ಬೆಂಗ್ಳೂರಿನಲ್ಲಿ ಟ್ರಯಂಪ್ ಬೈಕ್ ಶೋರೂಂ ಆರಂಭವಾಗುತ್ತ?

ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ಕಂಪನಿಯು ನೂತನ ಶೋರೂಂಗಳನ್ನು ತೆರೆಯಲಿದೆಯಂತೆ. ಮುಂದಿನ ದಿನಗಳಲ್ಲಿ ನಾಲ್ಕನೇ ಶೋರೂಂನ್ನು ಚಂಡಿಗಢದಲ್ಲಿ ತೆರೆಯುವ ಯೋಜನೆಯೂ ಕಂಪನಿಗಿದೆ.
ಇದನ್ನು ಓದಿ: ರಸ್ತೆಗೆ ನಡುಕ: ಏಳು ಟ್ರಯಂಪ್ ಬೈಕಿಗೆ ದಾರಿಬಿಡಿ
ಸಿಕೆಡಿ ಮತ್ತು ಸಿಬಿಯು ಯುನಿಟ್ ಮೂಲಕ ದೇಶದ ರಸ್ತೆಗೆ ಟ್ರಯಂಪ್ ಬೈಕುಗಳನ್ನು ಕಂಪನಿಯು ತರಲಿದೆ. ಇದರಲ್ಲಿ ನಾಲ್ಕು ಮಾಡೆಲ್ ಬೈಕುಗಳನ್ನು ಕಂಪನಿಯು ಸಿಕೆಡಿ ಹಾದಿಯ ಮೂಲಕ ಆಮದು ಮಾಡಿಕೊಳ್ಳಲಿದೆ. ಅವುಗಳೆಂದರೆ Bonneville, Street Triple 675, Speed Triple ಮತ್ತು Daytona 675 ಎಂಬ ಬೈಕುಗಳಾಗಿವೆ.
ಉಳಿದ ಮೂರು ಬೈಕುಗಳನ್ನು ದೇಶದಲ್ಲಿ ಜೋಡಿಸುವ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲೇ ಬಿಡಿಭಾಗಗಳನ್ನು ತಂದು ಜೋಡಿಸುವುದರಿಂದ ಹೆಚ್ಚು ಗ್ರಾಹಕರನ್ನು ಸೆಳೆಯಲು ಮತ್ತು ದರ ತಗ್ಗಿಸಲು ಸಾಧ್ಯವಾಗಲಿದೆ.


Click it and Unblock the Notifications








