ಹೀರೊ ಕಮಾಲ್; ಸೆಪ್ಟೆಂಬರ್ ತಿಂಗಳಲ್ಲಿ 6 ಲಕ್ಷ ಮಾರಾಟ

Written By:

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಲಿಮಿಟೆಡ್ (ಎಚ್‌ಎಂಸಿಎಲ್) ಹೆಸರಿಗೆ ತಕ್ಕಂತೆ ಮಾರಾಟದಲ್ಲೂ ಅದ್ಬುತ ಸಾಧನೆ ಮಾಡಿದೆ. ದ್ವಿಚಕ್ರ ಪ್ರೇಮಿಗಳ ಅಚ್ಚುಮೆಚ್ಚಿನ ಸಂಸ್ಥೆಯಾಗಿರುವ ಹೀರೊ, 2014 ಸೆಪ್ಟೆಂಬರ್ ತಿಂಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ.

ಈ ಮೂಲಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಮಾರಾಟದಲ್ಲಿ ಶೇಕಡಾ 30ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 4,68,670 ಯುನಿಟ್‌ಗಳ ಮಾರಾಟ ಕಂಡುಕೊಂಡಿತ್ತು.

To Follow DriveSpark On Facebook, Click The Like Button
Hero Splendor Pro Classic

ಹಾಗಿದ್ದರೂ ಸಂಸ್ಥೆಯ ನಿಖರ ಅಂಕಿಅಂಶ ಇನ್ನಷ್ಟೇ ಬಯಲಾಗಬೇಕಾಗಿದೆ. ಇದರಿಂದಾಗಿ ಒಟ್ಟು ಮಾರಾಟ ಸಂಖ್ಯೆ ಆರು ಲಕ್ಷಕ್ಕೂ ಮೀರಲಿದೆ. ಇದರೊಂದಿಗೆ ಮೂರನೇ ಬಾರಿಗೆ ತಿಂಗಳ ಮಾರಾಟದಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಾರಾಟ ದಾಖಲಿಸುತ್ತಿದೆ. ಈ ಹಿಂದೆ 2013 ಅಕ್ಟೋಬರ್ (6.25 ಲಕ್ಷ ಯುನಿಟ್) ಮತ್ತು ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ (6.02) ಆರು ಲಕ್ಷಕ್ಕೂ ಹೆಚ್ಚು ಮಾರಾಟ ಸಾಧಿಸಿತ್ತು.

ಇನ್ನೊಂದು ಪ್ರಮುಖವಾದ ಬೆಳವಣಿಗೆಯಲ್ಲಿ ನವರಾತ್ರಿ ಹಬ್ಬದ ಈ ಸುಸಂದರ್ಭದಲ್ಲಿ ಮೊದಲ ಆರು ದಿನಗಳಲ್ಲಿ (ಸೆ. 25ರಿಂದ 30ರ ವರೆಗೆ) 1.7 ಮಾರಾಟ ದಾಖಲಿಸಿರುವ ಹೀರೊ ಶೇಕಡಾ 15ರಷ್ಟು ಏರಿಕೆ ದಾಖಲಿಸಿದೆ. ಇದು ದಶರಾ ಮತ್ತು ದೀಪಾವಳಿ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ತುಂಬುವ ನಿರೀಕ್ಷೆಯಿದೆ. ಗ್ರಾಹಕರಿಗೆ ಇನ್ನಷ್ಟು ಹುರುಪು ಮುಟ್ಟಿಸಿರುವ ಹೀರೊದ 10 ಹೊಸ ಹಾಗೂ ಪರಿಷ್ಕೃತ ಮಾದರಿಗಳು ಈ ಹಬ್ಬದ ವೇಳೆಯಲ್ಲಿ ಗ್ರಾಹಕರನ್ನು ತಲುಪಲಿದೆ.

English summary
Riding on strong demand for its exciting range of products, Hero MotoCorp Ltd. (HMCL), the world’s largest two-wheeler manufacturer, has clocked a whopping 6-lakh units of two-wheelers in despatch sales in the month of September.
Story first published: Thursday, October 2, 2014, 14:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark