ವಿಶ್ವದ ಅತಿ ಅಗ್ಗದ ಬೈಕ್ ಭಾರತದಲ್ಲಿ ತಯಾರಿ

Written By:
ಟಾಟಾ ಮೋಟಾರ್ಸ್ ವಿಶ್ವದ ಅತಿ ಅಗ್ಗದ 'ನ್ಯಾನೋ' ಕಾರನ್ನು ತಯಾರಿಸಿರುವುದು ಸದ್ಯ ಇತಿಹಾಸ. ಇದೀಗ ಯಮಹಾ ಸರದಿ. ಹೌದು, ವಿಶ್ವದ ಅತಿ ಅಗ್ಗದ ಬೈಕನ್ನು ಯಮಹಾ ದ್ವಿಚಕ್ರ ವಾಹನ ತಯಾರಕ ಕಂಪನಿ ತಯಾರಿಸಲಿದೆ.

ಇದಕ್ಕಿಂತಲೂ ಖುಷಿ ನೀಡುವ ಸಂಗತಿ ಏನೆಂದರೆ ಪ್ರಸ್ತುತ ಬೈಕ್ ಭಾರತದಲ್ಲೇ ನಿರ್ಮಾಣವಾಗಲಿದೆ. ಮೂಲಗಳ ಪ್ರಕಾರ 500 ಡಾಲರ್ ವೆಚ್ಚದಲ್ಲಿ ಅಂದರೆ 27,000 ರು.ಗಳಲ್ಲಿ ಈ ಬಹುನಿರೀಕ್ಷಿತ ಬೈಕ್ ಆಗಮನವಾಗಲಿದೆ.

ಯಮಹಾ ಯೋಜನೆ ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದು ವಿಮರ್ಶಕರ ಪ್ರಶ್ನೆಯಾಗಿದೆ. ಒಂದು ವೇಳೆ ಕಡಿಮೆ ಗುಣಮಟ್ಟದ ಬಿಡಿಭಾಗ ಜೋಡಣೆಯಾದರೆ ಕಂಪನಿಯ ವರ್ಚಸ್ಸನ್ನು ಕುಗ್ಗಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಯಮಹಾ ಘಟಕದಲ್ಲಿ ಬೈಕ್ ನಿರ್ಮಾಣವಾಗಲಿದೆ.

ಹಾಗೆಯೇ ಬಿಡುಗಡೆ ದಿನಾಂಕ ಹಾಗೂ ಇನ್ನಿತರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತನ್ನ ಸ್ಪೋರ್ಟಿ ಹಾಗೂ ನಿರ್ವಹಣಾ ಬೈಕ್‌ಗಳಿಗೆ ಹೆಸರುವಾಸಿಯಾಗಿರುವ ಯಮಹಾ, ಈ 100ಸಿಸಿ ಬೈಕ್ ಕಡಿಮೆ ದರದಲ್ಲಿ ಹೇಗೆ ಅಭಿವೃದ್ಧಿಪಡಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತ ಮಾತ್ರ ಗಮನ ಕೇಂದ್ರಿಕರಿಸಿ ಬೈಕ್ ರೂಪಿಸಲಾಗುತ್ತಿಲ್ಲ. ಪ್ರಸ್ತುತ ಬೈಕ್ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಚೀನಾ ದೇಶಗಳಿಗೂ ರಫ್ತು ಆಗಲಿದೆ. ಒಟ್ಟಿನಲ್ಲಿ 2015ರ ವೇಳೆಗೆ ಭಾರತದಲ್ಲಿ 10 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಯಮಹಾ ಹೊಂದಿದೆ.

English summary
Yamaha has started working on the worlds cheapest motorcycle at its research centre in Uttar Pradesh, India, that will be exported at a price of 500 US dollars, though its launch date in India has yet not been revealed.
Story first published: Friday, April 12, 2013, 16:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark