ಲಂಕಾ ಸರಕಾರದ ಪಾಲಾಗಲಿದೆ ಬಜಾಜ್ ಡಿಸ್ಕವರ್
ಶೀರ್ಷಿಕೆ ಓದಿ ಗಾಬರಿಯಾಗದಿರಿ. ವಿಷಯ ಏನೆಂದರೆ ಕಡಲಾಚೆಗಿನ ಚೊಕ್ಕದಾದ ದ್ವೀಪ ರಾಷ್ಟ್ರವಾಗಿರುವ ನೆರೆಯ ಶ್ರೀಲಂಕಾ ಸರಕಾರದಿಂದ 1.25 ಲಕ್ಷದಷ್ಟು ಬಜಾಜ್ ಡಿಸ್ಕವರ್ 125ಎಂ ಬೈಕ್‌ಗಳಿಗಾಗಿ ಆರ್ಡರ್ ಲಭಿಸಿದೆ.
ಲಂಕಾದಲ್ಲಿರುವ ಬಜಾಜ್ ಆಟೋ ವಿತರಕರಾಗಿರುವ ಡೇವಿಡ್ ಪೈರಿಸ್ ಮೋಟಾರು ಸಂಸ್ಥೆಯು ಇದನ್ನು ಖಚಿತಪಡಿಸಿದೆ. ಲಂಕಾ ಸರಕಾರದ ವಿವರವಾದ ಮೌಲ್ಯಮಾಪನದ ಬಳಿಕ ಇಂತಹದೊಂದೂ ಆರ್ಡರ್ ಗಿಟ್ಟಿಸಿಕೊಳ್ಳುವಲ್ಲಿ ಬಜಾಜ್ ಯಶ ಕಂಡಿದೆ.

ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಲಂಕಾ ಸರಕಾರದ ಬೇಡಿಕೆಯನ್ನು ಪೂರೈಸುವ ಇರಾದೆಯನ್ನು ಬಜಾಜ್ ಹೊಂದಿದೆ.
ಭಾರತದಲ್ಲೂ ಬಜಾಜ್ ಡಿಸ್ಕವರ್ ಬೈಕ್‌ಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 50,530 ರು.ಗಳಾಗಿವೆ.


Click it and Unblock the Notifications








