ದೀಪಾವಳಿಗೆ ಹೀರೊ ಪರಿಷ್ಕೃತ ಬೈಕ್‌ಗಳ ಹಬ್ಬ

Written By:
To Follow DriveSpark On Facebook, Click The Like Button
ದೀಪಾವಳಿ ವೇಳೆಗೆ ತನ್ನೆಲ್ಲ ಪರಿಷ್ಕೃತ ಮಾಡೆಲ್‌ಗಳ ಬೈಕ್‌ಗಳನ್ನು ಪರಿಚಯಿಸಲಾಗುವುದೆಂದು ದೇಶದ ಪ್ರಮುಖ ದ್ವಿಚಕ್ರ ಉತ್ಪನ್ನ ಕಂಪನಿಯಾಗಿರುವ ಹೀರೊ ಮೊಟೊಕಾರ್ಪ್ ಘೋಷಿಸಿದೆ.

ಇದಾದ ಬೆನ್ನಲ್ಲೇ 2014 ಹೊಸ ವರ್ಷದಲ್ಲಿ ನೂತನ ಬೈಕ್ ಆಗಮನವಾಗಲಿದೆ ಎಂಬುದನ್ನು ಕೂಡಾ ಕಂಪನಿ ಸ್ಪಷ್ಟಪಡಿಸಿದೆ. ನಿಮ್ಮ ಮಾಹಿತಿಗಾಗಿ ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಮೂಲಕ ಸೂಪರ್ ಬೈಕ್ ಉತ್ಪಾದಕ ಕಂಪನಿಯಾದ ಎರಿಕ್ ಬುಲ್ ರೇಸಿಂಗ್‌ನ (ಇಬಿಆರ್) ಶೇಕಡಾ 49.2ರಷ್ಟು ಶೇರುಗಳನ್ನು ಹೀರೊ ಖರೀದಿಸಿತ್ತು.

ಇದೀಗ ಇಬಿಆರ್ ಜತೆಗೂಡಿ ಸ್ಕೂಟರ್ ಸೇರಿದಂತೆ 19 ಆವೃತ್ತಿಗಳ ಪರಿಷ್ಕೃತ ಮಾಡಲ್ ಬಿಡುಗಡೆ ಮಾಡಲು ಹೀರೊ ಸಜ್ಜಾಗುತ್ತಿದೆ. ಈ ಎಲ್ಲ ಪರಿಷ್ಕೃತ ಮಾಡಲ್‌ಗಳು ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ಹೊತ್ತಿಗೆ ಗ್ರೀನ್ ಫೀಲ್ಡ್ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿರುವ ನೂತನ ಬೈಕ್ 2014 ವರ್ಷಾಂರಂಭದಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ಇಬಿಆರ್ ಜತೆಗೂಡಿ ಆಫ್ರಿಕಾ, ಯುರೋಪ್ ಹಾಗೂ ಉತ್ತಮ ಅಮೆರಿಕ ಮಾರುಕಟ್ಟೆಗಳಿಗೂ ತನ್ನ ಮಾರಾಟ ವಿಸ್ತರಿಸುವ ಯೋಜನೆಯನ್ನು ಹೀರೊ ಹೊಂದಿದೆ.

English summary
Hero Moto Corp Ltd. (HMCL) is planning to increase it's bike range in Indian market. As per information Hero Moto will launch new revamped models around Diwali this year followed by the launch of a complete new bike in 2014, an official said.
Story first published: Wednesday, July 3, 2013, 12:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark