ಯಮಹಾದಿಂದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್ ಅಭಿವೃದ್ಧಿ

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ಹೊಸತಾದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರ್‌ನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಈ ಸಂಬಂಧ ಯುರೋಪ್ ಮತ್ತು ಅಮೆರಿಕದಲ್ಲಿ ಹಕ್ಕುಸ್ವಾಮ್ಯ ಪತ್ರವನ್ನು ಯಮಹಾ ಸಮರ್ಪಿಸಿರುವುದು ಇನ್ನಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಯಮಹಾ ಎಲೆಕ್ಟ್ರಿಕ್ ವಾಹನ ಇಸಿ-03 ತಲಹದಿಯಲ್ಲಿ ನಿರ್ಮಾಣವಾಗಲಿದೆ. ಇದು ಹಿಂದುಗಡೆ ಎರಡು ಚಕ್ರಗಳನ್ನು ಪಡೆಯಲಿದೆ.


ಟ್ರೈಸಿಟಿಯಂತೆಯೇ ಹೊಸತಾದ ವಿದ್ಯುತ್ ಚಾಲಿತ ಸ್ಕೂಟರ್ ಎಡಕ್ಕೂ ಬಲಕ್ಕೂ ಸರಳವಾಗಿ ಬಾಗಲಿದೆ. ಇದು ತಿರುವುಗಳಲ್ಲೂ ಸುರಕ್ಷಿತ ಹಾಗೂ ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

ಅಂದ ಹಾಗೆ ಯಮಹಾದ ಹೊಸ ಸ್ಕೂಟರ್ 'ಟ್ರೈಕ್' ಎಂದು ಹೆಸರಿಸಿಕೊಳ್ಳಲಿದೆ. ಅಂತೆಯೇ ಎರಡು ಹಬ್ ಮೋಟಾರುಗಳಿಂದ ನಿಯಂತ್ರಿಸಲ್ಪಡಲಿದೆ.

Yamaha

ಯಮಹಾದ ಇಸಿ-02 ವಿದ್ಯುತ್ ಚಾಲಿತ ಸ್ಕೂಟರ್‌ 1.8 ಅಶ್ವಶಕ್ತಿ (9.6 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಹೊಸತಾದ ಟ್ರೈಕ್‌ನಲ್ಲೂ ಇದನ್ನೇ ಮುಂದುವರಿಸುವ ಸಾಧ್ಯತೆಯಿದೆ.
Most Read Articles

Kannada
English summary
Yamaha, one of Japan's leading motorcycle manufacturers is working on its electric scooter lineup, and are now developing a new three-wheeled scooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X