ರಾಜ್ಯಕ್ಕೆ ಬಂತು ನೂತನ ಡ್ಯೂರೊ ಸ್ಕೂಟರ್, ದರ 44 ಸಾವಿರ ರು.

ಹಳೆಯ 110 ಸಿಸಿಯ ಡ್ಯೂರೊದ ಮುಂದುವರೆದ ಆವೃತ್ತಿಯಾಗಿ 125 ಸಿಸಿಯ ಡ್ಯೂರೊ ಡಿಝಡ್ ರಸ್ತೆಗಿಳಿದಿದೆ. ರಾಜ್ಯದಲ್ಲಿ ನೂತನ ಮಹೀಂದ್ರ ಡ್ಯೊರೊ ಸ್ಕೂಟರ್ ಎಕ್ಸ್ ಶೋರೂಂ ದರ 44,760 ರುಪಾಯಿ. ಈ ಸ್ಕೂಟರ್ ಪ್ರತಿಲೀಟರ್ ಪೆಟ್ರೋಲಿಗೆ 40-45 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ.
ಕಂಪನಿಯು ಡ್ಯೊರೊ ಸ್ಕೂಟರನ್ನು ಸದ್ಯ ದಕ್ಷಿಣ ಭಾರತದಲ್ಲಿ ಬಿಡುಗಡೆ ಮಾಡಿದೆ. ಅಂದರೆ ನಿನ್ನೆ ಆಂಧ್ರದಲ್ಲಿ, ಇಂದು ಕರ್ನಾಟಕದಲ್ಲಿ ಬಿಡುಗಡೆ ಮಾಡಿದ್ದು, ನಾಳೆ ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದೆ. ಕರ್ನಾಟಕದಲ್ಲಿ ಈಗಾಗಲೇ ಕಂಪನಿಯು 22 ಡೀಲರ್ಷಿಪ್ ಮಳಿಗೆಗಳನ್ನು ಹೊಂದಿದೆ.
ಮಹೀಂದ್ರ ಟೂವೀಲ್ಹರ್ಸ್ ಕಂಪನಿಯ ಮಾರಾಟ ಮತ್ತು ಗ್ರಾಹಕ ಸೇವೆ ವಿಭಾಗದ ಉಪಾಧ್ಯಕ್ಷ ಧರ್ಮೇಂದ್ರ ಮಿಶ್ರಾ, ಮಾರಾಟ ವಿಭಾಗದ ವೆಂಕಟೇಶ್ ಮತ್ತು ತಿರುಪತಿ ಉಪಸ್ಥಿತರಿದ್ದರು. ಈ ಸ್ಕೂಟರಿನ ಸಂಪೂರ್ಣ ವಿಮರ್ಶೆ ಶೀಘ್ರದಲ್ಲಿ ನಿಮ್ಮ ಮುಂದಿರಲಿದೆ. ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








