ಗುಜರಾತ್ ಘಟಕಕ್ಕೆ ಹೋಂಡಾ 1,100 ಕೋಟಿ ರು. ಹೂಡಿಕೆ

Written By:

ಇದೀಗಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರಕಾರ ಬಹುನಿರೀಕ್ಷಿತ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿತ್ತು. ಇದರ ಬೆನ್ನಲ್ಲೇ ಸಿಹಿ ಸುದ್ದಿ ಬಿತ್ತರಿಸಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ಸ್, ತನ್ನ ಗುಜರಾತ್ ಘಟಕಕ್ಕೆ ಬರೋಬ್ಬರಿ 1,100 ಕೋಟಿ ರುಪಾಯಿ ಹೂಡಿಕೆ ನಡೆಸುವುದಾಗಿ ಘೋಷಿಸಿದೆ.

ಭಾರತದಲ್ಲಿ ಹೀರೊ ಬೈಕ್‌ಗೆ ಸರಿಯಾಟಿಯಾಗಿ ಹೋಂಡಾ ಬೈಕ್ ಎದ್ದು ನಿಂತಿದೆ. ಗ್ರಾಹಕರಿಗೆ ವಿಶ್ವಾಸಾರ್ಹ ಬೈಕ್‌ಗಳನ್ನು ಕೈಗೆಟಕುವ ದರಗಳಲ್ಲಿ ಪರಿಚಯಿಸಿರುವುದೇ ಹೋಂಡಾ ಸಂಸ್ಥೆಯ ಸಾಧನೆಯಾಗಿದೆ.

Honda

ಇದರಿಂದಾಗಿ ಸಹಜವಾಗಿಯೇ ಬೇಡಿಕೆಯು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಘಟಕ ಸ್ಥಾಪಿಸಲು ಸಂಸ್ಥೆ ನಿರ್ಧರಿಸಿದೆ. ಹೋಂಡಾದ ಹೊಸ ಘಟಕವು ಗುಜರಾತ್‌ನ ವಿಠಾಲ್‌ಪುರದಲ್ಲಿ ಸ್ಥಿತಗೊಂಡಿರಲಿದೆ. ಈ ಮೂಲಕ 2,000ದಷ್ಟು ಉದ್ಯೋಗವಕಾಶ ಸೃಷ್ಟಿಸಲಾಗುವುದು.

ಗುಜರಾತ್ ದೇಶದ ವಾಹನೋದ್ಯಮದ ಕೇಂದ್ರವಾಗಿ ಬೆಳೆದು ಬರುತ್ತಿರುವ ಹಿನ್ನಲೆಯಲ್ಲಿ ಹೋಂಡಾ ಕೂಡಾ ಮೋದಿ ರಾಜ್ಯದಲ್ಲೇ ದೃಷ್ಟಿ ನೆಟ್ಟಿದೆ. ಸದ್ಯ ಆಕ್ಟಿವಾ, ಆವಿಯೇಟರ್, ಡಿಯೋ, ಆಕ್ಟಿವಾ 125 ಮತ್ತು ಆಕ್ಟಿವಾ ಐಗಳಂತಹ ಜನಪ್ರಿಯ ಸ್ಕೂಟರುಗಳನ್ನು ಹೊಂದಿರುವ ಹೋಂಡಾ, ಸಿಬಿಆರ್ 150ಆರ್, ಸಿಬಿಆರ್ 1350ಆರ್, ಸಿಬಿ ಟ್ರಿಗರ್, ಯುಬಿ ಯೂನಿಕಾರ್ನ್, ಸ್ಟನ್ನರ್, ಟ್ವಿಸ್ಟರ್, ಶೈನ್ ಮತ್ತು ನಿಯೋ ಪ್ರಯಾಣಿಕ ಬೈಕ್‌ಗಳನ್ನು ಹೊಂದಿದೆ.

English summary
Honda Motorcycle and Scooter India has a strong foothold in India. They offer a strong product portfolio for Indian customers. The Japanese automobile giant is a leader in scooter segment of India, no other manufacturer has come close to their dominance.
Story first published: Friday, October 3, 2014, 10:05 [IST]
Please Wait while comments are loading...

Latest Photos