ಶೀಘ್ರದಲ್ಲಿ ಮಹೀಂದ್ರ ಹೊಸ ರೊಡಿಯೊ ಸ್ಕೂಟರ್

ಇತ್ತೀಚೆಗೆ ರಸ್ತೆಗಿಳಿದ ಡ್ಯೂರೊ ಡಿಝಡ್ ಯಶಸ್ಸಿನಿಂದ ಪ್ರೇರಿತಗೊಂಡಿರುವ ಮಹೀಂದ್ರ ಕಂಪನಿಯು ರೊಡಿಯೊ ಆರ್‌ಝಡ್ ಸ್ಕೂಟರಿನ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಕಂಪನಿಯು ಈ ತಿಂಗಳಾಂತ್ಯದೊಳಗೆ ಶಕ್ತಿಶಾಲಿ, ಸುಂದರವಾದ ಮತ್ತು ಸಾಕಷ್ಟು ಫೀಚರುಗಳಿರುವ 125 ಸಿಸಿಯ ರೊಡಿಯೊ ಆರ್‌ಝಡ್ ಆಟೋಮ್ಯಾಟಿಕ್ ಸ್ಕೂಟರ್ ಪರಿಚಯಿಸಲಿದೆ.

ಮಹೀಂದ್ರ ರೊಡಿಯೊ ಮೇಲೆ ಕಡಿಮೆ ಮೈಲೇಜ್ ಸ್ಕೂಟರ್ ಎಂಬ ದೂರಿದೆ. ನೂತನ ಪರಿಷ್ಕೃತ ಆವೃತ್ತಿ ಪ್ರಾಯಶಃ ಮೈಲೇಜ್ ಹೆಚ್ಚಿಸಿಕೊಂಡು ಆಗಮಿಸುವ ನಿರೀಕ್ಷೆಯಿದೆ. ನೂತನ ಪರಿಷ್ಕೃತ ರೊಡಿಯೊ ಆರ್‌ಝಡ್ ಸ್ಕೂಟರಿನ ದರ ಸುಮಾರು 45 ಸಾವಿರ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

"ಶೀಘ್ರದಲ್ಲಿ ಹೊಸ ರೊಡಿಯೊ ಪರಿಚಯಿಸಲು ನಿರ್ಧರಿಸಿದ್ದೇವೆ. ಹೊಸ ರೊಡಿಯೊ ಆರ್ ಝಡ್ ಸ್ಕೂಟರ್ ಹೆಚ್ಚು ಶಕ್ತಿಶಾಲಿ ಸ್ಕೂಟರ್ ಆಗಿದ್ದು, ಅತ್ಯಾಕರ್ಷಕ ಫೀಚರುಗಳೊಂದಿಗೆ ಬರಲಿದೆ. ಯುವ, ಆಧುನಿಕ ದಂಪತಿಗಳಿಗೆ ಈ ಸ್ಕೂಟರ್ ಅಚ್ಚುಮೆಚ್ಚಾಗುವ ನಿರೀಕ್ಷೆ ನಮಗಿದೆ" ಎಂದು ನೂತನ ಸ್ಕೂಟರ್ ಆಗಮನದ ಕುರಿತು ಮಹೀಂದ್ರ ಟೂ ವೀಲರ್ ಮಾರುಕಟ್ಟೆ ವಿಭಾಗದ ವಿರೇನ್ ಪೊಪ್ಲಿ ಹೇಳಿದ್ದಾರೆ.

ಅಮೆರಿಕದ 1,504 ಡಾಲರ್ ವಹಿವಾಟಿನ ಕಂಪನಿ ಮಹೀಂದ್ರ ಗ್ರೂಪಿನ ಭಾರತದ ಅಂಗಸಂಸ್ಥೆ ಮಹೀಂದ್ರ ಟೂವೀಲರ್ಸ್ ಲಿಮಿಟೆಡ್ ದೇಶಕ್ಕೆ ಇನ್ನಷ್ಟು ದ್ವಿಚಕ್ರ ವಾಹನ ಪರಿಚಯಿಸುವುದನ್ನು ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ.

ಮಹೀಂದ್ರ ದ್ವಿಚಕ್ರವಾಹನ ಕಂಪನಿಯು ಈ ವರ್ಷ ಏಪ್ರಿಲ್ ತಿಂಗಳಿಂದ ಮೇ ತಿಂಗಳ ಅಂತ್ಯದವರೆಗೆ ಸುಮಾರು 19,287 ಯುನಿಟ್ ವಾಹನ ಮಾರಾಟ ಮಾಡಿತ್ತು. ಕಳೆದ ತಿಂಗಳು ಕಂಪನಿಯು ದೇಶದಲ್ಲಿ ಸುಮಾರು 9,096 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದೆ.

ದೇಶದಲ್ಲಿ ಕಂಪನಿಯ ರೊಡಿಯೊ ಮತ್ತು ಡ್ಯೊರೊ ಸ್ಕೂಟರ್ ಗ್ರಾಹಕರ ಸಂಖ್ಯೆ ಈಗಾಗಲೇ ಒಂದು ಲಕ್ಷ ಗಡಿ ದಾಟಿದೆ.

More from DriveSpark

Article Published On: Monday, June 4, 2012, 15:04 [IST]
English summary
Riding on the success of the recently launched Duro DZ, the Mahindra Two Wheelers is planning to launch yet another scooter - the powerful, stylish, fully loaded Rodeo RZ 125cc automatic scooter in select markets this month. This is the updated 2012 version of the Rodeo which has already been there in the market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+