ಬೈಕ್ ಅಲ್ಲ ಟಿವಿಎಸ್ ಭವಿಷ್ಯ ಸ್ಕೂಟರ್ ಮೇಲೆ ಅವಲಂಬಿಸಿದೆ?
ಅಪಾಚಿ, ಫೀನಿಕ್ಸ್, ಸ್ಟಾರ್ ಸಿಟಿ ಹಾಗೂ ಸ್ಪೋರ್ಟ್‌ಗಳಂತಹ ಜನಪ್ರಿಯ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಿರುವ ಟಿವಿಎಸ್ ಮೋಟಾರ್ಸ್ ಸಂಸ್ಥೆಯ ಭವಿಷ್ಯ ಸಂಪೂರ್ಣವಾಗಿಯೂ ಸ್ಕೂಟರುಗಳನ್ನು ಅವಲಂಬಿಸಿದೆ ಅಂಥ ಹೇಳಿದರೆ ನಂಬಲು ಸಾಧ್ಯವೇ?
ಹೌದು, ಬೈಕ್‌ಗಳನ್ನು ಪರಿಗಣಿಸಿದರೆ ಟಿವಿಎಸ್ ಸ್ಕೂಟರುಗಳು ಹೆಚ್ಚೆು ಒಳ್ಳೆಯ ಹೆಸರುಗಳನ್ನು ಉಳಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಮಾರುಕಟ್ಟೆ ಕುಸಿತದ ನಡುವೆಯೂ ಗಮನಾರ್ಹ ಮಾರಾಟವನ್ನು ಸಾಧಿಸುತ್ತಿದೆ.

ಟಿವಿಎಸ್ ಆಟೋಮ್ಯಾಟಿಕ್ ಸ್ಕೂಟರುಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ದೇಶದಲ್ಲಿ ಜೂಪಿಟರ್, ವಿಗೊ, ಸ್ಕೂಟಿ ಸ್ಕ್ರೀಕ್ ಮತ್ತು ಸ್ಕೂಟಿ ಪೆಪ್ ಪ್ಲಸ್ ಮಾದರಿಗಳು ಮಾರಾಟದಲ್ಲಿದೆ.
ಅಲ್ಲದೆ ಕಳೆದ 2014 ಆಟೋ ಎಕ್ಸ್‌ದಲ್ಲೂ ಅನೇಕ ಹೊಸ ಮಾದರಿಗಳನ್ನು ಪರಿಚಯಿಸಿತ್ತು. ಮೇಲೆ ತಿಳಿಸಿದ ಎಲ್ಲ ಮಾದರಿಗಳನ್ನು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ವಿವಿಧ ವಿಭಾಗಗಳಲ್ಲಾಗಿ ಮಾರಾಟದಲ್ಲಿದೆ.

ಅಂದ ಹಾಗೆ 2015ನೇ ಸಾಲು ಟಿವಿಎಸ್ ಪಾಲಿಗೆ ನಿರ್ಣಾಯಕವಾಗಲಿದೆ ಎಂದು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ. ಅದೇ ಹೊತ್ತಿಗೆ ಮುಂದಿನ ವರ್ಷಗಳಲ್ಲಿ ಹೆಚ್ಚು ಶಕ್ತಿಶಾಲಿ ಸ್ಕೂಟರ್ ಆಗಮನವಾಗಲಿದೆ ಎಂಬುದು ಇನ್ನಷ್ಟು ಕುತೂಹಲ ಕೆರಳಿಸುತ್ತಿದೆ.


Click it and Unblock the Notifications








