ದೇಶದಲ್ಲಿ ಮೈನವಿರೇಳಿಸುವ ವಿಶ್ವ ಸೂಪರ್ ಬೈಕ್ ರೇಸ್
ಬೈಕ್ ರೇಸ್ ಅಭಿಮಾನಿಗಳ ಮೈನವಿರೇಳಿಸುವ, ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ಜಾಗತಿಕ ಸೂಪರ್ ಬೈಕ್ ರೇಸ್ ದೇಶದಲ್ಲಿ ಮುಂದಿನ ವರ್ಷ ಆರಂಭವಾಗಲಿದೆ. 2013ರ ಮಾರ್ಚ್ 9ರಿಂದ 10ರವರೆಗೆ ಬುದ್ದ್ ಇಂಟರ್ ನ್ಯಾಷನಲ್ ಸರ್ಕ್ಯೂಟಿನಲ್ಲಿ ಅಂತಾರಾಷ್ಟ್ರೀಯ ಮೋಟರ್‌ಸೈಕಲ್ ರೇಸಿಂಗ್ ಸ್ಪರ್ಧೆ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಷಿಪ್ ನಡೆಯಲಿದೆ.
ದೇಶದಲ್ಲಿ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸ್ ಆಯೋಜಿಸುವ ಕುರಿತು ಇನ್‌ಫ್ರಾಂಟ್ ಮೋಟರ್ ಸ್ಪೋರ್ಟ್ಸ್ ಜೊತೆ ಜೆಪಿ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್(ಜೆಪಿಎಸ್ಐ) ಒಪ್ಪಂದ ಮಾಡಿಕೊಂಡಿದೆ. ಫಾರ್ಮುಲಾ ಒನ್ ರೇಸಿಗಷ್ಟೇ ಸೀಮಿತವಾಗಿದ್ದ ದೇಶದಲ್ಲಿನ್ನು ಸೂಪರ್ ಬೈಕ್ ರೇಸ್ ಸದ್ದು ಕೇಳಿಸಲಿದೆ.
"ದೇಶದಲ್ಲಿ ಫಾರ್ಮುಲಾ ಒನ್ ನಂತೆ ಎಫ್ಐಎ ಜಿಟಿ1 ಮೋಟರ್ ರೇಸಿಂಗ್ ಸರಣಿ ಆಯೋಜಿಸುವ ಕುರಿತು ಪ್ರಕಟಿಸಲು ಹೆಮ್ಮೆಯಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಮೈನವಿರೇಳಿಸುವ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಷಿಪ್ ಆರಂಭವಾಗಲಿದೆ" ಎಂದು ನೂತನ ಒಪ್ಪಂದಕ್ಕೆ ಸಹಿಹಾಕುವ ಕಾರ್ಯಕ್ರಮದಲ್ಲಿ ಜೆಪಿಎಸ್ಐ ವ್ಯವಸ್ಥಾಪಕ ನಿರ್ದೇಶಕರಾದ ಸಮೀರ್ ಗೌರ್ ಹೇಳಿದ್ದಾರೆ.
"ಕಳೆದ ವರ್ಷ ಜೆಪಿ ಗ್ರೂಪ್ ಪ್ರವರ್ತಕರ ಜೊತೆ ನಡೆಸಿದ ಸಭೆಯ ನಂತರ, ನಾನು ಭಾರಿ ವೃತ್ತಿಪರರ ಜೊತೆ ಮತ್ತು ಶಕ್ತಿಶಾಲಿ ಕಾರ್ಪೊರೆಟ್ ಹೌಸ್ ಜೊತೆ ಡೀಲ್ ಮಾಡುತ್ತಿರುವ ಅನುಭವ ನನಗಾಯಿತು. ದೇಶದಲ್ಲಿ ಸೂಪರ್ ಬೈಕ್ ರೇಸ್ ಯಶಸ್ವಿಯಾಗುವಲ್ಲಿ ಯಾವುದೇ ಅನುಮಾನ ನನಗಿಲ್ಲ. ದೇಶದಲ್ಲಿ ನಡೆಯಲಿರುವ ಸೂಪರ್ ಬೈಕ್ ರೇಸಿನಿಂದ ನಮ್ಮ ಬ್ರಾಂಡ್ ಮೌಲ್ಯ ಇನ್ನಷ್ಟು ಹೆಚ್ಚಾಗುವ ಭರವಸೆ ನಮಗಿದೆ" ಎಂದು ಇನ್‌ಫ್ರಾಂಟ್ ಮೋಟರ್ ಸ್ಪೋರ್ಟ್ಸ್ ಚೇರ್ಮನ್ ಮೌರ್ಜಿಜಿಯೊ ಫ್ಲಾಮಿನ್ ಹೇಳಿದ್ದಾರೆ.


Click it and Unblock the Notifications









