ಅಕ್ಷಯ್ ಕುಮಾರ್‌ಗೆ ಜಾನ್ ಅಬ್ರಹಾಂ ನೀಡಿದ ಉಡುಗೊರೆ

ಬಾಲಿವುಡ್ ನಟರಾದ ಜಾನ್ ಅಬ್ರಹಾಂ ಮತ್ತು ಅಕ್ಷಯ್ ಕುಮಾರ್ ಗಳಸ್ಯ ಕಂಠಸ್ಯ ಗೆಳೆಯರು. ಅವರಿಬ್ಬರು ಗರಂ ಮಸಾಲಾ, ದೇಶಿ ಬಾಯ್ಸ್ ಮತ್ತು ಹೌಸ್ ಫುಲ್ 2 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇದೀಗ ಅಕ್ಷಯ್ ಕುಮಾರ್‌ಗೆ ಜಾನ್ ಅಬ್ರಹಾಂ ಉಡುಗೊರೆಯೊಂದನ್ನು ನೀಡುವ ಮೂಲಕ ಸ್ನೇಹಿತನ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಜಾನ್ ಅಬ್ರಹಾಂ ಅಕ್ಷಯ್‌ ಕುಮಾರ್‌ಗೆ ಸುಮಾರು 30 ಲಕ್ಷ ರುಪಾಯಿಯ ಕಸ್ಟಮೈಸ್ಡ್(ಪರಿವರ್ತಿಸಿದ) ಹರ್ಲಿ ಡೇವಿಡ್‌ಸನ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ತನ್ನ ಆತ್ಮೀಯ ಸ್ನೇಹಿತರಿಗೆ ವಾಹನಗಳನ್ನು ಉಡುಗೊರೆ ನೀಡಿ ಪ್ರೀತಿ ತೋರುವ ಅಭ್ಯಾಸವನ್ನು ಮುಂದುವರೆಸಿದ್ದಾರೆ.

ಸಜೀದ್ ಖಾನ್ ಫಿಲ್ಮ್ ಹೌಸ್‌ಫುಲ್ 2ರಲ್ಲಿ ನಟಿಸುವ ಸಂದರ್ಭದಲ್ಲಿ ತನ್ನಲ್ಲಿರುವಂತಹದ್ದೇ ಹರ್ಲಿ ಡೇವಿಡ್‌ಸನ್ ಬೈಕ್ ನೀಡುವುದಾಗಿ ಅಕ್ಷಯ್ ಕುಮಾರ್‌ಗೆ ಜಾನ್ ಪ್ರಾಮೀಸ್ ಮಾಡಿದ್ದರಂತೆ. ಇದೀಗ ಪ್ರಾಮೀಸ್ ಉಳಿಸಿಕೊಂಡಿರುವ ಜಾನ್ ಅಬ್ರಹಾಂ ವಿಶೇಷವಾಗಿ ಪರಿವರ್ತಿಸಿರುವ ಹರ್ಲಿ ಬೈಕ್ ನೀಡಿದ್ದಾರೆ. ಇನ್ನು ಇವರಿಬ್ಬರು ಒಂದೇ ರೀತಿಯ ಬೈಕಿನಲ್ಲಿ ಜೊತೆಯಾಗಿ ಜಾಲಿ ರೈಡ್ ಹೋಗುವ ನಿರೀಕ್ಷೆಯಿದೆ.

Article Published On: Friday, May 18, 2012, 11:19 [IST]
English summary
Bollywood actor John Abraham gifts close friend Akshay Kumar a customized Harley Davidson bike. These Bollywood actors working together many films such as Desi Boys, Garam Masala and Housefull 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+