ವರ್ಷದಲ್ಲೇ ಹೀರೊ ಶ್ರೇಷ್ಠ ಸಾಧನೆ; 6.1 ಮಿ. ಯುನಿಟ್ ಮಾರಾಟ

Written By:

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ 2013ನೇ ಸಾಲಿನ ಮಾರಾಟದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇದುವರೆಗಿನ ವರ್ಷವಾರು ಅಂಕಿಅಂಶದಲ್ಲಿ 2013 ಸಾಲಿನಲ್ಲಿ ಹೀರೊ ಅತಿ ಹೆಚ್ಚು ಮಾರಾಟ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಹೀರೊ ಪಾಲಿಗೆ ಶ್ರೇಷ್ಠ ವರ್ಷ ಎನಿಸಿಕೊಂಡಿರುವ 2013ನೇ ಸಾಲಿನಲ್ಲಿ ಈ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ಒಟ್ಟು 61,83,784 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇದು 2012ನೇ ಅವಧಿಯಲ್ಲಿ 61,20,259 ಯುನಿಟ್‌ಗಳಾಗಿದ್ದವು. ಈ ಮುಖಾಂತರ ತಾವು ಯಾಕೆ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ.

Hero MotoCorp

ಈ ಪೈಕಿ 2013ನೇ ಡಿಸೆಂಬರ್ ತಿಂಗಳು ಹೀರೊ ಪಾಲಿಗೆ ಶುಭಕರವಾಗಿರಲಿಲ್ಲ. ಈ ಅವಧಿಯಲ್ಲಿ ಸಂಸ್ಥೆಯು 5,24,990 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡಿತ್ತು. ಇದು ಕಳೆದ ಬಾರಿ 5,41,615 ಯುನಿಟ್ ಮಾತ್ರವಾಗಿತ್ತು. ಹಾಗಿದ್ದರೂ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ಶ್ರೇಷ್ಠ ಸಾಧನೆ ತೋರಿದ್ದು, ಒಟ್ಟು 16,80,940 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ಬಾರಿಯಿದು 15,73,135 ಯುನಿಟ್‌ಗಳಾಗಿದ್ದವು. ಈ ಮೂಲಕ ಶೇಕಡಾ 7ರಷ್ಟು ವರ್ಧನೆ ದಾಖಲಿಸಿಕೊಂಡಿದೆ.

ಅದೇ ರೀತಿ 2013 ಎಪ್ರಿಲ್‌ನಿಂದ ಡಿಸೆಂಬರ್ ವರೆಗಿನ ಮಾರಾಟವು 46,56,433 ಯುನಿಟ್‌ಗಳಿಗೆ ಏರಿಕೆಯಾಗಿದೆ. ಸಂಸ್ಥೆಯು 2012 ಎಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ 45,48,232 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡಿದ್ದವು.

ಕೇವಲ ಮಾರಾಟ ಮಾತ್ರವಲ್ಲ, ಹಲವಾರು ವಿಚಾರಗಳಿಂದಾಗಿ ಹೀರೊ ಪಾಲಿಗೆ 2013ನೇ ಸಾಲು ಸ್ಮರಣೀಯವೆನಿಸಿತ್ತು. ಯಾಕೆಂದರೆ ಇದೇ ಸಾಲಿನಲ್ಲಿ ಅಮೆರಿಕದ ಮೋಟಾರು ವಾಹನ ತಯಾರಕ ಸಂಸ್ಥೆಯಾದ ಇಬಿಆರ್‌ನಲ್ಲಿ ಶೇರು ಸಾಧಿಸಿತ್ತಲ್ಲದೆ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಹೀರೊ ಇಬಿಆರ್ ಪ್ರವೇಶವೂ ಷೋಷಣೆಯಾಗಿತ್ತು.

English summary
2013 was the best year in Hero MotoCorp's history as the two wheeler giant recorded its highest ever yearly sales
Story first published: Monday, January 6, 2014, 14:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark