ಜಾನ್ ಅಬ್ರಹಾಂರಿಂದ ವರ್ಷದ ಬೈಕ್ ಅಭಿಯಾನ ಆರಂಭ
ಕ್ಯಾಸ್ಟ್ರಾಲ್ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ಜಾನ್ ಅಬ್ರಹಾಂ ಕಳದೆ ದಿನ (ಮಂಗಳವಾರ) ಮುಂಬೈನಲ್ಲಿ ಕ್ಯಾಸ್ಟ್ರಾಲ್ ಪವರ್1 ಪ್ಯಾಕ್ ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಈ ನಟ ಕ್ಯಾಸ್ಟ್ರಾಲ್ ಪವರ್1 ಮತ್ತು ಎಕ್ಸ್ ಬಿಎಚ್‌ಪಿ ಪ್ರಾಯೋಜಿತ ವರ್ಷದ ಬೈಕ್ ಅಭಿಯಾನವನ್ನು ಸಹ ಉದ್ಘಾಟಿಸಿದ್ದಾರೆ.
ಸಂಶ್ಲೇಷಿತ ಎಂಜಿನ್ ಒಯಿಲ್ ಹೊಂದಿರುವ ಕ್ಯಾಸ್ಟ್ರಾಲ್ ಪವರ್1, ಎಂಜಿನ್‌ನಲ್ಲಿ ತೈಲದ ಹರಿವನ್ನು ವರ್ಧಿಸುತ್ತದೆ. ಈ ಮೂಲಕ ಉನ್ನತ ವೇಗವರ್ಧನೆ ಜತೆ ಹೆಚ್ಚು ಪವರ್ ಸಪ್ಲೇ ಮಾಡಲು ನೆರವಾಗುತ್ತದೆ.
ಒಟ್ಟು 10 ವಿಭಾಗಗಳಲ್ಲಾಗಿ ರೇಸ್ ನಡೆಯಲಿದೆ. ಅವುಗಳೆಂದರೆ,
* ವರ್ಷದ ಪವರ್ ಬೈಕರ್,
* ವರ್ಷದ ವಾಂಡರರ್,
* ವರ್ಷದ ಟ್ರಾಕ್ ರೇಸರ್,
* ವರ್ಷದ ಫ್ರಿಸ್ಟೈಲ್ ಬೈಕರ್,
* ವರ್ಷದ ಮಹಿಳಾ ಬೈಕರ್,
* ವರ್ಷದ ಫೈಟ್ ಬ್ಯಾಕ್ ಬೈಕರ್,
* ವರ್ಷದ ಬೈಕ್ ಕಸ್ಟಮೈಸರ್,
* ವರ್ಷದ ಏಂಜಲ್ ಬೈಕರ್,
* ವರ್ಷದ ಮೋಟಾರ್ ಸೈಕ್ಲಿಂಗ್ ಕ್ಲಬ್ ಹಾಗೂ
* ವರ್ಷದ ರಾಲಿ ರೈಡರ್ ಪ್ರಶಸ್ತಿ


Click it and Unblock the Notifications









