ಮಹೀಂದ್ರ ಸ್ಟಾಲಿಯೊ ರಿಲಾಂಚ್‌ಗೆ ರೆಡಿ; ಸ್ಪೈ ಷಾಟ್ಸ್!

By Nagaraja

ಮಹೀಂದ್ರ ಗ್ರೂಪಿನ ದ್ವಿಚಕ್ರ ವಾಹನ ವಿಭಾಗ ಮಹೀಂದ್ರ ಟು ವಿಲ್ಹರ್ಸ್ ಸದ್ಯದಲ್ಲೇ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆಯೊಂದಿಗೆ ಸ್ಟಾಲಿಯೊ ಮತ್ತೆ ರಸ್ತೆಗಿಳಿಯಲು ರೆಡಿಯಾಗಿದೆ.

ಇದಕ್ಕೂ ಮುನ್ನ ಒಮ್ಮೆ ಸ್ಟಾಲಿಯೊ ರಸ್ತೆಗಿಳಿದಿದ್ದರೂ ತಾಂತ್ರಿಕ ಸಮಸ್ಯೆಗಳಿಂದಾಗಿ ಮಾರುಕಟ್ಟೆ ಹೆಚ್ಚಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಕೆಲವೇ ದಿನಗಳಲ್ಲಿ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಯಾಕೆಂದರೆ ಈ ಬೈಕ್ ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ವಿಫಲವಾಗಿತ್ತು. ಅದರ ಗೇರ್ ಬಾಕ್ಸ್ ನಲ್ಲಿ ಸಮಸ್ಯೆಗಳಿವೆ ಎಂದು ಹಲವು ಗ್ರಾಹಕರು ದೂರು ಸಲ್ಲಿಸಿದ್ದರು. ಜೊತೆಗೆ ಅದರ ಸಸ್ಪೆನ್ಷನ್ ಬಗ್ಗೆಯೂ ದೂರುಗಳಿದ್ದವು.

ಈ ಹಿಂದೆ ಸ್ಟಾಲಿಯೊ ಎಂಬ ಹೆಸರಿನಿಂದ ಅರಿಯಲ್ಪಟ್ಟಿದ್ದ ಮಹೀಂದ್ರ ಪ್ಯಾಂಥರೊ ಮುಂದಿನ ವರ್ಷಾಂರಂಭದಲ್ಲಿ ದೇಶದ ರಸ್ತೆಗಿಳಿಯಲಿದೆ. ಮೂಲಗಳ ಪ್ರಕಾರ ಪರಿಷ್ಕೃತ ಸ್ಟಾಲಿಯೊಗೆ ಪ್ಯಾಂಥರೊ ಎಂಬುದಾಗಿ ಪ್ರಚಾರ ಪಡೆಯಲಿದೆ. ಆದರೆ ಬೈಕ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಮುಂಭಾಗ, ಹೆಡ್‌ಲೈಟ್ ಹಾಗೂ ಒಟ್ಟಾರೆಯಾಗಿನ ವಿನ್ಯಾಸ ಬಹುತೇಕ ಸಮಾನವಾಗಿದೆ.

ಪ್ಯಾಂಥರೊ ರಹಸ್ಯ ಚಿತ್ರಗಳು ಈಗಾಗಲೇ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುವ ನಿರೀಕ್ಷೆ ಹೊಂದಿದೆ. ಈ ಹಿಂದಿನ ಸ್ಟಾಲಿಯೊ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 106 ಸಿಸಿ ಎಂಜಿನ್ ಹಾಗೂ ಪೀಕ್ ಪವರ್ 7.3 ಬಿಎಚ್‌ಪಿ, 7500 ಆರ್‌ಪಿಎಂ ಹಾಗೂ ಎನ್‌ಎಂ ಟರ್ಕ್ಯೂ 5500 ಆರ್‌ಎಂಪಿ ಹೊಂದಿತ್ತು. ಅಲ್ಲದೆ 4 ಸ್ಪೀಡ್ ಗೇರ್‌ಬಾಕ್ಸ್ ಆಳವಡಿಸಲಾಗಿತ್ತು. ಪ್ಯಾಂಥರೊ ಆವೃತ್ತಿಗೂ ಇದೇ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಮಹೀಂದ್ರ ಸ್ಟಾಲಿಯೊ ರಿಲಾಂಚ್‌ಗೆ ಸನ್ನದ್ಧ!

ಮಹೀಂದ್ರ ಪ್ಯಾಂಥರೊ ರಹಸ್ಯ ಚಿತ್ರಣವನ್ನು ಬೈಕ್ ಅಡೈಸ್ ಡಾಟ್ ಇನ್ ಬಿಡುಗಡೆ ಮಾಡಿದೆ. ಇದು ಸ್ಟಾಲಿಯೊ ಆವೃತ್ತಿಗಿಂತ ಹೆಚ್ಚಿನ ಬದಲಾವಣೆಗಳನ್ನು ಹೊಂದಿಲ್ಲ.

ಮಹೀಂದ್ರ ಸ್ಟಾಲಿಯೊ ರಿಲಾಂಚ್‌ಗೆ ಸನ್ನದ್ಧ!

ಸ್ಟಾಲಿಯೊ 110 ಸಿಸಿ ಬೈಕ್ ಆವೃತ್ತಿ ಪರಿಷ್ಕೃತ ಆವೃತ್ತಿಯನ್ನು ಮಹೀಂದ್ರ ಬಿಡುಗಡೆಗೊಳಿಸಲಿದ್ದು, ಮಹೀಂದ್ರ ಪ್ಯಾಂಥರೊ ಎಂಬ ಹೆಸರಿನಿಂದ ಪ್ರಚಾರ ಪಡೆಯಲಿದೆ.

ಮಹೀಂದ್ರ ಸ್ಟಾಲಿಯೊ ರಿಲಾಂಚ್‌ಗೆ ಸನ್ನದ್ಧ!

ಈ ಹಿಂದೆ 2010 ಅಕ್ಟೋಬರ್ ತಿಂಗಳಲ್ಲಿ ಮಹೀಂದ್ರ ಸ್ಟಾಲಿಯೊ ರಿಲೀಸ್ ಮಾಡಲಾಗಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ 2011 ಫೆಬ್ರವರಿ ತಿಂಗಳಲ್ಲಿ ಮಾರುಕಟ್ಟೆಯಿಂದ ವಾಪಾಸ್ ಪಡೆಯಲಾಗಿತ್ತು.

ಮಹೀಂದ್ರ ಸ್ಟಾಲಿಯೊ ರಿಲಾಂಚ್‌ಗೆ ಸನ್ನದ್ಧ!

2012 ದೆಹಲಿ ಆಟೋ ಎಕ್ಸಪೋದಲ್ಲಿ ಸ್ಟಾಲಿಯೊ ಆವೃತ್ತಿಯ ಪರಿಷ್ಕೃತ ಬೈಕ್ ಬಿಡುಗಡೆಗೊಳಿಸುವುದಾಗಿ ಮಹೀಂದ್ರ ಕಂಪನಿ ತಿಳಿಸಿತ್ತು.

ಮಹೀಂದ್ರ ಸ್ಟಾಲಿಯೊ 106 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಸಲ್ಪಟ್ಟಿದೆ. ಅಲ್ಲದೆ 4 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಪರಿಷ್ಕೃತ ಮಹೀಂದ್ರ ಪ್ಯಾಂಥರೊದಲ್ಲೂ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆ.

More from DriveSpark

Article Published On: Thursday, November 15, 2012, 13:07 [IST]
English summary
The Mahindra Stallio is all set to get a new name. Bikeadvice.in has revealed spy shots of a new 110cc bike being developed by Mahindra 2 Wheelers. The bike which carries the name Pantero is also a 110cc motorcycle and could well be the new Mahindra Stallion, but with a different name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+