ಮುಂಗಾರು ಓಟದಲ್ಲಿ ಗೆದ್ದ ಮಹೀಂದ್ರ ರೊಡಿಯೊ ಆರ್‌ಝಡ್
"ಹೋಲಿಕೆ ಮಾಡಲಾಗದ ವ್ಯಕ್ತಿತ್ವಗಳೆಂದು ಶಮೀಮ್ ಮತ್ತು ರೋಡಿಯೊ ಆರ್ ಝಡ್ ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಸವಾಲಿನ ಹಾದಿಯಲ್ಲಿ ಸಮರ್ಥವಾಗಿ ಪ್ರಯಾಣಿಸಲು ರೋಡಿಯೊ ಆರ್ ಝಡಿನ ಅನನ್ಯ ಕಾರ್ಯಕ್ಷಮತೆ ಮತ್ತು ದಕ್ಷತೆಯೇ ಕಾರಣವಾಗಿದೆ. ಶಮೀಮ್ ಗೆ ಅಭಿನಂದನೆಗಳು" ಎಂದು ಮಹೀಂದ್ರ ದ್ವಿಚಕ್ರವಾಹನ ಕಂಪನಿಯ ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೀರೆನ್ ಪೊಪ್ಲಿ ಹೇಳಿದ್ದಾರೆ.
"ಇದು ನನಗೆ ರೋಮಾಂಚನ ಉಂಟು ಮಾಡಿದೆ. ನಾನು ಪ್ರಪ್ರಥಮ ಬಾರಿಗೆ ಪಿಟ್ ಸ್ಟಾಪ್ ರಾಲಿಯಲ್ಲಿ ಭಾಗವಹಿಸಿದ್ದೇನೆ. ನೂತನ ಮಹೀಂದ್ರ ರೋಡಿಯೊ ಆರ್ ಝಡ್ ನನ್ನ ರೈಡಿಂಗ್ ಪರಿಣತಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ, ಈ ಸಾಧನೆಗೆ ನೆರವಾಗಿದೆ" ಎಂದು ಶಮೀಮ್ ಹೇಳಿದ್ದಾರೆ.
ಸ್ಪೋರ್ಟ್ಸ್ ಬೈಕ್ ಸವಾರಿಯಲ್ಲಿ ತನ್ನ ಬದುಕನ್ನ ರಾಷ್ಟ್ರೀಯ ಚಾಂಪಿಯನ್ ಶಮೀಮ್ ಖಾನ್ 2000ನೇ ಇಸವಿಯಲ್ಲಿ ಆರಂಭಿಸಿದ್ದಾರೆ. ನಾಸೀಕ್ ಮೂಲದ ಶಮೀಮ್ ಈಗಾಗಲೇ ಗಲ್ಫ್ ಮಾನ್ಸೂನ್ ಸ್ಕೂಟರ್ ರಾಲಿ, ಮಂಗಳೂರಿನಲ್ಲಿ ನಡೆದ ರೌಂಡ್ ಒನ್ ಗಲ್ಫ್ ಡರ್ಟ್ ಟ್ರಕ್ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ವಿಕ್ಟರಿ ಪಡೆದಿದ್ದಾರೆ.


Click it and Unblock the Notifications
