2012 ಕವಾಸಕಿ ನಿಂಜಾ 650ಆರ್: ಬೈಕ್ ಸೂಪರ್!
ಬಜಾಜ್ ಆಟೋ, ಜಪಾನಿನ ಕವಾಸಕಿ ಮೋಟರ್ ಸೈಕಲ್ ಕಂಪನಿಯ ಅಧಿಕೃತ ವಿತರಕ ಕಂಪನಿಯಾಗಿದೆ. ದೇಶದಲ್ಲಿ ಕಂಪನಿಯು 250ಆರ್ ಮತ್ತು 650ಆರ್ ಬೈಕ್ ಮಾರಾಟ ಮಾಡುತ್ತಿದೆ. ನೂತನ ಬೈಕ್ ಡುಕಾಟಿ ಮತ್ತು ಹ್ಯೊಸಂಗ್ ಕಂಪನಿಯ 650 ಸಿಸಿ ಬೈಕುಗಳೊಂದಿಗೆ ಬೈಕ್ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದೆ.
ನಾಲ್ಕು ಸ್ಟ್ರೋಕಿನ, 8 ಕವಾಟದ, ಪಾರಾಲೆಲ್ ಟ್ವಿನ್ ಎಂಜಿನ್ ಹೊಂದಿರುವ ನೂತನ ಬೈಕ್ 8,500 ಆವರ್ತನಕ್ಕೆ 72 ಪಿಎಸ್ ಪವರ್ ಮತ್ತು 7 ಸಾವಿರ ಆವರ್ತನಕ್ಕೆ 66 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ 3.1 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆಯಬಹುದಾಗಿದೆ.
2012 ಕವಾಸಕಿ ನಿಂಜಾ 650ಆರ್ ಸೂಪರ್ ಬೈಕಿನಲ್ಲಿ ಕೇವಲ 8.1 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು. ಈ ಬೈಕಿನಲ್ಲಿ ಗಂಟೆಗೆ ಗರಿಷ್ಠ 176 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.
2012 ಕವಾಸಕಿ ನಿಂಜಾ 650ಆರ್ ವಿಶೇಷತೆಗಳು
ಎಂಜಿನ್: ನಾಲ್ಕು ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಡಿಒಎಚ್ ಸಿ, ನಾಲ್ಕು ಕವಾಟ, ಪಾರಾಲೆಲ್ ಟ್ವಿನ್
ಸಿಸಿ: 649
ಕೂಲಿಂಗ್ ಸಿಸ್ಟಮ್: ಲಿಕ್ವಿಡ್
ಗೇರ್: ಆರು ಸ್ಪೀಡ್ ಟ್ರಾನ್ಸ್ ಮಿಷನ್
ಬೈಕ್ ಕರ್ಬ್ ತೂಕ: 460.8 ಕೆಜಿ
ಎಬಿಎಸ್


Click it and Unblock the Notifications









