ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಬುಲೆಟ್ ಆಗಮನ ಸನ್ನಿಹಿತ

Posted By:
<ul id="pagination-digg"><li class="next"><a href="/two-wheelers/2012/new-thunderbird-500-price-feature-specs-002519.html">Next »</a></li></ul>

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ನಿರೀಕ್ಷಿಸುತ್ತಿರುವ ಬುಲೆಟ್ ಪ್ರೇಮಿಗಳಿಗೆ ಸವಿಸುದ್ದಿಯೊಂದು ಇಲ್ಲಿದೆ. ಐಕಾನಿಕ್ ಬುಲೆಟ್ ತಯಾರಿಕಾ ಕಂಪನಿಯು ಥಂಡರ್‌ಬರ್ಡ್ ಬುಲೆಟ್ ರಸ್ತೆಗಿಳಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.

ಈಗಾಗಲೇ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಬುಲೆಟ್ ಟೆಸ್ಟ್ ಮಾಡುತ್ತಿರುವುದು ಪತ್ತೆಯಾಗಿದೆ. ಈಗಾಗಲೇ ಇದರ ಚಿತ್ರಗಳು ಅಂತರ್ ಜಾಲದಲ್ಲಿ ಓಡಾಡುತ್ತಿವೆ. ಸೀಟ್ ಮರುವಿನ್ಯಾಸ ಸೇರಿದಂತೆ ನೂತನ ಥಂಡರ್‌ಬರ್ಡ್ ಬುಲೆಟಿನಲ್ಲಿ ಸಾಕಷ್ಟು ಹೊಸ ವಿನ್ಯಾಸಗಳು ಗಮನಸೆಳೆಯುತ್ತವೆ.

ನೂತನ ಥಂಡರ್‌ಬರ್ಡ್ ಹೊಸ ಹ್ಯಾಂಡಲ್ ಬಾರ್ ಹೊಂದಿದೆ. ಇದರಿಂದ ಬುಲೆಟ್ ರೈಡಿಂಗ್ ಸುಲಭವಾಗಲಿದೆ. ಜೊತೆಗೆ ಹಿಂದಿನ ಸೀಟ್ ತೆಗೆದು ಲಗೇಜ್ ಸ್ಥಳಾವಕಾಶ ಮಾಡಬಹುದಾಗಿದೆ. ಒಟ್ಟಾರೆ ಥಂಡರ್‌ಬರ್ಡ್ ಹೊಸ ವಿನ್ಯಾಸವೂ ಬುಲೆಟ್ ಪ್ರೇಮಿಗಳ ಗಮನಸೆಳೆಯಲಿದೆ.

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಬುಲೆಟಿನ ಮುಂಭಾಗದ ಮತ್ತು ಹಿಂಭಾಗದ ಚಕ್ರಗಳು ಡಿಸ್ಕ್ ಬ್ರೇಕ್ ಹೊಂದಿದೆ. ಸದ್ಯ ಥಂಡರ್‌ಬರ್ಡ್ 350 ಬುಲೆಟ್ ದರ 1 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಥಂಡರ್‌ಬರ್ಡ್ 500 ದರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಥಂಡರ್‌ಬರ್ಡ್ 500 ಬುಲೆಟ್: ಸಂಪೂರ್ಣ ಮಾಹಿತಿ

<ul id="pagination-digg"><li class="next"><a href="/two-wheelers/2012/new-thunderbird-500-price-feature-specs-002519.html">Next »</a></li></ul>
English summary
Thunder Bird is a motorbike that has been appreciated for its brilliant ride comfort and suitability for long rides. Royal Enfield had showcased the new Thunderbird 500 cc motorcycle at the Delhi Auto Expo which was held earlier this year. Now reports are that the iconic motorcycle manufacturer is readying the launch of the Thunderbird 500.
Story first published: Tuesday, June 26, 2012, 11:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark