ಹೀರೋ, ಬಜಾಜ್‌ಗೆ ಎದುರಾಳಿ, ಟ್ರಯಂಪ್ 125 ಸಿಸಿ ಬೈಕ್
ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ 125 ಸೆಗ್ಮೆಂಟಿನಲ್ಲಿ ಪ್ರಬಲವಾಗಿರುವ ಹೀರೋ ಮೊಟೊಕಾರ್ಪ್, ಬಜಾಜ್ ಮತ್ತು ಟಿವಿಎಸ್ ಕಂಪನಿಗಳಿಗೆ ಪೈಪೋಟಿ ನೀಡಲು ಅಮೆರಿಕದ ಟ್ರಯಂಪ್ ಮೋಟರ್‌ಸೈಕಲ್ ಕಂಪನಿಯು ರೆಡಿಯಾಗಿದೆ. ಕಂಪನಿಯು ಮುಂದಿನ ವರ್ಷದ ಅಂತ್ಯದೊಳಗೆ ನೂತನ 125ಸಿಸಿ ಬೈಕ್ ಪರಿಚಯಿಸಲು ಯೋಜಿಸಿದೆ.
ಟ್ರಯಂಪ್ ಮೋಟರ್‌ಸೈಕಲ್ ಕಂಪನಿಯು ಪ್ರೀಮಿಯಂ ಬೈಕ್ ತಯಾರಿಸುವ ಕಂಪನಿಯಾಗಿದೆ. ಆದರೆ ಇನ್ನುಂದೆ ಕಂಪನಿಯು ಅತ್ಯಧಿಕ ಬೇಡಿಕೆಯಿರುವ 125 ಸಿಸಿ ಸೆಗ್ಮೆಂಟಿಗೆ ಪ್ರವೇಶಿಸಲು ಯೋಜಿಸಿದೆ.
ಟ್ರಯಂಪ್ ಮೋಟರ್‌ಸೈಕಲ್ ಕಂಪನಿಯ ಅಧಿಕಾರಿಗಳು ಈಗಾಗಲೇ ವಾಹನ ಬಿಡಿಭಾಗ ತಯಾರಿಕಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿವೆ ಎಂದು ನಿಕಟ ಮೂಲಗಳು ತಿಳಿಸಿವೆ. 125ಸಿಸಿ ಸೆಗ್ಮೆಂಟಿನಲ್ಲಿ ಅಗ್ಗದ ಬೈಕ್ ತಯಾರಿಸುವ ಬಿಡಿಭಾಗಗಳಿಗೆ ಕಂಪನಿಯು ಬೇಡಿಕೆಯಿಟ್ಟಿದೆ ಎನ್ನಲಾಗಿದೆ.
ಈ ಸುದ್ದಿ ಖಚಿತಪಡಿಸಿಕೊಳ್ಳಲು ಡ್ರೈವ್‌ಸ್ಪಾರ್ಕ್ ತಂಡವು ಟ್ರಯಂಪ್ ಕಂಪನಿಗೆ ಮಿಂಚಂಚೆ ಕಳುಹಿಸಿದರೂ ಮಾರುತ್ತರ ಇನ್ನೂ ಬಂದಿಲ್ಲ. ಕಂಪನಿಯು ಹೆಚ್ಚು ಸಿಸಿ ಬೈಕುಗಳನ್ನು ಮಾತ್ರ ಪರಿಚಯಿಸುತ್ತಿದೆ. ಕಂಪನಿಯ ಕಡಿಮೆ ಸಿಸಿ ಬೈಕ್ ಎಂದರೆ 625 ಸಿಸಿಯ ಡೆಟೊನಾ ಬೈಕಾಗಿದೆ. ಕಂಪನಿಯು 2,300 ಸಿಸಿಯ ರಾಕೆಟ್ 3 ಎಂಬ ಸೂಪರ್ ಬೈಕನ್ನೂ ಮಾರಾಟ ಮಾಡುತ್ತಿದೆ. ಕಂಪನಿಯು ಕರ್ನಾಟಕದಲ್ಲೂ ಘಟಕ ನಿರ್ಮಿಸಲು ಯೋಜಿಸಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









