ರೊಡಿಯೊ ಆರ್‌ಝಡ್ ರಸ್ತೆಗೆ, ದರ 49 ಸಾವಿರ ರು.

Posted By:
To Follow DriveSpark On Facebook, Click The Like Button
ಮಹೀಂದ್ರ ಗ್ರೂಪಿನ ಅಂಗಸಂಸ್ಥೆಯಾಗಿರುವ ಮಹೀಂದ್ರ ಟೂ ವೀಲ್ಹರ್ಸ್ ಕಂಪನಿಯು ನೂತನ ರೊಡಿಯೊ ಆರ್ ಝಡ್ ಸ್ಕೂಟರನ್ನು ದಕ್ಷಿಣ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ 125 ಸಿಸಿಯ ಸ್ಕೂಟರಿಗೆ ರಾಜ್ಯದಲ್ಲಿ ಎಕ್ಸ್ ಶೋರೂಂ ದರ 48,930 ರುಪಾಯಿ ಇರಲಿದೆ.

ಝಡ್ ಸರಣಿಯ ಎಂಜಿನಿನ Mahindra Rodeo RZ sports ಸ್ಕೂಟರ್ ಅತ್ಯುತ್ತಮ ಪಿಕಪ್, ಅತ್ಯುತ್ತಮ ಮೈಲೇಜ್ ನೀಡುತ್ತದೆ. ಅತ್ಯಾಧುನಿಕ, ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಫೀಚರುಗಳೊಂದಿಗೆ ಆಗಮಿಸಿದೆ.

"ಮಹೀಂದ್ರ ಸ್ಕೂಟರ್ ವಿಭಾಗಕ್ಕೆ ರೊಡಿಯೊ ಆರ್ ಝಡ್ ಹೊಸ ಅತಿಥಿ. ಇದು ನಗರದ ಯುವದಂಪತಿಗಳಿಗೆ ಸೂಕ್ತವಾದ ಸ್ಕೂಟರ್. ಕಾಲೇಜು ತರುಣ ತರುಣಿಯರಿಗೂ ರೊಡಿಯೊ ಅಚ್ಚುಮೆಚ್ಚು ಆಗಲಿದೆ. ಅವನಿಗೆ ಮತ್ತು ಅವಳಿಗೆ ಇಷ್ಟವಾಗುವ ಟ್ರೆಂಡಿ ಸ್ಕೂಟರ್ ಅತ್ಯಾಧುನಿಕ ಫೀಚರುಗಳನ್ನು ಹೊಂದಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ವೀರೆನ್ ಪೊಪ್ಲಿ ಹೇಳಿದ್ದಾರೆ.

ಮಹೀಂದ್ರ ರೊಡಿಯೊ ಆರ್ ಝಡ್ ನೂತನ ಡ್ಯೂಯಲ್ ಕರ್ವ್ ಡಿಜಿಟಲ್ ಇಗ್ನಿಷನ್ ಸಿಸ್ಟಮ್(ಡಿಸಿಡಿಐ) ಹೊಂದಿದೆ. ಈ ಸ್ಕೂಟರಿನ ಮೈಲೇಜ್ ಪ್ರತಿಲೀಟರಿಗೆ 59.38 ಕಿ.ಮೀ. ಮೈಲೇಜ್ ನೀಡುತ್ತದೆ. ಪ್ರಸಕ್ತ ದುಬಾರಿ ಇಂಧನ ದರದ ಸಮಯದಲ್ಲಿ ಇದರ ಮೈಲೇಜ್ ಕೊಂಚ ಇಂಪ್ರೆಸಿವ್ ಆಗಿದೆ.

ನೂತನ ಶಕ್ತಿಶಾಲಿ ಸ್ಕೂಟರ್ ಅಡ್ವಾನ್ಸಡ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹೊಂದಿದೆ. ಇದರ ಗ್ರೌಂಡ್ ಕ್ಲೀಯರೆನ್ಸ್ ಕೂಡ ಹೆಚ್ಚಿದ್ದು ಯಾವುದೇ ರಸ್ತೆಯಲ್ಲಿ ನಿರಾಳವಾಗಿ ಸವಾರಿ ಮಾಡಬಹುದಾಗಿದೆ. ಅಡ್ವಾನ್ಸಡ್ ಡಿಜಿಟಲ್ ಡ್ಯಾಷ್ ಬೋರ್ಡ್, ಟೆಕ್ನೊಮೀಟರ್, ಟ್ರಿಪ್ ಮೀಟರ್, ಆಕ್ಸಿಲರೇಷನ್ ಟೈಮರ್ ಮುಂತಾದವುಗಳು ರೊಡಿಯೊ ಸ್ಕೂಟರಿನ ಮೌಲ್ಯ, ಅಂದ ಹೆಚ್ಚಿಸಿವೆ. ಮೊಬೈಲ್ ಫೋನ್/ ಎಂಪಿ3 ಚಾರ್ಜರ್ ಇದರಲ್ಲಿದೆ.

ರೊಡಿಯೊ ಡಿಝಡ್ ದಕ್ಷಿಣ ಭಾರತದಲ್ಲಿ ಎಕ್ಸ್ ಶೋರೂಂ ದರ

ಕರ್ನಾಟಕ: 48,930 ರುಪಾಯಿ

ಆಂಧ್ರ: 49,575 ರುಪಾಯಿ

ಕೇರಳ: 49,410 ರುಪಾಯಿ

ತಮಿಳುನಾಡು: 50,710 ರುಪಾಯಿ

English summary
Mahindra Rodeo RZ Scooter launched in South India. 125cc Z Series engine Mahindra Rodeo RZ sports Karnataka Price Rs 48,930. Mahindra Rodeo RZ mileage of 59.38 kmpl.
Story first published: Thursday, June 21, 2012, 11:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark