ಸುಜುಕಿ ವೆಬ್‌ಸೈಟ್‌ನಿಂದ ಇನಾಝುಮಾ ಕ್ರೂಸರ್ ಬೈಕ್ ಔಟ್

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇತ್ತೀಚೆಗಷ್ಟೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಸುಜುಕಿ ಇನಾಝುಮಾ ಕ್ರೂಸರ್ ಬೈಕ್ ನಿರೀಕ್ಷೆ ಮಾಡಿದಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಆರಂಭದಲ್ಲಿ ಮೂರು ಲಕ್ಷ ರು.ಗಳಷ್ಟು ದುಬಾರಿಯೆನಿಸಿದ್ದ ಈ ಬೈಕ್ (ಮುಂಬೈ ಎಕ್ಸ್ ಶೋರೂಂ ಬೆಲೆ) ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಜಪಾನ್ ಮೂಲದ ಐಕಾನಿಕ್ ಸಂಸ್ಥೆಯು ಏಕಾಏಕಿ ಒಂದು ಲಕ್ಷ ರು.ಗಳಷ್ಟು (2.21 ಲಕ್ಷ ರು. ಮುಂಬೈ ಎಕ್ಸ್ ಶೋರೂಂ) ದರ ಕಡಿತಗೊಳಿಸಿತ್ತು.


ಆದರೆ ಮಾರುಕಟ್ಟೆಯಲ್ಲಿ ಮಾತ್ರ ಯಾವುದೇ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಭರವಸೆ ಕಳೆದುಕೊಂಡಿರುವ ಸುಜುಕಿ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಇನಾಝುಮಾ ಬೈಕ್ ಅನ್ನು ಕಿತ್ತೊಗೆದಿದೆ.

ಅಂದ ಹಾಗೆ ಸುಜುಕಿ ಇನಾಝುಮಾ ಬೈಕನ್ನು ಭಾರತಕ್ಕೆ ಆಮದು ಮಾಡಲಾಗುತ್ತಿತ್ತು. ಆದರೆ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಭಾರಿ ವೈಫಲ್ಯ ಎದುರಿಸುವಂತಾಗಿತ್ತು.

Suzuki Inazuma

ಸುಜುಕಿ ಇನಾಝಮಾದಲ್ಲಿ 248 ಸಿಸಿ ಟ್ವಿನ್ ಎಂಜಿನ್ ಆಳವಡಿಸಲಾಗಿದ್ದು, 24 ಅಶ್ವಶಕ್ತಿ (22 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಅಷ್ಟಕ್ಕೂ ಭಾರತದಲ್ಲಿ ಇನಾಝುಮಾ ಮಾರಾಟವನ್ನು ನಿಲುಗಡೆಗೊಳಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಸಂಸ್ಥೆಯು ಈಗಲೂ ಇನಾಝುಮಾ ಬುಕ್ಕಿಂಗ್ ಅನ್ನು ಸ್ವೀಕರಿಸುತ್ತಿದೆ. ಈ ಬಗ್ಗೆ ಸಂಸ್ಥೆಯು ಇನ್ನಷ್ಟೇ ಸ್ಪಷ್ಟನೆ ನೀಡಲಾಗಿದೆ. ಇನ್ನೊಂದೆಡೆ ಸುಜುಕಿ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ಜಿಕ್ಸರ್ 150 ಸಿಸಿ ಬೈಕ್ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

More from DriveSpark

Article Published On: Wednesday, November 19, 2014, 12:54 [IST]
English summary
We now believe the Japanese manufacturer has lost hope in their project. They have removed the Inazuma from their official India website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+