ವಿದೇಶಕ್ಕೆ ಪಯಣ ಬೆಳೆಸಲಿರುವ ಹೀರೊ ಬೈಕ್‌ಗಳು
ದೇಶದ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಯಶ ಸಾಧಿಸಿರುವ ಹೀರೊ ಬೈಕ್‌ಗಳೀಗ ವಿದೇಶಕ್ಕೆ ಪಯಣ ಬೆಳೆಸುತ್ತಿವೆ. ಹೌದು, ವಿದೇಶಕ್ಕೆ ರಫ್ತು ಮಾಡುವ ಕುರಿತು ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್ ಯೋಜನೆ ಹೊಂದಿದೆ.
ಉತ್ಪನ್ನದಲ್ಲಿ ವಿಶ್ವದಲ್ಲೇ ಅಗ್ರಗಣ್ಯ ಎನಿಸಿಕೊಂಡಿರುವ ಹೀರೊ ಇದೀಗ ತನ್ನ ಜನಪ್ರಿಯ ಆವೃತ್ತಿಗಳನ್ನು ಅಮೆರಿಕ ಹಾಗೂ ಆಫ್ರಿಕಾ ಖಂಡಗಳಲ್ಲಿ ಪರಿಚಯಿಸಲಿದೆ. ಈ ಮುಖಾಂತರ ಮುಂದಿನ ಐದು ವರ್ಷಗಳಲ್ಲಿ 50 ಲಕ್ಷ ಬೈಕ್‌ಗಳನ್ನು ವಿದೇಶದಲ್ಲಿ ಮಾರಾಟ ಮಾಡುವ ಗುರಿ ಹೊಂದಿದೆ.
100ರಿಂದ ಆರಂಭವಾಗಿ 125ಸಿಸಿ ವರೆಗಿನ ಬೈಕ್‌ಗಳನ್ನು ಲ್ಯಾಟಿನ್ ಅಮೆರಿಕ ಸೇರಿದ ದೇಶಗಳಿಗೆ ಪರಿಚಯಿಸಲಿದೆ. ಮೇಲೆ ಸೂಚಿಸಿದಂತೆ ಯಾವುದೇ ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿಲ್ಲ. ಬದಲಾಗಿ ಭಾರತದಲ್ಲಿರುವ ಉತ್ಪನ್ನಗಳನ್ನೇ ಪರಿಚಯಿಸಲಾಗುತ್ತಿದೆ.
ಪ್ರಸ್ತುತ ಪೆರು, ಲ್ಯಾಟಿನ್ ಅಮೆರಿಕ, ಸ್ಲಾವಡೋರ್, ಗ್ವಾಂಟಿಮಾಲಾ, ಸೆಂಟ್ರಲ್ ಅಮೆರಿಕದಲ್ಲಿ ಹೊಂಡುರಸ್ ಹಾಗೂ ಆಫ್ರಿಕಾದಲ್ಲಿ ಐವರಿಕೋಸ್ಟ್ ನಗರಗಳಲ್ಲಿ ಲಾಂಚ್ ಮಾಡುವ ಇರಾದೆ ಹೊಂದಿದೆ. ಹಾಗೆಯೇ ಭವಿಷ್ಯದಲ್ಲಿ 30 ದೇಶಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.


Click it and Unblock the Notifications









