ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ ಧರಿಸ್ತಿರಾ? ಎಚ್ಚರ!

Posted By:
ಬೈಕು, ಸ್ಕೂಟರು ಇತ್ಯಾದಿ ದ್ವಿಚಕ್ರವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಕೆಲವರು ಶಿರಸ್ತ್ರಾಣ ತಲೆಗೇರಿಸಲು ಮರೆಯುವುದೇ ಇಲ್ಲ. ಇದಕ್ಕೆ ಟ್ರಾಫಿಕ್ ಪೊಲೀಸರ ಭಯ ಪ್ರಮುಖ ಕಾರಣ. ಅಪಘಾತವಾದರೆ ತಲೆಯಾದರೂ ಉಳಿಯಲಿ ಎಂದುಕೊಂಡು ಹೆಚ್ಚಿನವರು ಹೆಲ್ಮೆಟ್ ಧರಿಸುತ್ತಾರೆ.

ದ್ವಿಚಕ್ರವಾಹನ ಸವಾರಿಗೂ ಉಳಿದ ವಾಹನಗಳಿಗೂ ವ್ಯತ್ಯಾಸವಿದೆ. ಅಪಘಾತದಂತಹ ಸಂದರ್ಭಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಸುರಕ್ಷತೆ ಕಡಿಮೆ. ಕೆಳಗೆ ಬಿದ್ದು ತಲೆಹೋಳಾಗುವುದು ಗ್ಯಾರಂಟಿ. ಹೀಗಾಗಿ ಹೆಲ್ಮೆಟ್ ಧರಿಸುವುದು ಅತ್ಯಂತ ಅಗತ್ಯ.

ಆದರೆ ದೇಶದಲ್ಲಿ ಮಾರಾಟವಾಗುವ ಸುಮಾರು ಶೇಕಡ 85ರಷ್ಟು ಹೆಲ್ಮೆಟ್‌ಗಳು ಐಎಸ್ಐ ಗುಣಮಟ್ಟ ಹೊಂದಿಲ್ಲವೆಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸ್ಟೀಲ್ ಬರ್ಡ್ ಹೆಲ್ಮೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಈ ಮಾಹಿತಿ ನೀಡಿದ್ದಾರೆ.

ಹಾದಿಬೀದಿಯಲ್ಲಿ ಮಾರಾಟವಾಗುವ ಹೆಲ್ಮೆಟ್‌ಗಳನ್ನು ಖರೀದಿಸಿ ದ್ವಿಚಕ್ರವಾಹನ ಮಾಲೀಕರು ಮೂರ್ಖರಾಗುತ್ತಿದ್ದಾರೆ. ಈ ಹೆಲ್ಮೆಟ್‌ಗಳು ಮಾರಾಟಕ್ಕೆ ಮುನ್ನ ಯಾವುದೇ ಗುಣಮಟ್ಟ ಪರೀಕ್ಷೆಗೆ ಒಳಪಟ್ಟಿರುವುದಿಲ್ಲ. ಧರಿಸುವ ಹೆಲ್ಮೆಟ್ ಆಪತ್ಕಾಲದಲ್ಲಿ ನೆರವಾಗಬೇಕಾದರೆ ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಖರೀದಿಸಬೇಕು ಎಂದು ಅವರು ಹೇಳಿದ್ದಾರೆ.

ಹೆಲ್ಮೆಟ್ ಧರಿಸಿಯೂ ತಲೆಗೆ ಹೆಚ್ಚು ಪೆಟ್ಟುಬಿದ್ದು ಆಸ್ಪತ್ರೆಗೆ ದಾಖಲಾಗುವರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಹೆಸರಿಗೆ ಮಾತ್ರ ಹೆಲ್ಮೆಟ್ ಧರಿಸಿರುತ್ತಾರೆ. ಆದರೆ ಅವೆಲ್ಲ ಗುಣಮಟ್ಟವಿಲ್ಲದ ಪ್ಲಾಸ್ಟಿಕ್ ಹೆಲ್ಮಟ್‌ಗಳಾಗಿವೆ. ಇವೆಲ್ಲ ಟ್ರಾಫಿಕ್ ಪೊಲೀಸರನ್ನು ಫೂಲ್ ಮಾಡಲು ಇರುವ ಉತ್ಪನ್ನಗಳಾಗಿವೆ ಎಂದು ದೆಹಲಿ ಆಸ್ಪತ್ರೆಯೊಂದರ ಡಾಕ್ಟರ್ ಹೇಳುತ್ತಾರೆ.

ಕೆಲವು ನೂರು ರುಪಾಯಿ ಹೆಚ್ಚಾದರೂ ಪರವಾಗಿಲ್ಲ. ದ್ವಿಚಕ್ರವಾಹನ ಚಾಲಕರು ಯಾವತ್ತೂ ಐಎಸ್ಐ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಹಾದಿಬೀದಿಯಲ್ಲಿ ಮಾರಾಟವಾಗುವ ಹೆಲ್ಮೆಟ್ ಖರೀದಿಸುವುದು ಒಳ್ಳೆಯದಲ್ಲ. ಕೆಲವು ನೂರು ರು.ಗೆ ಕಂಜೂಸ್ ಮಾಡಿದ್ರೆ, ಯಾವತ್ತಾದ್ರೂ ದುಬಾರಿ ಬೆಲೆ ತೆರಬೇಕಾದೀತು. ಎಚ್ಚರ. (ಕನ್ನಡ ಡ್ರೈವ್‌ಸ್ಪಾರ್ಕ್)

ಓದಲು ಮರೆಯದಿರಿ: ಹೆಲ್ಮೆಟಾಯಣ: ಸೂಕ್ತವಾದ ಶಿರಸ್ತ್ರಾಣ ಆಯ್ಕೆ ಹೇಗೆ?

English summary
The manufacturers of two wheeler helmets have said more than 85% of helmets sold in India do not meet the stringent ISI standards. The shocking revelation by manufacturers themselves shows the dangerous position of two wheeler riders are in.
Story first published: Wednesday, April 11, 2012, 9:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark