ಹೊಸ ವರ್ಷದಲ್ಲಿ ಮಹೀಂದ್ರ ಡಬಲ್ ಧಮಾಕಾ

By Nagaraja

ಹೊಸ ವರ್ಷದಲ್ಲಿ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಎರಡು ಅತಿ ನೂತನ ಬೈಕ್‌ಗಳನ್ನು ಪರಿಚಯಿಸಲು ಮಹೀಂದ್ರ ಟು ವಿಲ್ಹರ್ಸ್ ಸನ್ನದ್ಧವಾಗಿ ನಿಂತಿದೆ.

ಈ ಮೂಲಕ ಮಹೀಂದ್ರ ಗ್ರೂಪಿನ ದ್ವಿಚಕ್ರ ವಾಹನ ವಿಭಾಗವಾಗಿರುವ ಮಹೀಂದ್ರ ಟು ವಿಲ್ಹರ್ಸ್ ಹೊಸ ವರ್ಷಕ್ಕೆ ಡಬಲ್ ಧಮಾಕಾ ನೀಡಲಿದೆ. ಈ ಹಿಂದೆ 110 ಸಿಸಿ ಸ್ಟಾಲಿಯೊ ಬೈಕ್ ವೈಫಲ್ಯ ಅನುಭವಿಸಿರುವುದನ್ನು ನಿಮ್ಮ ನೆನಪಿನಲ್ಲಿರಬಹುದು. ಆದರೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ತಿರುಗೇಟು ನೀಡಲು ಸಜ್ಜಾಗಿರುವ ಮಹೀಂದ್ರ ನೂತನ ಬೈಕನ್ನು ಅಭಿವೃದ್ಧಪಡಿಸಿದೆ.

ಎರಡು ಮಹೀಂದ್ರ ಬೈಕ್‌ಗಳ ಪೈಕಿ ಪ್ಯಾಂಥರೊ 110 ಸಿಸಿ ಪ್ರಯಾಣಿಕ ಬೈಕ್ ಪ್ರಮುಖವಾಗಿದೆ. ಸ್ಟಾಲಿಯೊ ಅಪ್‌ಡೇಟಡ್ ವರ್ಷನ್ ಆಗಿ ಪ್ಯಾಂಥರೊ ಆಗಮನವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಪ್ಯಾಂಥರೊ ಬೈಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಈಗಾಗಲೇ ಹಲವು ಘಟ್ಟಗಳಲ್ಲಾಗಿ ಪ್ಯಾಂಥರೊ ಟೆಸ್ಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆಗಳಿಲ್ಲ. ಮಹೀಂದ್ರದಿಂದ ಬಿಡುಗಡೆಯಾಗಲಿರುವ ಎರಡನೇ ಬೈಕ್ ಯಾವುದೆಂದರೆ ಕ್ರೀಡಾ ಬೈಕ್ ಆದ ಮೊಜೊ.

ಮಹೀಂದ್ರ ಪ್ಯಾಂಥರೊ

ಮಹೀಂದ್ರ ಪ್ಯಾಂಥರೊ

ಮಹೀಂದ್ರ ಮೊಜೊ 299 ಸಿಸಿ ಬೈಕ್ ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 28 ಪಿಎಸ್ ಪವರ್ ಉತ್ಪಾದಿಸಲಿದೆ. ಇದರ ಎಂಜಿನ್ ಆರು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

image soure: bikeadvice.in

ಮಹೀಂದ್ರ ಪ್ಯಾಂಥರೊ

ಮಹೀಂದ್ರ ಪ್ಯಾಂಥರೊ

ಮಹೀಂದ್ರ ಪ್ಯಾಂಥರೊ ಸ್ಪೈ ಷಾಟ್ಸ್

image source: bikeadvice.in

ಮಹೀಂದ್ರ ಪ್ಯಾಂಥರೊ

ಮಹೀಂದ್ರ ಪ್ಯಾಂಥರೊ

2012ರ ದೆಹಲಿ ಆಟೋ ಷೋದಲ್ಲಿ ಪರಿಷ್ಕೃತ ಸ್ಟಾಲಿಯೊ ಆವೃತ್ತಿಯನ್ನು ಪ್ರದರ್ಶಿಸಿದ್ದ ಮಹೀಂದ್ರ ಮಾರುಕಟ್ಟೆಗೆ ರಿ ಎಂಟ್ರಿ ಕೊಡುವುದರ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡಿತ್ತು.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ಈ ಹಿಂದೆ ಕಾನ್ಸೆಪ್ಟ್ ಬೈಕ್ ಆಗಿ ಪ್ರದರ್ಶನಕ್ಕೀಡಾಲಾಗಿದ್ದ ಮೊಜೊ ಇದೀಗ ಸಂಪೂರ್ಣ ಸಿದ್ಧಗೊಂಡಿದೆ.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

2012 ದೆಹಲಿ ಆಟೋ ಷೋದಲ್ಲಿ ಪ್ರದರ್ಶನಗೊಂಡಿದ್ದ ಮಹಿಂದ್ರ ಮೊಜೊ

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ಡ್ಯುಯಲ್ ಹೆಡ್‌ಲೈಟ್ಸ್ ಮೊಜೊದಲ್ಲಿ ಕಂಡುಬಂದಿರುವ ಮತ್ತೊಂದು ಗಮನಾರ್ಹ ಫೀಚರ್ ಆಗಿದೆ.

More from DriveSpark

Article Published On: Wednesday, January 2, 2013, 16:46 [IST]
English summary
Mahindra 2 Wheelers, the scooter and motorcycle division of Mahindra & Mahindra is preparing the ground for the launch of two new motorcycles in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+