ಹೊಸ ಪಲ್ಸರ್‌ ನಿರೀಕ್ಷೆಯಲ್ಲಿದ್ದೀರಾ? ಸ್ವಲ್ಪ ಕಾದಿರಿ

By Nagaraja

ಭಾರತದಲ್ಲಿ ಸ್ಪೋರ್ಟ್ಸ್ ಬೈಕ್ ಅಂದರೆ ಏನೆಂಬುದು ಬಜಾಜ್ ಪಲ್ಸರ್ ಆಗಮನದ ಬಳಿಕ ತಿಳಿಯಿತು. ಒಂದು ಕಾಲದಲ್ಲಿ ಯುವ ಗ್ರಾಹಕರಿಂದ ಹಿಡಿದು ದೊಡ್ಡವರ ವರೆಗೂ ಪಲ್ಸರ್ ಜ್ವರ ಹಬ್ಬಿತ್ತು. ಈ ಮೂಲಕ ದೇಶದ ನಂ.1 ಕ್ರೀಡಾ ಬೈಕ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಪಲ್ಸರ್ ಮಾರಾಟದ ವಿಚಾರದಲ್ಲಿ ಧೂಳೆಬ್ಬಿಸಿತ್ತು.

ಅಷ್ಟಕ್ಕೂ ನೀವು ಹೊಸ ಪಲ್ಸರ್ ಬೈಕ್ ನಿರೀಕ್ಷೆಯಲ್ಲಿದ್ದೀರಾ? ಇನ್ನು ಸ್ವಲ್ಪ ಕಾದಿರಿ. ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಆಟೋ, ಬಹುಬೇಗನೇ ಹೊಸ ಪಲ್ಸರ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

pulsar 200ns

ಕೇವಲ ಪಲ್ಸರ್ ಮಾತ್ರವಲ್ಲದೆ ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶ ಸಾಧಿಸಿರುವ ಬೈಕ್‌ಗಳಲ್ಲಿ ಒಂದಾಗಿರುವ ಹೊಸ ಡಿಸ್ಕವರ್ ಮಾದರಿಯನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಇನ್ನು ಪ್ಲಾಟಿನಂ ಶ್ರೇಣಿಯ ಬೈಕ್‌ಗಳನ್ನು ಮಗದೊಮ್ಮೆ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಬಲ್ಲ ಮೂಲಗಳ ಪ್ರಕಾರ 2015ನೇ ಸಾಲಿನಲ್ಲಿ ಪಲ್ಸರ್ 200ಎಸ್‌ಎಸ್ ಮತ್ತು 400 ಎಸ್‌ಎಸ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಬಜಾಜ್ ಸಂಸ್ಥೆ ಹೊಂದಿದೆ. ಸಂಸ್ಥೆಯು ಈಗಾಗಲೇ 200 ಎನ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ.

400 ಸಿಎಸ್ ಬಜಾಜ್ ಪಾಲಿಗೆ ಮಹತ್ವಕಾಂಕ್ಷೆಯ ಮಾದರಿಯಾಗಲಿದ್ದು, 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ಈ ಎಲ್ಲದರ ಮೂಲಕ ಹೋಂಡಾ ಹಾಗೂ ಹೀರೊ ಮಾದರಿಗಳಿಗೆ ಪ್ರತಿಸ್ಪರ್ಧೆ ಒಡ್ಡಲಿದೆ.

More from DriveSpark

Article Published On: Saturday, November 15, 2014, 13:59 [IST]
English summary
India's largest two-wheeler manufacturer and seller Bajaj Auto has launched several products domestically this year. They have launched new Pulsar and Discover models in 2014. The Indian manufacturer had showcased several new and interesting concept at 2014 Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+