ಮಹೀಂದ್ರ ಬೈಕ್‌ಗಳಿಗೆ ಹೆಚ್ಚಿದ ಬೇಡಿಕೆ
ಮಹೀಂದ್ರ ಬೈಕ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ ಎಂಬುದು ಮಗದೊಮ್ಮೆ ಸಾಬೀತುಗೊಂಡಿದೆ. ಹೌದು, ಸೆಂಚುರೊ ಪ್ರಯಾಣಿಕ ಬೈಕ್ ನೆರವಿನೊಂದಿಗೆ 2014 ಫೆಬ್ರವರಿ ತಿಂಗಳ ಮಾರಾಟದಲ್ಲೂ ಮಹೀಂದರ್ ಟು ವೀಲರ್ಸ್ ಶೇಕಡಾ 207ರಷ್ಟು ಭರ್ಜರಿ ವೃದ್ಧಿ ಕಂಡುಕೊಂಡಿದೆ.
ಕಳೆದ ವರ್ಷ ಲಾಂಚ್ ಆಗಿರುವ ಸೆಂಚುರೊ ಅತ್ಯಾಧುನಿಕ ಫೀಚರ್ಸ್‌ಗಳನ್ನು ಹೊಂದಿರುವುದತ್ತಲ್ಲದೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಅವಧಿಯಲ್ಲಿ ಮಹೀಂದ್ರ 18,553 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಈ ಪೈಕಿ 17,848 ಯುನಿಟ್ ಭಾರತದಿಂದ ಸೇಲ್ ಆಗಿವೆ.
ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಎಂಸಿಐ-5 (ಮೈಕ್ರೋಚಿಪ್ ಇಗ್ನೈಟೆಡ್-5 ಕರ್ವ್) ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಸೆಂಚುರೊ ಗರಿಷ್ಠ ಇಂಧನ ಕ್ಷಮತೆ ನೀಡಲು ಸಕ್ಷಮವಾಗಿದೆ. ಭಾರತೀಯ ವಾಹನ ಅಧ್ಯಯನ ಪ್ರಕಾರ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡಲಿದೆ. ಅಲ್ಲದೆ ಉಚಿತ ಬ್ಯಾಟರಿ ನಿರ್ವಹಣೆ ಹಾಗೂ ಐದು ವರ್ಷಗಳ ವಾರಂಟಿ ಪ್ರದಾನ ಮಾಡಲಾಗುತ್ತದೆ.


Click it and Unblock the Notifications








