ಮಹೀಂದ್ರ ರೋಡಿಯೊ ಸ್ಕೂಟರ್ ಲಾಂಚ್; ಬೆಲೆ 47,957 ರು.
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ಹೊಸತಾದ ರೋಡಿಯೊ ಯುಝಡ್ಒ 125 ಸ್ಕೂಟರನ್ನು ಮಾರುಕಟ್ಟೆಗೆ ತೆರೆದುಬಿಟ್ಟಿದೆ. ಇದರ ಬೆಲೆ 47,957 ರು.ಗಳಾಗಿರಲಿದೆ (ಎಕ್ಸ್ ಶೋ ರೂಂ ದೆಹಲಿ).
125 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ರೋಡಿಯೊ ಬಾಹ್ಯ ಭಾಗದಲ್ಲಿ ಇಂಧನ ತುಂಬುವಿಕೆ, ಶರೀರ ಬಣ್ಣದ ಪರಿಣಾಮ ನಿರೋಧಕ ಕನ್ನಡಿಗಳು, ಸಂಪೂರ್ಣ ಡಿಜಿಟಲ್ ಡ್ಯಾಶ್‌ಬೋರ್ಡ್ ಮುಂತಾದ ಅತ್ಯಾಕರ್ಷಕ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಇದು ತನ್ನ ಸಂಪೂರ್ಣ ಡಿಜಿಟಲ್ ಡ್ಯಾಶ್‌ಬೋರ್ಡ್‌ನಲ್ಲಿ ಸ್ಪೀಡೋಮೀಟರ್, ಟ್ಯಾಕೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಇಂಡಿಕೇಟರ್, ಗಡಿಯಾರ್, ಹೈ ಸ್ಪೀಡ್ ಅಲಾರ್ಮ್ ಮತ್ತು ಆಕ್ಸೆಲರೊಮೀಟರ್‌ಗಳನ್ನು ಒಳಗೊಂಡಿರಲಿದೆ.
ನೂತನ ರೋಡಿಯೊ 22 ಲೀಟರ್ ಸ್ಟೋರೆಜ್ ಜಾಗ ಸಹಿತ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಅಂತೆಯೇ ಡ್ಯುಯಲ್ ಟೋನ್ ಟೆಕ್ಚ್ಸರ್ ಆ್ಯಂಟಿ ಸ್ಲಿಪ್ ಸೀಟು, 4 ಇನ್ 1 ಆ್ಯಂಟಿ ಥೆಫ್ಟ್ ಕೀ ಮತ್ತು ಸೈಡ್ ಸ್ಟಾಂಡ್ ಬಝರ್ ಇರಲಿದೆ.
ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾಹಿತಿ ಪ್ರಕಾರ ಮಹೀಂದ್ರ ರೋಡಿಯೊ ಪ್ರತಿ ಲೀಟರ್‌ಗೆ 59 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಸ್ಪೋರ್ಟಿ ಗ್ರಾಫಿಕ್ಸ್ ಜೊತೆ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಬಣ್ಣಗಳು ಇಂತಿದೆ - ಬ್ಲೇಝಿಂಗ್ ಬ್ಲೂ, ಕಾಲ್ಟ್ ಬ್ಲ್ಯಾಕ್, ರೇಸ್ ಟ್ರ್ಯಾಕ್ ಬ್ಲ್ಯಾಕ್ ಮತ್ತು ವಿಕ್ಟರಿ ವೈಲಟ್.


Click it and Unblock the Notifications








