ಲಂಬೋರ್ಗಿನಿ 50ರ ಸಂಭ್ರಮಕ್ಕೆ ಸೈಕಲ್ ಮೆರಗು!

ಕೆಲವು ದಿನಗಳ ಹಿಂದೆಯಷ್ಟೇ ಸ್ವಿಜರ್ಲೆಂಡ್‌ನಲ್ಲಿ ಸಾಗುತ್ತಿರುವ 2013 ಜಿನೆವಾ ಮೋಟಾರ್ ಶೋದಲ್ಲಿ ಅತ್ಯಾಕರ್ಷಕ ವೆನನೊ ಕಾರನ್ನು ಅನಾವರಣಗೊಳಿಸಿದ್ದ ಇಟಲಿ ಕಾರು ತಯಾರಕ ಸಂಸ್ಥೆಯಾದ ಲಂಬೋರ್ಗಿನಿ 50ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿತ್ತು.

ಇದರ ಬೆನ್ನಲ್ಲೇ ನೂತನ ಸೈಕಲ್ ಪರಿಚಯ ಮಾಡಿಕೊಟ್ಟಿರುವ ಲಂಬೋರ್ಗಿನಿ, ಜಿನೆವಾ ಮೋಟಾರ್ ಶೋಗೆ ಮತ್ತಷ್ಟು ಮೆರಗು ತುಂಬುವುದರ ಮುಖಾಂತರ ತನ್ನ 50ನೇ ವರ್ಷಾಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಿದೆ.

ನವನವೀನ ಸೂಪರ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ ಲಂಬೋರ್ಗಿನಿ ಇದೀಗ ಅಗ್ಗದ ಸೈಕಲ್ ತಯಾರಿಸಿದೆ. ಈ 50ನೇ ಅಡಿಷನ್ ಸೈಕಲ್ 'ಇಂಪೆಕ್' ಎಂದು ಅರಿಯಲ್ಪಡಲಿದೆ.

ಅಂದ ಹಾಗೆ ಈ ಸೈಕಲ್ ದರ ಜಸ್ಟ್ 1,766,322 ರು.ಗಳಾಗಿವೆ. ಭಾರತೀಯ ಗ್ರಾಹಕನ ದೃಷ್ಟಿಕೋನದಲ್ಲಿ ಇದು ದುಬಾರಿಯಾದರೂ ಲಂಬೋರ್ಗಿನಿ ಪಾಲಿಗಿದು ಅಗ್ಗದ ಸೈಕಲ್ ಆಗಿದೆಯಂತೆ..! ಅಷ್ಟಕ್ಕೂ ಲಂಬೋರ್ಗಿನಿ ಸೈಕಲ್‌ಗೆ 17 ಲಕ್ಷ ರು. ಪಾವತಿಸಿ ಖರೀದಿಸಬಹುದೇ? ಈ ಸೈಕಲಿನಲ್ಲಿ ಅಂತದ್ದೇನಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ ಬನ್ನಿ...

BMC Lamborghini 50th Edition Impec

ಸ್ವಿಜರ್ಲೆಂಡ್ ಮೂಲದ ರೇಸಿಂಗ್ ಸೈಕಲ್ ತಯಾರಕ ಸಂಸ್ಥೆಯಾದ ಬಿಎಂಸಿ ಜತೆ ಕೈಜೋಡಿಸಿಕೊಂಡಿರುವ ಲಂಬೋರ್ಗಿನಿ ಈ 50ನೇ ಆವೃತ್ತಿಯ ಇಂಪೆಕ್ ಸೈಕಲ್ ತಯಾರಿಸಿದೆ.

BMC Lamborghini 50th Edition Impec

ಇದು 50ನೇ ವರ್ಷಾಚರಣೆಯ ಭಾಗವಾಗಿರುವುದರಿಂದ ಸೀಮಿತ 50 ಹಳದಿ ಇಂಪೆಕ್ ಯುನಿಟ್‌ಗಳನ್ನಷ್ಟು ಉತ್ಪಾದಿಸುವ ಯೋಜನೆಗೆ ಲಂಬೋರ್ಗಿನಿ ಮುಂದಾಗಿದೆ.

BMC Lamborghini 50th Edition Impec

ಪ್ರತಿಯೊಂದು ಇಂಪೆಕ್ ಸೈಕಲ್‌ಗಳು ನಂಬರ್ ಬ್ಯಾಡ್ಜ್‌ನಿಂದ ಆಗಮನವಾಗಲಿದೆ. ಹಾಗಿದ್ದರೆ ಇನ್ಯಾಕೆ ತಡ ಈಗಲೇ ತ್ವರೆ ಮಾಡಿ..!

BMC Lamborghini 50th Edition Impec

ಲಂಬೋರ್ಗಿನಿ ಅವೆಂಟಡೊರ್‌ನಲ್ಲಿ ಬಳಕೆ ಮಾಡುವ ಕೆಲವೊಂದು ಸಾಮಾನ್ಯ ಫೀಚರ್ಸ್‌ಗಳನ್ನು ಈ ಇಂಪೆಕ್ ಸೈಕಲ್ ಉತ್ಪಾದನೆಯಲ್ಲೂ ಬಳಸಲಾಗಿದೆ. ಅಂದರೆ ಸೈಕಲ್ ಫ್ರೇಮ್ ವರ್ಕನ್ನು ಕಾರ್ಬನ್ ಫೈಬರ್‌ನಿಂದ ಮಾಡಲಾಗಿದೆ.

BMC Lamborghini 50th Edition Impec

ಹಾಗೆಯೇ ಅವೆಂಟಡೊರ್‌ನಲ್ಲಿರುವ ಸಮಾನ ಲೆಥರ್ ಸೀಟ್‌ಗಳನ್ನು ಇಂಪೆಕ್ ಸೈಕಲಿಗೆ ಆಳವಡಿಸಲಾಗಿದೆ.

BMC Lamborghini 50th Edition Impec

ಈ 50ನೇ ಅಡಿಷನ್ ಇಂಪೆಕ್ ಸೈಕಲ್ ದರ 25,000 ಯುರೋ ಆಗಿದೆ. ಅಂದರೆ ಭಾರತೀಯ ರುಪಾಯಿ ಪ್ರಕಾರ 1,766,322 ಲಕ್ಷ ರು.ಗಳಾಗಿವೆ.

BMC Lamborghini 50th Edition Impec

ಇದೀಗ ಪ್ರಸ್ತುತ ಸೈಕಲ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Wednesday, March 13, 2013, 10:45 [IST]
English summary
The Italian supercar maker and the Switzerland based racing bicycle maker BMC have teamed yet again to bring out the Lamborghini 50th Edition Impec, which is similar to last year's Lambo Orange special edition Impec of which only 30 were built.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+