ದೇಶಿ ರಸ್ತೆಯಲ್ಲಿ ಹರ್ಲಿ ಡೇವಿಡ್‌ಸನ್ ಭಾರಿ ಕನಸು

Harley Davidson
ಹರ್ಲಿ ಡೇವಿಡ್ ಸನ್ ಬೈಕುಗಳಿಗೆ ಈಗ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಕಂಪನಿ ಕೂಡ ದೇಶದಲ್ಲಿ ಮೆಗಾ ಪ್ಲಾನ್ ಹಮ್ಮಿಕೊಂಡಿದೆ. 2015-16ನೇ ಆರ್ಥಿಕ ವರ್ಷಕ್ಕೆ ಅಮೆರಿಕದ ಐಕಾನಿಕ್ ಮೋಟರ್‌ಸೈಕಲ್ ತಯಾರಿಕಾ ಕಂಪನಿಯು ದೇಶದಲ್ಲಿ ಹತ್ತು ಪಟ್ಟು ಮಾರಾಟ ಹೆಚ್ಚಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.

2015-16ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಸುಮಾರು 10 ಸಾವಿರ ದ್ವಿಚಕ್ರ ವಾಹನ ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅನೂಪ್ ಪ್ರಕಾಶ್ ಹೇಳಿದ್ದಾರೆ. ಈ ವರ್ಷ ಕಂಪನಿಯು ಸುಮಾರು 2 ಸಾವಿರ ದ್ವಿಚಕ್ರ ವಾಹನ ಮಾರಾಟ ಮಾಡುವ ಗುರಿಯನ್ನು ಹೊಂದಿದೆಯಂತೆ.

ಪ್ರಸಕ್ತ ವರ್ಷದ ಕೇಂದ್ರ ಬಜೆಟಿನಲ್ಲಿ ತೆರಿಗೆ ಹೆಚ್ಚಿಸಿರುವುದು ಹರ್ಲಿ ಡೇವಿಡ್ ಸನ್ ಬೈಕ್ ಬೇಡಿಕೆಗೆ ಹಿನ್ನಡೆ ಉಂಟು ಮಾಡಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಹರ್ಲಿ ಬ್ರಾಂಡಿಗೆ ದೇಶದ ಗ್ರಾಹಕರ ಬೇಡಿಕೆ ಕಂಡು ಅಚ್ಚರಿಯಾಗಿದೆ ಎಂದು ಅನುಪ್ ಹೇಳಿದ್ದಾರೆ.

ಇತ್ತೀಚೆಗೆ ಹರ್ಲಿ ಡೇವಿಡ್ ಸನ್ ಕಂಪನಿಯು ದೇಶದ ರಸ್ತೆಗೆ ಎಫ್ಎಕ್ಸ್ ಡಿಬಿ ಸ್ಟ್ರೀಟ್ ಬೊಬೊ ಮತ್ತು ಎಫ್ಎಕ್ಸ್ ಡಿಸಿ ಸೂಪರ್ ಗ್ಲೈಡ್ ಕಸ್ಟಮ್ ಎಂಬ ಎರಡು ಸೂಪರ್ ಬೈಕುಗಳನ್ನು ಪರಿಚಯಿಸಿತ್ತು. ಇವೆರಡರ ಎಕ್ಸ್ ಶೋರೂಂ ದರ ಕ್ರಮವಾಗಿ 9.95 ಲಕ್ಷ ರುಪಾಯಿ ಮತ್ತು 11.5 ಲಕ್ಷ ರುಪಾಯಿ ಆಗಿದೆ.

More from DriveSpark

Article Published On: Monday, May 14, 2012, 10:29 [IST]
English summary
Harley Davidson targets 10k motorcycle sales by 2015-16 in India. Company Senior official said, Recent budget tax hike not effected to Harley Davidson sales and company aiming more sales in coming days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+