ಥಂಡರ್‌ಬರ್ಡ್ 500 ಬುಲೆಟ್: ಸಂಪೂರ್ಣ ಮಾಹಿತಿ

ರಾಯಲ್ ಎನ್‌ಫೀಲ್ಡ್ ಫ್ಯಾಕ್ಟರಿಯಿಂದ ಶೀಘ್ರದಲ್ಲಿ ನೂತನ ಥಂಡರ್‌ಬರ್ಡ್ 500 ಬುಲೆಟ್ ಆಗಮಿಸಲಿದೆ ಎಂದು ಇತ್ತೀಚೆಗೆ ವರದಿ ಮಾಡಿದ್ದೇವು. ಈ ಬುಲೆಟ್ ಬಗೆಗಿನ ಹೆಚ್ಚಿನ ಮಾಹಿತಿ ನೀಡುವಂತೆ ಬುಲೆಟ್ ಪ್ರೇಮಿ ಓದುಗರು ಕೇಳಿಕೊಂಡಿದ್ದರು. 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡ ಈ ಬುಲೆಟ್ ದರ ಸುಮಾರು 1.3 ಲಕ್ಷ ರುಪಾಯಿ ಇರುವ ನಿರೀಕ್ಷೆಯಿದೆ. ಬನ್ನಿ ರಾಯಲ್ ಎನ್ ಫೀಲ್ಡ್ ಥಂಡರ್‌ಬರ್ಡ್ 500 ಬುಲೆಟ್ಟಿನ ಟೆಕ್ ಮಾಹಿತಿ ತಿಳಿದುಕೊಳ್ಳೋಣ.

ಎಂಜಿನ್ ಮಾಹಿತಿ
* ಮಾದರಿ: ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಟ್ವಿನ್ ಸ್ಪಾರ್ಕ್
* 499 ಸಿಸಿ ಸಾಮರ್ಥ್ಯದ ಎಂಜಿನ್
* ಗರಿಷ್ಠ ಶಕ್ತಿ: 5,250 ಸಾವಿರ ಆವರ್ತನಕ್ಕೆ 27.2 ಅಶ್ವಶಕ್ತಿ
* ಗರಿಷ್ಠ ಟಾರ್ಕ್: 4 ಸಾವಿರ ಆವರ್ತನಕ್ಕೆ 41.3 ಎನ್ಎಂ
* ಇಗ್ನಿಷನ್ ವ್ಯವಸ್ಥೆ: ಡಿಜಿಟಲ್ ಎಲೆಕ್ಟ್ರಾನಿಕ್ ಇಗ್ನಿಷನ್
* ಕ್ಲಚ್: ವೆಟ್, ಮಲ್ಟಿಪ್ಲೇಟ್
* ಗೇರ್ ಬಾಕ್ಸ್: 5 ಸ್ಪೀಡ್
* ಏರ್ ಕ್ಲೀನರ್: ಪೇಪರ್ ಎಲಿಮೆಂಟ್
* ಎಂಜಿನ್ ಸ್ಟಾರ್ಟ್: ಕಿಕ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್

ಚಾಸಿ ಮತ್ತು ಸಸ್ಪೆನ್ಷನ್
* ಮಾದರಿ: ಸಿಂಗಲ್ ಡೌನ್ ಟ್ಯೂಬ್
* ಮುಂಭಾಗದ ಸಸ್ಪೆನ್ಷನ್: ಟೆಲಿಸ್ಕೋಪಿಕ್, 41ಎಂಎಂ ಫೋರ್ಕ್ಸ್, 130 ಎಂಎಂ ಟ್ರಾವೆಲ್
* ಹಿಂಭಾಗದ ಸಸ್ಪೆನ್ಷನ್: ಐದು ಹಂತದ ಹೊಂದಾಣಿಕೆ ಸಾಮರ್ಥ್ಯದ ಟ್ವಿನ್ ಗ್ಯಾಸ್ ಚಾರ್ಜ್ಡ್ ಷಾಕಬ್ಸರ್ಬರ್, 80 ಎಂಎಂ ಟ್ರಾವೆಲ್

ಇತರ ಮಾಹಿತಿ
* 500 ಥಂಡರ್ ಬರ್ಡ್ ಎತ್ತರ: 1,300 ಎಂಎಂ
* ಕರ್ಬ್ ತೂಕ: 195 ಕೆಜಿ
* ಇಂಧನ ಟ್ಯಾಂಕ್ ಸಾಮರ್ಥ್ಯ: 20 ಲೀಟರ್
* ಹೆಡ್ ಲ್ಯಾಂಪ್: ಪ್ರೊಜೆಕ್ಷನ್ ಮಾದರಿ
* ಹಿಂಭಾಗದ ಲ್ಯಾಂಪ್: ಎಲ್ಇಡಿ
* ಟರ್ನ್ ಸಿಗ್ನಲ್ ಲ್ಯಾಂಪ್: ಹಝಾರ್ಡ್ ಲ್ಯಾಂಪ್, ದೇಶದ ದ್ವಿಚಕ್ರವಾಹನಗಳಿಗೆ ಹೊಸ ಪರಿಚಯ

Most Read Articles

Kannada
Story first published: Thursday, June 28, 2012, 13:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X