ಬಜಾಜ್ ಕಾರ್ಮಿಕರ ಮುಷ್ಕರ ಮುಂದೂಡಿಕೆ
ಬಜಾಜ್ ಆಟೋ ಚಕನ್ ಘಟಕದಲ್ಲಿ ವಿಶ್ವ ಕಲ್ಯಾಣ್ ಕಾಮ್‌ಗಾರ್ ಸಂಘಟನೆ (ವಿಕೆಕೆಸಿ) ಎಪ್ರಿಲ್ 28 ನಡೆಸಲು ಉದ್ದೇಶಿಸಿರುವ ಕಾರ್ಮಿಕ ಮುಷ್ಕರವನ್ನು ಎರಡು ವಾರಗಳಷ್ಟು ಕಾಲ ಮುಂದೂಡಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸಂಘಟನೆಯು, ಕಾರ್ಮಿಕರ ಒಳಿತಿಗಾಗಿ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಪೂರೈಸಲು ವ್ಯವಸ್ಥಾಪಕ ಮಂಡಳಿಗೆ ಇನ್ನಷ್ಟು ಕಾಲವಕಾಶ ನೀಡಲಾಗಿದೆ ಎಂದಿದೆ.
ಈ ನಡುವೆ ಉತ್ಪಾದನೆಗೆ ಯಾವುದೇ ಧಕ್ಕೆ ಬರದಂತೆ ಎಚ್ಚೆತ್ತುಕೊಂಡಿರುವ ಬಜಾಜ್ ಆಟೋ ಸಂಸ್ಥೆಯು, ತನ್ನ ಜನಪ್ರಿಯ ಪಲ್ಸರ್ 150 ಹಾಗೂ ಪಲ್ಸರ್ 180 ಮಾದರಿಗಳ ಉತ್ಪಾದನೆಯನ್ನು ಔರಂಗಬಾದ್ ಘಟಕಕ್ಕೆ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿಯಿದೆ. ಇದು ಚಕನ್ ಘಟಕದ ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟಾಗಲಿದೆ.

ಇದಕ್ಕೂ ಮೊದಲು ಎಪ್ರಿಲ್ 14ರಂದು ಬಜಾಜ್ ಆಟೋ ವ್ಯವಸ್ಥಾಪಕ ಮಂಡಳಿಗೆ ಪತ್ರ ಬರೆದಿದ್ದ ಕಾರ್ಮಿಕ ಸಂಘಟನೆಯು, ಕೆಲವೊಂದು ಬೇಡಿಕೆಗಳನ್ನು ಮುಂದಿರಿಸಿ ಎಪ್ರಿಲ್ 28ರಿಂದ ಮುಷ್ಕರ ಹೂಡುವುದಾಗಿ ಬೆದರಿಕೆ ಒಡ್ಡಿತ್ತು.
ಇದರಲ್ಲಿ ಕಾರ್ಪೋರೇಟ್ ಸಾಮೂಹಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್), ಅಪೌಷ್ಟಿಕತೆ, ಕಾರ್ಮಿಕರ ಮಕ್ಕಳ ಉದ್ಯೋಗ, ಸಂಸ್ಥೆಯ ಸ್ಥಾಪಕ ಜಮ್ನಲಾಲ್ ಬಜಾಜ್ ಹೆಸರಲ್ಲಿ ಸಂಗ್ರಾಲಯ ಹಾಗೆಯೇ ಕಾರ್ಮಿಕರಿಗೆ ರು. 10ರ 500 ಶೇರುಗಳ ಹಂಚಿಕೆ ಎಂಬಿತ್ಯಾದಿ ವಿಚಾರಗಳು ಒಳಗೊಂಡಿವೆ.
900 ಖಾಯಂ ನೌಕರರು ಸೇರಿದಂತೆ 2000ದಷ್ಟು ಕಾರ್ಮಿಕರಲು ಬಜಾಜ್ ಚಕನ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪಲ್ಸರ್, ಕೆಟಿಎಂ ಹಾಗೂ ನಿಂಜಾ ಮಾದರಿಗಳು ಸೇರಿದಂತೆ ವರ್ಷಂಪ್ರತಿ 1.2 ಮಿಲಿಯನ್ ಮೋಟಾರುಸೈಕಲ್‌ಗಳು ನಿರ್ಮಾಣವಾಗುತ್ತಿದೆ.


Click it and Unblock the Notifications








