ಹೀರೊ ದೀಪಾವಳಿ ಬಂಪರ್; ಫ್ಯಾಷನ್ ಎಕ್ಸ್-ಪ್ರೊ ಲಾಂಚ್
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೊ ಮೊಟೊಕಾರ್ಪ್, ಗ್ರಾಹಕರಿಗೆ ದೀಪಾವಳಿ ಉಡುಗೊರೆಯಾಗಿ ಬಹುನಿರೀಕ್ಷಿತ ಫ್ಯಾಷನ್ ಎಕ್ಸ್-ಪ್ರೊ ಲಾಂಚ್ ಮಾಡಿದೆ. ಈ ಮೂಲಕ 2012ನೇ ಸಾಲಿನಲ್ಲಿ ಕಂಪನಿಯ ಮೂರನೇ ಆವೃತ್ತಿಯ ಅನಾವರಣವಾಗಿದೆ.
ಹೀರೊ ಫ್ಯಾಷನ್ ಎಕ್ಸ್-ಪ್ರೊ ದರ ಮಾಹಿತಿ (ಆನ್ ರೋಡ್ ಬೆಂಗಳೂರು)
- ಡ್ರಮ್ ಕಿಕ್ ಸ್ಪೋಕ್: 56,150
- ಡ್ರಮ್ ಕಿಕ್ ಕಾಸ್ಟ್: 57,876
- ಡ್ರಮ್ ಸೆಲ್ಫ್ ಸ್ಪೋಕ್: 59,568
- ಡ್ರಮ್ ಸೆಲ್ಫ್ ಕಾಸ್ಟ್: 60,741
- ಡಿಸ್ಕ್ ಸೆಲ್ಫ್ ಕಾಸ್ಟ್: 63,088
ಹೀರೊ ಫ್ಯಾಷನ್ ಎಕ್ಸ್-ಪ್ರೊ 110 ಸಿಸಿ ಎಂಜಿನ್ ಹೊಂದಿದ್ದು, 8.7 ಪಿಎಸ್ ಪವರ್ ಹಾಗೂ 9.36 ಎನ್‌ಎಂ ಟರ್ಕ್ಯೂ ಉತ್ಪಾದಿಸಲಿದೆ. ಹೆಸರಿನಲ್ಲಿ ನಮೂದಿಸಿರುವಂತೆಯೇ ಫ್ಯಾಷನ್ 4 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಇದರ ಜತೆ ಕಾರ್ಯನಿರ್ವಾಹಕ ಕಮ್ಯೂಟರ್ ಬೈಕ್, ಡಿಜಿಟಲ್-ಅನಲಾಗ್ ಮೀಟರ್ ಕನ್ಸೋಲ್, ಟ್ಯೂಬ್‌ಲೆಸ್ ಟಯರ್ಸ್, ಫ್ರಂಟ್ ಡಿಸ್ಕ್ ಬ್ರೇಕ್ ಫೀಚರ್‌ಗಳನ್ನು ಒಳಗೊಂಡಿದೆ. ಇದು ತಮ್ಮ ಪ್ರತಿಸ್ಪರ್ಧಿಗಳಾದ ಡಿಸ್ಕವರ್ 100, ಸುಜುಕಿ ಹಯಾಟೆ ಹಾಗೂ ಹೊಂಡಾ ಟ್ವಿಸ್ಟರ್ ಹಾಗೂ ಡ್ರೀಮ್ ಯುಗಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಹೀರೊ ಫ್ಯಾಷನ್ ಎಕ್ಸ್-ಪ್ರೊ ಬೇಸ್ ಮಾಡೆಲ್ ಡ್ರಮ್ ಬ್ರೇಕ್ ಆವೃತ್ತಿ ದರ ದೆಹಲಿ ಎಕ್ಸ್ ಷೋರೂಂನಲ್ಲಿ 46800 ಆಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಅಲೋಯ್ ವೀಲ್ ಆವೃತ್ತಿಗಳ ದರ ರು. 51,800 ಆಗಿದೆ.

ಹೀರೊ ಫ್ಯಾಷನ್ ಎಕ್ಸ್-ಪ್ರೊ ಎಂಜಿನ್
ಟೈಪ್: ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ
ಡಿಸ್‌ಪ್ಲೇಸ್‌ಮೆಂಟ್: 109.1 ಸಿಸಿ
ಮಾಕ್ಸ್. ಪವರ್: 6.4 kW (8.7 Ps) @ 7500 rpm
ಮ್ಯಾಕ್. ಟರ್ಕ್ಯೂ: 9.36 N m @ 5500 rpm
ಬೋರ್ ಆಂಡ್ ಸ್ಟೋಕ್: 50.0 mm x 55.6 mm
ಸ್ಟಾರ್ಟಿಂಗ್: ಕಿಕ್ ಸ್ಟಾರ್ಟ್/ಸೆಲ್ಫ್ ಸ್ಟಾರ್ಟ್

ಕಲರ್ ವೆರಿಯಂಟ್
ಬ್ಲ್ಯಾಕ್ ವಿತ್ ಫಾರೆಸ್ಟ್ ಬ್ಲು
ಬ್ಲ್ಯಾಕ್ ವಿತ್ ಹೆವಿ ಗ್ರೇ
ಬ್ಲ್ಯಾಕ್ ವಿತ್ ಸ್ಪೋರ್ಟ್ಸ್ ರೆಡ್
ಎಲೆಕ್ಟ್ರಿಕ್ ಯಲ್ಲೊ ಮೆಟಾಲಿಕ್
ಫೋರ್ಸ್ ಸಿಲ್ವರ್ ಮೆಟಾಲಿಕ್
ಲೀಫ್ ಗ್ರೀನ್ ಮೆಟಾಲಿಕ್
ಸ್ಫೋರ್ಟ್ಸ್ ರೆಡ್
ವೈಬ್ರಂಟ್ ಬ್ಲು ಮೆಟಾಲಿಕ್

ಫೀಚರ್ಸ್
ಡಿಜಿಟಲ್ ಅನಲಾಗ್ ಕೊಂಬೊ ಮೀಟರ್ ಕನ್ಸೋಲ್
ಫ್ರಂಟ್ ಡಿಸ್ಕ್ ಬ್ರೇಕ್ ಆಂಡ್ ಟ್ಯೂಬ್‌ಲೆಸ್ ಟಯರ್ ಆಪ್ಷನ್
ಸ್ಟೈಲಿಶ್ ಗ್ರಾಫಿಕ್ಸ್
ಟ್ರಾಪೆಜೋಡಲ್ ಮಲ್ಟಿ-ಫೋಕಲ್ ಹೆಡ್‌ಲ್ಯಾಂಪ್ (ಎಂಎಫ್‌ಆರ್)

ಡೈಮಷನ್
ಲೆಂಗ್ತ್: 2005
ವಿಡ್ತ್: 765
ವೇಟ್: 1115
ವೀಲ್‌ಬೇಸ್: 1265 ಎಂಎಂ
ಸ್ಯಾಡಲ್ ಹೈಟ್: 785 ಎಂಎಂ
ಫ್ಯೂಯಲ್ ಟ್ಯಾಂಕ್ ಕ್ಯಾಪಸಿಟಿ: 9.5 ಲೀಟರ್ (ಮಿನಿಮಮಂ)
ರಿವರ್ಸ್: 2.1 ಲೀಟರ್

ದರ ಮಾಹಿತಿ (ಆನ್ ರೋಡ್ ಬೆಂಗಳೂರು)
ಡ್ರಮ್ ಕಿಕ್ ಸ್ಪೋಕ್: 56,150
ಡ್ರಮ್ ಕಿಕ್ ಕಾಸ್ಟ್: 57,876
ಡ್ರಮ್ ಸೆಲ್ಫ್ ಸ್ಪೋಕ್
: 59,568
ಡ್ರಮ್ ಸೆಲ್ಫ್ ಕಾಸ್ಟ್: 60,741
ಡಿಸ್ಕ್ ಸೆಲ್ಫ್ ಕಾಸ್ಟ್: 63,088

ಹೀರೊ ಫ್ಯಾಷನ್ ಎಕ್ಸ್-ಪ್ರೊ
ಇದೇ ವರ್ಷದಲ್ಲಿ ಇಗ್ನಿಟರ್ 125ಸಿಸಿ ಹಾಗೂ ಮಾಸ್ಟ್ರೋ 110ಸಿಸಿ ಆವೃತ್ತಿಗಳನ್ನು ಹೀರೊ ಬಿಡುಗಡೆಗೊಳಿಸಿತ್ತು. ಇದರ ಪೈಕಿ ಇಗ್ನಿಟರ್ ಹಾಗೂ ಇದೀಗ ಬಿಡುಗಡೆಯಾಗಿರುವ ಫ್ಯಾಷನ್ ಎಕ್ಸ್-ಪ್ರೊ ಪ್ರಯಾಣಿಕ ಬೈಕ್ ಆಗಿದೆ

ಹೀರೊ ಫ್ಯಾಷನ್ ಎಕ್ಸ್-ಪ್ರೋ ಫೀಚರ್ಸ್
ಹೀರೊ ಫ್ಯಾಷನ್ ಎಕ್ಸ್-ಪ್ರೊ ಬೈಕ್ ಪವರ್‌ಫುಲ್ 110 ಸಿಸಿ ಎಂಜಿನ್‌ನೊಂದಿಗೆ ಆಗಮನವಾಗಿದ್ದು, 8.7 ಪಿಎಸ್ ಹಾಗೂ 7500 ಆರ್‌ಪಿಎಂ ಉತ್ಪಾದಿಸಲಿದೆ. ಹೀರೊ ಫ್ಯಾಷನ್ ಎಕ್ಸ್-ಪ್ರೊ ಒಟ್ಟು ಎಂಟು ಕಲರ್ ವೆರಿಯಂಟ್‌ಗಳಲ್ಲಿ ಲಭಿಸಲಿದೆ. ಇದು ಗ್ರಾಹಕರ ಆನಂದಕ್ಕೆ ಕಾರಣವಾಗಿದೆ.

ಹೀರೊ ಫ್ಯಾಷನ್ ಎಕ್ಸ್-ಪ್ರೊ
ಇದರ ಎಪಿಡಿವಿ ಇಗ್ನಿಷನ್ ಸಿಸ್ಟಂ ಅತ್ಯುನ್ನತ ಡ್ರೈವಿಂಗ್‌ಗೆ ನೆರವು ಮಾಡಲಿದೆ. ಸ್ಟೈಲಿಷ್ ಫ್ಯೂಯಲ್ ಟ್ಯಾಂಕ್ ಬೈಕ್‌ನ ಅಂದವನ್ನು ಹೆಚ್ಚಿಸಿದೆ. ಇದರ ಜತೆ ಡಿಜಿಟಲ್-ಅನಲಾಗ್ ಮೀಟರ್ ಕನ್ಸೋಲ್ ಹಾಗೂ ಸರ್ವೀಸ್ ಡ್ಯು ಇಂಡಿಕೇಟರ್ ಹೊಂದಿದೆ.

ಹೀರೊ ಫ್ಯಾಷನ್ ಎಕ್ಸ್-ಪ್ರೊ
ಹೀರೊ ಫ್ಯಾಷನ್ ಎಕ್ಸ್-ಪ್ರೊ ಸುರಕ್ಷತೆಗಾಗಿ ಹೆಚ್ಚಿನ ಒತ್ತು ಕೊಟ್ಟಿದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಆಯ್ಕೆ ಕೂಡಾ ಲಭ್ಯವಿದೆ.


Click it and Unblock the Notifications