ರಾಜ್ಯದಲ್ಲಿ ಹೆಚ್ಚಾದ ಕಿತ್ತಳೆ ಬಣ್ಣದ ಕೆಟಿಎಂ ಡ್ಯೂಕ್ ಬೈಕ್ ಹವಾ

ಗೂಳಿಯನ್ನು ನೆನಪಿಸುವ ವಿನ್ಯಾಸ, ಮೋಡಿ ಮಾಡುವ ಟೈರ್, ಎತ್ತರದ ಸೀಟು, ಗ್ರಾಫಿಕ್ಸ್ ಇರುವ ದೊಡ್ಡ ಇಂಧನ ಟ್ಯಾಂಕ್, ಸಣ್ಣ ಸೈಲೆನ್ಸರ್, ಹೃದಯದ ಬಡಿತ ಹೆಚ್ಚಿಸುವ ಸದ್ದು ಮತ್ತು ಹೃದಯದ ಬಡಿತ ಹೆಚ್ಚಿಸುವ ಓಟದಿಂದ ಕಿತ್ತಳೆ ಬಣ್ಣದ ಬಜಾಜ್ ಕೆಟಿಎ ಡ್ಯೂಕ್ ಬೈಕ್ ರಾಜ್ಯದ ಯುವ ದ್ವಿಚಕ್ರ ವಾಹನ ಸವಾರರನ್ನು ಸೆಳೆಯುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ಕೆಟಿಎಂ ಶೋರೂಂ ಆಯೋಜಿಸಿದ್ದ "ಆರೇಂಜ್ ರೈಡ್" ಕೆಟಿಎಂ ಡ್ಯೂಕ್ ಜನಪ್ರಿಯತೆಗೆ ಸಾಕ್ಷಿ. ಕೆಟಿಎಂ ಆಯೋಜಿಸಿದ್ದ ಈ ರೈಡಿನಲ್ಲಿ ಸುಮಾರು 58 ಡ್ಯೂಕ್ ಬೈಕ್ ಮಾಲೀಕರು ಭಾಗವಹಿಸಿದ್ದರು. ಇವರೆಲ್ಲರೂ ಇಂದಿರನಗರದಿಂದ ತುಮಕೂರು ದೇವರಾಯನದುರ್ಗ(90 ಕಿ.ಮೀ.)ದವರೆಗೆ ಜೊತೆಯಾಗಿ ರೈಡ್ ಮಾಡಿದ್ದರು.

ಒಂದೇ ಕಂಪನಿಯ ಒಂದೇ ಮಾಡೆಲಿನ ಇಷ್ಟೊಂದು ಸಂಖ್ಯೆಯ ಬೈಕುಗಳು ಒಟ್ಟಿಗೆ ಚಲಿಸಿದ್ದು ರೈಡರುಗಳಿಗೆ ಮಾತ್ರವಲ್ಲದೇ ರಸ್ತೆ ಬದಿಯಲ್ಲಿ ನೆರೆದ ಸಾರ್ವಜನಿಕರಿಗೂ ಮರೆಯಲಾಗದ ಅನುಭವ ನೀಡಿತ್ತು. ರಸ್ತೆಯಲ್ಲಿ ಚಿಟ್ಟೆಗಳ ಸಾಲಿನಂತೆ ಡ್ಯೂಕ್ ಬೈಕುಗಳು ಕಂಗೊಳಿಸುತ್ತಿದ್ದವು.

ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲೀಗ ಕೆಟಿಎಂ ಡ್ಯೂಕ್ ಬೈಕ್ ಹವಾ ಜೋರಾಗಿದೆ. ಸಂಚಾರ ದಟ್ಟಣೆಯಲ್ಲಿ ನಿಂತಿರುವ ರಾಶಿ ವಾಹನಗಳಲ್ಲಿ ಒಂದಾದರೂ ಡ್ಯೂಕ್ ಬೈಕ್ ಎದೆ ಸೆಟೆದು ನಿಂತಿರುವುದು ಕಾಣುತ್ತದೆ. ಬೈಕ್ ಪ್ರೇಮಿಗಳಲ್ಲಿ ಈಗ ಡ್ಯೂಕ್ ಕ್ರೇಝ್ ಹೆಚ್ಚಾಗಿರುವುದು ನಿಚ್ಚಳವಾಗಿದೆ.

"ಕೆಟಿಎಂ ಬೈಕಿನ ವಿನ್ಯಾಸವೇ ನನಗೆ ಮೊದಲ ನೋಟಕ್ಕೆ ಇಷ್ಟವಾಯಿತು. ಹೋಂಡಾ 250ಆರ್ ಖರೀದಿಸಲು ಮೊದಲ ಪ್ಲಾನ್ ಮಾಡಿದ್ದರೂ ಮನಸು ಬದಲಾಯಿಸಿ ಡ್ಯೂಕ್ ಬೈಕ್ ಖರೀದಿಸಿದೆ. ಇದು ನಿಜಕ್ಕೂ ಒಳ್ಳೆಯ ಬೈಕ್" ಬೆಂಗಳೂರಿನ ಕಿಶನ್ ಹೇಳುತ್ತಾರೆ.

ಬೆಂಗಳೂರಿನ ಇಂದಿರನಗರದ 100 ಅಡಿ ರಸ್ತೆಯಲ್ಲಿ ಬಜಾಜ್ ಪ್ರೊಬೈಕಿಂಗ್ ಕೆಟಿಎಂ ಡ್ಯೂಕ್ ಶೋರೂ ತೆರೆದಿದೆ. ಮಂಗಳೂರಿನಲ್ಲೂ 200 ಸಿಸಿಯ ಕೆಟಿಎಂ ಡ್ಯೂಕ್ ಬೈಕನ್ನು ಸುಪ್ರೀಂ ಆಟೋ ಡೀಲರ್ಸ್ ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಊರುಗಳಲ್ಲಿಯೂ ಶೋರೂಂಗಳನ್ನು ತೆರೆಯುವ ಯೋಜನೆ ಕಂಪನಿಗಿದೆ.

ನೂತನ ಬಜಾಜ್ ಕೆಟಿಎಂ ಡ್ಯೂಕ್ ಬೈಕಿಗೆ ಈಗ ಸುಮಾರು 3 ತಿಂಗಳ ವೇಟಿಂಗ್ ಪಿರೆಯಿಡ್ ಇದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ಯೂಕ್ 200 ಬೈಕ್ ಎಕ್ಸ್ ಶೋರೂಂ ಬೆಲೆ 1,19,021 ರೂಪಾಯಿ. ಆನ್ ರೋಡ್ ದರ ಅಂದಾಜು 1.37 ಲಕ್ಷ ರು. ಆಗಬಹುದು.

ನೂತನ ಡ್ಯೂಕ್ 200 ಯುರೋಪಿನ ಎರಡನೇ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಕೆಟಿಎಂನ ಪ್ರೀಮಿಯಂ ಸ್ಟ್ರೀಟ್ ಬೈಕಾಗಿದೆ. ಇದು 200ಸಿಸಿಯ ಲಿಕ್ವಿಡ್ ಕೂಲ್ಡ್, ಡಿಒಎಚ್ ಸಿ, ನಾಲ್ಕು ಕವಾಟ, ಸಿಂಗಲ್ ಸಿಲಿಂಡರ್, ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದು 10 ಸಾವಿರ ಆವರ್ತನಕ್ಕೆ 25.48 ಹಾರ್ಸ್ ಪವರ್ ಮತ್ತು 19ಎನ್ ಎಂ ಟಾರ್ಕ್ ಪವರ್ ನೀಡುತ್ತದೆ.

ಓದುಗರೇ ನಿಮಗೆ ಯಾವ ಬೈಕ್ ಇಷ್ಟ? ನಿಮ್ಮ ಪ್ರೀತಿಯ ಬೈಕಿನ ಕುರಿತು ಕೆಲವು ಸಾಲುಗಳನ್ನು ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಬರೆಯುವಿರಾ?

More from DriveSpark

Article Published On: Wednesday, August 29, 2012, 11:55 [IST]
English summary
Bajaj KTM Duke 200 Bike Craze increaseing in Karnataka. Recently KTM organised KTM 200 Dukes Orange Ride from Bangalore to Tumakur. 58 KTM 200 Dukes owners participated in these ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+