ಚಕನ್ ಘಟಕದ ಉತ್ಪಾದನೆ ಸ್ಥಳಾಂತರಿಸಲು ಬಜಾಜ್ ಯೋಜನೆ
ಕೆಲವು ಕಾರ್ಮಿಕರು ಕೆಲಸಕ್ಕೆ ಮರಳಲು ಉತ್ಸುಕತೆ ತೋರಿದ್ದರೂ ಬಹುತೇಕ ಮಂದಿ ಬಜಾಜ್ ವಿರೋಧಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದರಿಸಿ ಬಜಾಜ್ ಚಕನ್ ಘಟಕದ ಕಾರ್ಮಿಕರು ಆರಂಭಿಸಿರುವ ಮುಷ್ಕರ ಇದೀಗ ಒಂದು ವರೆ ತಿಂಗಳು ಪರ್ಯಂತ ಮುಂದುವರಿದಿದೆ.
ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆ ಹರಿಯದಿದ್ದರೆ ಚಕನ್ ಘಟಕದ ಶೇಕಡಾ 50ರಷ್ಟು ಉತ್ಪಾದನೆಯನ್ನು ಔರಾಂಗಬಾದ್ ಘಟಕಕ್ಕೆ ಸ್ಥಳಾಂತರಿಸಲಾಗುವುದು ಎಂದು ಬಜಾಜ್ ತಿಳಿಸಿದೆ.
ಬಜಾಜ್ ಈಗಾಗಲೇ ಪಲ್ಸರ್‌ಗಳಂತಹ ಜನಪ್ರಿಯ ಆವೃತ್ತಿಯ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಔರಾಂಗಬಾದ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಅಂದ ಹಾಗೆ ಚಕನ್ ಘಟಕದಲ್ಲಿ ಪಲ್ಸರ್ ಸೇರಿದಂತೆ ಕೆಟಿಎಂ ಡ್ಯೂಕ್ 200 ಹಾಗೂ 390 ವೆರಿಯಂಟ್‌ಗಳು ಉತ್ಪಾದನೆಯಾಗುತ್ತಿದ್ದವು.
ಕೆಲವು ದಿನಗಳ ಹಿಂದೆಯಷ್ಟೇ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸ್ಥಾನವನ್ನು ಬಜಾಜ್ ಕಳೆದುಕೊಂಡಿತ್ತು. ಈ ಸ್ಥಾನವನ್ನು ಹೋಂಡಾ ವಶಪಡಿಸಿಕೊಂಡಿತ್ತು.


Click it and Unblock the Notifications









