response to the arrival of cruise bikes from the likes of Harley Davidson and Hyosung.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+