ರಾಯಲ್ ಎನ್‌ಫೀಲ್ಡ್ 500 ಆಗಮನ ವಿಳಂಬ, ಯಾಕಂತೆ?

ರಾಯಲ್ ಎನ್‌ಫೀಲ್ಡ್ 500 ನಿರೀಕ್ಷೆಯಲ್ಲಿರುವ ಬುಲೆಟ್ ಪ್ರೀಯರಿಗೆ ಕೊಂಚ ನಿರಾಶೆಯಾಗಬಹುದು. ಯಾಕೆಂದರೆ ಬಹುನಿರೀಕ್ಷಿತ 500ಸಿಸಿ ಬುಲೆಟ್ ಆಗಮನ ತಡವಾಗಲಿದೆ. ಇದು ಪ್ರಸಕ್ತ ವರ್ಷದ ಮಧ್ಯಾವಧಿಯಲ್ಲಿ ಆಗಮಿಸಬೇಕಿತ್ತು. ಈ ಬುಲೆಟನ್ನು 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ತಡವೇಕೆ?: ಈಗಾಗಲೇ ಕ್ಲಾಸಿಕ್ ಬುಲೆಟಿಗೆ ಬೇಡಿಕೆ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ನೂತನ ಬುಲೆಟ್ ಉತ್ಪಾದನೆ ಸಾಧ್ಯವಿಲ್ಲವೆನ್ನುವ ಕಾರಣಕ್ಕೆ ಕೊಂಚ ತಡವಾಗಿ ನೂತನ ರಾಯಲ್ ಎನ್‌ಫೀಲ್ಡ್ 500 ಪರಿಚಯಿಸಲು ಕಂಪನಿ ನಿರ್ಧರಿಸಿದೆ.

Royal Enfield Thunderbird 500 Bullet Launch Delay

ಈಗಾಗಲೇ ರಾಯಲ್ ಎನ್‌ಫೀಲ್ಡ್ 500 ಬುಲೆಟ್ ಎಲ್ಲಾ ಹಂತದ ಟೆಸ್ಟ್ ಮಾಡಿ ಮುಗಿಸಿದೆ. ಈಗಾಗಲೇ ಚೆನ್ನೈನಲ್ಲಿ ಈ ಬುಲೆಟ್ ಟೆಸ್ಟ್ ಮಾಡಿರುವುದನ್ನು ಡ್ರೈವ್ ಸ್ಪಾರ್ಕ್ ಪತ್ತೆ ಹಚ್ಚಿದೆ. ಆದರೆ ಈಗಾಗಲೇ ಕ್ಲಾಸಿಕ್ 350 ಮತ್ತು ಥಂಡರ್ ಬರ್ಡ್ 350 ಬುಲೆಟುಗಳ ವೇಟಿಂಗ್ ಪಿರೆಯಿಡ್ ಆರು ತಿಂಗಳಿಗಿಂತ ಹೆಚ್ಚಿದೆ.

ಈ ಎರಡು ಬುಲೆಟುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅಥವಾ ಗ್ರಾಹಕರ ಬೇಡಿಕೆಗೆ ತಕ್ಕಂತೆ ಶೀಘ್ರವಾಗಿ ಗ್ರಾಹಕರಿಗೆ ಪೂರೈಸಲು ಕಂಪನಿಗೆ ಸಾಧ್ಯವಾಗದೆ ಇರುವುದರಿಂದ ಹೊಸ ಬುಲೆಟ್ ಪರಿಚಯಿಸಲು ಕಂಪನಿಯು ತ್ವರೆ ಮಾಡುತ್ತಿಲ್ಲ.

2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡ ಈ ಬುಲೆಟ್ ದರ ಸುಮಾರು 1.3 ಲಕ್ಷ ರುಪಾಯಿ ಇರುವ ನಿರೀಕ್ಷೆಯಿದೆ. ಬನ್ನಿ ರಾಯಲ್ ಎನ್ ಫೀಲ್ಡ್ ಥಂಡರ್‌ಬರ್ಡ್ 500 ಬುಲೆಟ್ಟಿನ ಟೆಕ್ ಮಾಹಿತಿ ತಿಳಿದುಕೊಳ್ಳೋಣ.

More from DriveSpark

Article Published On: Thursday, August 23, 2012, 15:34 [IST]
English summary
Most awaited Royal Enfield Thunderbird 500 Bullet could be delayed. Royal Enfield Classic 350 and Thunderbird 350 huge demand reason behind these delay. Royal Enfield showcased Thunderbird 500 cc motorcycle at Delhi Auto Expo 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+