ಬಜಾಜ್ ಪಲ್ಸರ್ 200ಎನ್ಎಸ್ ಆಗಮನ ಸನ್ನಿಹಿತ
ಮುಂದಿನ ವಾರ ಬಜಾಜ್ ಪಲ್ಸರ್ ಆಗಮಿಸಲಿರುವ ವದಂತಿಗಳ ಕುರಿತು ಬಜಾಜ್ ಎಂಡಿ ರಾಜೀವ್ ಬಜಾಜ್ ಸೂಚ್ಯವಾಗಿ ಖಚಿತಗೊಳಿಸಿದ್ದಾರೆ. ಪಲ್ಸರ್ 200ಎನ್ಎಸ್ ಬೈಕ್ ಏಪ್ರಿಲ್ ತಿಂಗಳಲ್ಲೇ ರಸ್ತೆಗಿಳಿಯಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಲಾಂಚ್ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು.
ನೂತನ ಬಜಾಜ್ ಪಲ್ಸರ್ 200ಎನ್ಎಸ್ ಬೈಕನ್ನು ಈ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ಇದರೊಂದಿಗೆ ಕಂಪನಿಯು ಮುಂಬರುವ ದಿನಗಳಲ್ಲಿ 350-375 ಸಿಸಿಯ ಪಲ್ಸರ್ ಬೈಕನ್ನೂ ಕೂಡ ಪರಿಚಯಿಸಲು ಯೋಜಿಸಿದೆ.
ಹೊಸ ಪಲ್ಸರ್ ಅತ್ಯುತ್ತಮ ಕಾರ್ಯನಿರ್ವಹಣೆ, ಇಂಧನ ದಕ್ಷತೆ ಹೊಂದಿರಲಿದೆ. ಯಾಕೆಂದರೆ ಈ ಬೈಕ್ ಡಿಟಿಎಸ್-ಐ ಎಂಜಿನ್ ನೂತನ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಹೊಂದಿರಲಿದೆ. ಇದರ 199.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಗರಿಷ್ಠ 23.17 ಅಶ್ವಶಕ್ತಿ ಮತ್ತು 18.3 ಎನ್ಎಂ ಟಾರ್ಕ್ ಪವರ್ ನೀಡಲಿದೆ.
ಬಜಾಜ್ ಪಲ್ಸರ್ 200ಎನ್ಎಸ್ ದರ ಸುಮಾರು 1 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications









